ವಿಜ್ಞಾನದ ಪ್ರಕಾರ ಹಿರಿಯರ ಕಾಲಿಗೆ ಬಿದ್ದು ನಮಸ್ಕರಿಸುವುದರಿಂದ ದೇಹದಲ್ಲಿ ರಕ್ತದ ಸಂಚಲನ ಆಗುತ್ತದೆ ಇದರಿಂದ ಹೃದಯ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಹಿರಿಯರ ಪಾದವನ್ನು ಸ್ಪರ್ಶಿಸಿ ಆಶೀರ್ವಾದವನ್ನು ಹಿಂದಿನಿಂದಲೂ ಪಡೆದುಕೊಳ್ಳುತ್ತಾ ಬಂದಿದ್ದೇವೆ ಆದರೆ ಮೂರು ವ್ಯಕ್ತಿಗಳ ಕಾಲಿಗೆ ಎಂದಿಗೂ ಬೀಳಬಾರದು !
ಹಿರಿಯರ ಪಾದ ಮುಟ್ಟಿ ನಮಸ್ಕರಿಸಿದರೆ ಆ ವ್ಯಕ್ತಿಗೆ ಶಕ್ತಿ, ಜ್ಞಾನ, ವಿದ್ಯೆ ಮತ್ತು ಪ್ರಸಿದ್ಧಿ ಪ್ರಾಪ್ತಿಯಾಗುತ್ತೆ. ಇದರರ್ಥ ಹಿರಿಯರು ಈ ಜಗತ್ತಿನಲ್ಲಿ ನಮಗಿಂತಲೂ ಅನುಭವಸ್ಥರಾಗಿರುತ್ತಾರೆ. ಹಾಗೆ ಹೆಚ್ಚಿನ ಜ್ಞಾನ ಸಂಪಾದನೆ ಮಾಡಿರುತ್ತಾರೆ. ಸಮಾಜದ ಒಳಿತಿಗಾಗಿ ಶ್ರಮವಹಿಸ್ತಾ ಇರೋರಿಗೆ ನಮಿಸೋದ್ರಲ್ಲಿ ಅರ್ಥವಿದೆ. ತಿಳುವಳಿಕೆ ಇಲ್ದೆ ಮೂರ್ಖತನದಿಂದ ವರ್ತಿಸುವ ವ್ಯಕ್ತಿಗಳು, ಸಮಾಜಘಾತಕರು, ಕೇವಲ ಹಣದಿಂದಲೇ ಶ್ರೀಮಂತರಾಗಿದ್ದು ಕೆಟ್ಟ ಗುಣ ಹೊಂದಿರುವ ವ್ಯಕ್ತಿಗಳು, ಬೇರೆಯವರಿಗೆ ಕೆಡುಕು ಬಯಸುವ ವ್ಯಕ್ತಿಗಳಿಗೆ ಯಾವುದೇ ಮಹತ್ವ ಕೊಡೋ ಅಗತ್ಯವಿಲ್ಲ ಅಂತಾರೆ ಆಚಾರ್ಯ ಚಾಣಕ್ಯರು.
ಆಚಾರ್ಯ ಚಾಣಕ್ಯರ ಪ್ರಕಾರ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಂಡರೆ ಅವರ ಜ್ಞಾನ,ಬುದ್ಧಿ, ಪ್ರಸಿದ್ದಿ ಪ್ರಾಪ್ತಿಯಾಗುತ್ತದೆ. ಆಚಾರ್ಯ ಚಾಣಕ್ಯರ ಪ್ರಕಾರ ದ್ರೋಹಿಗಳು, ಕಪಟ ಮನಸ್ಸಿನವರು, ಹಣದಿಂದ ಶ್ರೀಮಂತರಾಗಿರುವವರು ಹಾಗೂ ಒಳ್ಳೆಯ ಮನಸ್ಸನ್ನು ಹೊಂದದೆ ಇರುವವರ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಂಡರೆ ಅದರಿಂದ ದೌರ್ಭಾಗ್ಯ ಬರುತ್ತದೆಯೇ ಹೊರತು ಯಾವುದೇ ರೀತಿಯ ಒಳ್ಳೆಯ ಶುಭಫಲಗಳು ಲಭಿಸುವುದಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


