ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೆಂಗಳೂರು ಎಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ಮಾರತಹಳ್ಳಿ ಎಸಿಪಿ ಶ್ರೀಮತಿ ಪ್ರಿಯದರ್ಶಿನಿ ಸಾನೆಕೊಪ್ಪ ಅವರ ನೇತೃತ್ವದಲ್ಲಿ ಎಚ್. ಎ. ಎಲ್ ಪೊಲೀಸ್ ಇನ್ಸ್ಪೆಕ್ಟರ್ ಅಜಾರಹುದ್ದಿನ್ ಜೊತೆಗೆ ಅತಿಥಿ ಗಣ್ಯರ ಜೊತೆಗೂಡಿ ಪೊಲೀಸ್ ಠಾಣೆ ಆವರಣದಲ್ಲಿ ಸಾಕಷ್ಟು ಸಸಿಗಳನ್ನು ನೆಡಲಾಯಿತು.

ಸಕಲ ಚರಾಚರ ಜೀವರಾಶಿಗಳಿಗಿರುವುದು ಒಂದೇ ಭೂಮಿ ದುರಾಸೆಗಾಗಿ ಕಲುಷಿತಗೊಳಿಸಿದರೆ ಜೀವರಾಶಿಗಳು ಭೂಮಿಯ ಮೇಲೆ ಬದುಕಲು ಸಾಧ್ಯವಿಲ್ಲ.
ಎಸಿಪಿ ಪ್ರಿಯದರ್ಶಿನಿ ಅವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. “ಪರಿಸರ ಜಾಗೃತಿ ಮೂಡಿಸುವುದು ಅಗತ್ಯ. ಯಾವುದೇ ಜೀವಿ ಬದುಕಲು ಸುತ್ತಮುತ್ತಲ ಉತ್ತಮ ಪರಿಸರ ಅವಶ್ಯಕ. ಇಲ್ಲದಿದ್ದರೆ ಜೀವಸಂಕುಲದ ಬದುಕಿಗೆ ಕುತ್ತು. ಮಳೆ, ಗಾಳಿ ಮುಂತಾದ ಪ್ರಕೃತಿದತ್ತ ಕ್ರಿಯೆ ಗೆ ಸೂಕ್ತ ಪರಿಸರವಿಲ್ಲದಿದ್ದರೆ ನಮ್ಮ ಬದುಕು ದುರಂತವಾಗಲಿದೆ” ಎಂದರು.
“ಪರಿಸರದ ಮೇಲೆ ಮಾನವ ದೌರ್ಜನ್ಯ ನಿತ್ಯ ನಡೆದರೆ ಊಟವಿರಲಿ, ಶುದ್ಧಗಾಳಿ ಸಿಗದಂತಹ ಪರಿ ಸ್ಥಿತಿಯಿದೆ. ಹಾಗಾಗಿ ನಾವುಗಳು ಪರಿಸರ ಉಳಿವಿಗೆ ನಮ್ಮ ಕೈಲಾದ ಕೊಡುಗೆ ನೀಡಬೇಕು. ಮನಯಂಗಳ ಅಥವಾ ಸುತ್ತಮುತ್ತಲ ಖಾಲಿ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಮುಂದಾಗಬೇಕಿದೆ” ಎಂದರು.
“ಪರಿಸರ ಸಂರಕ್ಷಣೆ ದಿನಾಚರಣೆಯು ಕೇವಲ ಒಂದು ದಿನಕ್ಕೆ ಸೀಮಿತವಾಗದೇ ನಿತ್ಯ ಪ್ರಕೃತಿಯನ್ನು ಸಂರಕ್ಷಿಸುವ ಹೊಣೆಯಾಗಬೇಕು. ಪರಿಶುದ್ಧ ಆಮ್ಲಜನಕ ಹಾಗೂ ಸುಂದರ ವಾತಾವರಣ ನಿರ್ಮಾಣ ಕ್ಕೆ ಪರಿಸರ ಅತ್ಯಂತ ಪೂರಕ. ಆ ನಿಟ್ಟಿನಲ್ಲಿ ಸಮಾಜದ ನಾಗರೀಕರು ಹೆಚ್ಚೆಚ್ಚು ಪರಿಸರದ ಪ್ರಜ್ಞೆ ಮೂಡಿಸಿ ಕೊಳ್ಳಬೇಕು” ಎಂದರು.
“ಯುವಪೀಳಿಗೆಗೆ ಹೆಚ್ಚೆಚ್ಚು ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ಪರಿಸರ ಉಳಿದರೆ ಜೀವರಾಶಿ ಉಳಿದಂತೆ ಎಂಬ ತತ್ವಸಂದೇಶವನ್ನು ಆಳವಾಗಿ ಅಳವಡಿಸಿಕೊಂಡಾಗ ಮಾತ್ರ ಸುಂ ದರ ಜಗತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯ” ಎಂದರು.
“ಪರಿಸರದಿಂದ ಗಾಳಿ, ನೀರು, ಆಹಾರ ಸೇರಿದಂತೆ ಹಲ ವಾರು ಸೌಲಭ್ಯ ಪಡೆದುಕೊಳ್ಳುವ ಮಾನವರು. ಜೊತೆಗೆ ಪರಿಸರಕ್ಕೆ ಪೂರಕವಾಗಿ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
“ಹಸಿರು ನಮ್ಮ ಉಸಿರು ನಮ್ಮ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಎಸಿಪಿ ಪ್ರಿಯದರ್ಶಿನಿ” ಅವರು ಹೇಳಿದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


