500 ವರ್ಷಗಳ ಬಳಿಕ ನಿರ್ಮಾಣವಾದ ರಾಮಮಂದಿರದಿಂದ ಖುಷಿಗೊಂಡ ಹಿಂದೂ ಸಮುದಾಯದ ಈ ಖುಷಿಯೇ ಮತವಾಗಿ ಬದಲಾಗಿ ಮುಂದೆ ಭಾರಿ ಬಹುಮತದೊಂದಿಗೆ ಕೇಂದ್ರದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ಎಂದೇ ನಂಬಲಾಗಿತ್ತು. ಆದರೆ ಮಂದಿರ ಉದ್ಘಾಟನೆಯಾಗಿ ಕೇವಲ 4 ತಿಂಗಳ ಅಂತರದಲ್ಲಿ ನಡೆದ ಚುನಾವಣೆಯಲ್ಲಿ ರಾಮನ ನೆಲದಲ್ಲಿಯೇ ಬಿಜೆಪಿ ಹೀನಾಯವಾಗಿ ಸೋತಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಜೊತೆ ಜೊತೆಗೆ ಅಲ್ಲಿ ಅಂತಾರಾಷ್ಟ್ರೀಯ ಏರ್’ಪೋರ್ಟ್‌ನ್ನು ನಿರ್ಮಿಸಲಾಗಿತ್ತು ಅಲ್ಲಿಗೆ ರೈಲು ಸೇವೆಗಳನ್ನು ಹೆಚ್ಚು ಮಾಡಲಾಗಿತ್ತು. ಇಷ್ಟೆಲ್ಲಾ ಅಭಿವೃದ್ಧಿ ಮಾಡಿದ ನಂತರವೂ ರಾಮ ನಗರಿಯಲ್ಲಿ ಏಕೆ ಸೋತಿತು? ಅಲ್ಲಿನ ಸ್ಥಳೀಯರು ಈ ಬಗ್ಗೆ ಹೇಳೋದೆನು?
ಅಯೋಧ್ಯೆಯ ಸ್ಥಳೀಯ ಸಮಸ್ಯೆಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾಯಕರ ಗಮನಕ್ಕೆ ಬಾರದೇ ಹೋಯ್ತು. ರಾಮ ಮಂದಿರ ಹಾಗೂ ಅಯೋಧ್ಯೆಯ ವಿಮಾನ ನಿಲ್ದಾಣದ ಸುತ್ತಮುತ್ತ ನಡೆಯುತ್ತಿರುವ ಭೂಸ್ವಾಧೀನದ ವಿರುದ್ಧ ಅಯೋಧ್ಯೆಯ ಹಲವು ಗ್ರಾಮಗಳ ಜನ ತೀವ್ರ ಆಕ್ರೋಶಗೊಂಡಿದ್ದರು.
ನಿರುದ್ಯೋಗ, ಹಣದುಬ್ಬರ, ಭೂಸ್ವಾಧೀನದ ಕೋಪದ ಜೊತೆಗೆ ಬಿಜೆಪಿಯ ಅಭ್ಯರ್ಥಿ ಲಲ್ಲು ಸಿಂಗ್ ಕೂಡ ಇಲ್ಲಿ ಮತ ಪ್ರಚಾರದ ವೇಳೆ ಸಂವಿಧಾನ ಬದಲಿಸುವ ಮಾತಾಡಿದ್ದರು. ಸಂವಿಧಾನ ಬದಲಿಸುವ ಮಾತು ಕೂಡ ಇಲ್ಲಿ ಬಿಜೆಪಿಗೆ ತಿರುಗುಬಾಣವಾಗಿದೆ.
‘ಲಲ್ಲು ಸಿಂಗ್ ವಿರುದ್ಧ ಸಾಕಷ್ಟು ಆಡಳಿತ ವಿರೋಧಿ ಅಲೆ ಇತ್ತು. ಅವರು ಅಯೋಧ್ಯೆಯ ಜನರಿಗಾಗಿ ಯಾವುದೇ ಕೆಲಸ ಮಾಡಿಲ್ಲ. ಅಯೋಧ್ಯೆಯ ಜನರಿಗಾಗಿ ಕೆಲಸ ಮಾಡುವುದನ್ನು ಬಿಜೆಪಿ ಮರೆತಿದೆ, ಅದರ ಜೊತೆಗೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿ ಲಲ್ಲು ಸಿಂಗ್ ಸ್ಥಳೀಯರ ಕೋಪಕ್ಕೆ ತುತ್ತಾದರು’. ರಾಮ ನಮ್ಮ ಆರಾಧ್ಯ ದೇವ ಆದರೆ ನಮ್ಮ ಜೀವನೋಪಾಯವನ್ನೇ ಅದಕ್ಕಾಗಿ ಕಸಿದುಕೊಂಡರೆ ನಾವು ಬದುಕುವುದು ಹೇಗೆ? ರಾಮಪಥದ ನಿರ್ಮಾಣದ ವೇಳೆ ಇಲ್ಲಿನ ಸ್ಥಳೀಯರಿಗೆ ಅಂಗಡಿ ನಿರ್ಮಿಸುವುದಕ್ಕೆ ಅವಕಾಶ ಮಾಡಿಕೊಡುವುದಾಗಿ ಹೇಳಲಾಯ್ತು ಆದರೆ ಅದಾವುದು ಆಗಲೇ ಇಲ್ಲ’ ಎಂದು ಅಲ್ಲಿನ ಸ್ಥಳಿಯರು ಹೇಳುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


