ತುಮಕೂರು: ತುಮಕೂರಿನಲ್ಲಿ ನಿಲ್ಲದ ಮಳೆ ರಗಳೆಯಾಗಿದ್ದು ಕೆರೆಯಂತಾದ ಯಲ್ಲಾಪುರಕ್ಕೆ ಹೋಗುವ ಅಂಡರ್ ಪಾಸ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.
ಮಳೆ ನೀರಿನಲ್ಲಿ ವಾಹನ ಸವಾರರ ಪರದಾಡುವಂತಾಗಿತ್ತು. ಅಂತರಸನಹಳ್ಳಿ ಅಂಡರ್ ಪಾಸ್ ಜಲಾವೃತವಾಗಿದ್ದು, ವಾಹನಗಳು ನೀರಿನಲ್ಲೇ ನಿಲ್ಲುವಂತಾಗಿತ್ತು.
ಪಾವಗಡ, ಮಧುಗಿರಿ, ಕೊರಟಗೆರೆಗೆ ಹೋಗುವ ಪ್ರಯಾಣಿಕರ ಪರದಾಡಿದರು. ರಾಷ್ಟ್ರೀಯ ಹೆದ್ದಾರಿ 4ಕ್ಕೆ ಅಡ್ಡಲಾಗಿ ನಿರ್ಮಿಸಿರುವ ಅಂಡರ್ ಪಾಸ್ ಇದಾಗಿದ್ದು, ಅಂಡರ್ ಪಾಸ್ ನಿಂದ ನೀರು ಹೊರಗೆ ಹೋಗದೆ ಅಂಡರ್ ಪಾಸ್ ಜಲಾವೃತವಾಗಿದ್ದು, ನೀರಿನಲ್ಲೇ ಓಡಾಡುತ್ತಿರುವ ಕಾರು, ಬಸ್ ಸಾಮಾನ್ಯವಾಗಿತ್ತು.
ಪ್ರತಿ ಬಾರಿ ಮಳೆ ಬಂದಾಗಲೂ ಜಲಾವೃತ್ತವಾಗುವ ಅಂಡರ್ ಪಾಸ್ ಕುರಿತು ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


