ಹೊಸ ಸಂಸದರು ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿದ್ದು, ಸಂಸದರಿಗೆ ಸಿಗುವ ಸಂಬಳ ಎಷ್ಟು? ಭತ್ಯೆ, ಇತರ ಸೌಲಭ್ಯಗಳು ಯಾವುದು ಎಂಬುದು ಮಾಹಿತಿ ಇಲ್ಲಿದೆ.
ಒಬ್ಬ ಸಂಸದರ ಬೇಸಿಕ್ ಸಂಬಳ ತಿಂಗಳಿಗೆ ಒಂದು ಲಕ್ಷ ರೂಪಾಯಿ. ಹಣದುಬ್ಬರ, ಜೀವನ ನಿರ್ವಹಣೆಯ ಆಧಾರದ ಮೇಲೆ 2018ರಲ್ಲಿ ಪರಿಷ್ಕೃತಗೊಂಡ ವೇತನ ಹೆಚ್ಚಳದ ಬಳಿಕದ ಅಂಕಿ-ಅಂಶ(ಸಂಬಳ) ಇದಾಗಿದೆ.
ಸಂಸತ್ ಕಲಾಪ, ಸಮಿತಿ ಸಭೆಗೆ ಹಾಜರಾಗುವ ವೇಳೆ ಸಂಸದರಿಗೆ ಪ್ರತಿದಿನ 2,000 ಸಾವಿರ ರೂಪಾಯಿ ಭತ್ಯೆ ಲಭ್ಯವಾಗಲಿದೆ. ಇದು ಊಟೋಪಚಾರ, ವಸತಿಯ ಖರ್ಚನ್ನು ಒಳಗೊಂಡಿದೆ.
ಒಬ್ಬ ಸಂಸದರು ಕಚೇರಿ ನಿರ್ವಹಣೆಗಾಗಿ ಪ್ರತಿ ತಿಂಗಳು 60,000 ರೂಪಾಯಿ ಪಡೆಯುತ್ತಾರೆ. ಸ್ಟೇಷನರಿ, ದೂರವಾಣಿ ಸಂಪರ್ಕ, ಕಚೇರಿ ಸಿಬಂದಿಗಳ ಸಂಬಳ ಇದರಲ್ಲಿ ಸೇರಿದೆ.
ಒಬ್ಬ ಸಂಸದರು ಕ್ಷೇತ್ರದ ಭತ್ಯೆಯಾಗಿ ಪ್ರತಿ ತಿಂಗಳು 70,000 ರೂಪಾಯಿ ಪಡೆಯುತ್ತಾರೆ. ಕಚೇರಿ ನಿರ್ವಹಣೆ ಹಾಗೂ ಕ್ಷೇತ್ರದೊಳಗಿನ ತಿರುಗಾಟದ ಖರ್ಚು-ವೆಚ್ಚ ಇದರಲ್ಲಿ ಸೇರ್ಪಡೆಯಾಗಲಿದೆ.
ಸಂಸದರಿಗೆ ಪ್ರತಿವರ್ಷ ತಾವೂ ಸೇರಿದಂತೆ ಕುಟುಂಬ ಸದಸ್ಯರು 34 ಬಾರಿ ಉಚಿತವಾಗಿ ವಿಮಾನ ಪ್ರಯಾಣ ಕೈಗೊಳ್ಳಬಹುದು. ಅದೇ ರೀತಿ ವೈಯಕ್ತಿಕವಾಗಿ ಹಾಗೂ ಸಂಸದರ ಕಾರ್ಯಗಳಿಗಾಗಿ ಉಚಿತವಾಗಿ ಫಸ್ಟ್ ಕ್ಲಾಸ್ ರೈಲು ಪ್ರಯಾಣ ಮಾಡಬಹುದು. ಅಷ್ಟೇ ಅಲ್ಲ ತಮ್ಮ ಕ್ಷೇತ್ರ ಸುತ್ತಾಟಕ್ಕಾಗಿ ಮೈಲೇಜ್ ಭತ್ಯೆಯನ್ನು ಪಡೆಯಬಹುದಾಗಿದೆ.
ಸಂಸದರು ಮತ್ತು ಅವರ ಕುಟುಂಬ ಸದಸ್ಯರು ಸೆಂಟ್ರಲ್ ಗವರ್ನಮೆಂಟ್ ಹೆಲ್ತ್ ಸ್ಕೀಮ್ ( CGHS) ನಡಿ ಉಚಿತ ಔಷಧೋಪಚಾರ ಪಡೆಯಬಹುದು. ಈ ಯೋಜನೆಯಡಿ ಸರ್ಕಾರಿ ಅಥವಾ ಆಯ್ದ ಖಾಸಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಐದು ವರ್ಷಗಳ ಕಾಲಾವಧಿಯಲ್ಲಿ ಸಂಸದರಿಗೆ ಪ್ರಮುಖ ಸ್ಥಳಗಳಲ್ಲಿ ಬಾಡಿಗೆ ರಹಿತ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಸಂಸದರು ಬಂಗ್ಲೆ, ಫ್ಲ್ಯಾಟ್ ಅಥವಾ ಹಾಸ್ಟೆಲ್ ರೂಂ ಪಡೆದುಕೊಳ್ಳಬಹುದಾಗಿದೆ. ಯಾವ ಸಂಸದರು Official ನಿವಾಸವನ್ನು ಬಳಸಲು ಇಷ್ಟಪಡದಿದ್ದಲ್ಲಿ ಅವರು ಪ್ರತಿ ತಿಂಗಳು ಹೌಸಿಂಗ್ ಭತ್ಯೆಗಾಗಿ 2,00,000 ಲಕ್ಷ ರೂಪಾಯಿ ಪಡೆದುಕೊಳ್ಳಬಹುದಾಗಿದೆ.
ಸಂಸದರುಗಳಿಗೆ ವಾರ್ಷಿಕವಾಗಿ 50,000 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಹಾಗೂ 4,000 ಸಾವಿರ ಲೀಟರ್ ಉಚಿತ ನೀರು ಪಡೆಯಬಹುದಾಗಿದೆ. ಸಂಸದರು ವಾರ್ಷಿಕವಾಗಿ 1,50,000 ಸಾವಿರ ಉಚಿತ ದೂರವಾಣಿ ಕರೆ ಮಾಡಲು ಅವಕಾಶವಿದೆ. ಅದೇ ರೀತಿ ಉಚಿತ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಮನೆ ಮತ್ತು ಕಚೇರಿಗಳಿಗೆ ನೀಡಲಾಗುತ್ತದೆ.
ಒಂದು ಅವಧಿಗೆ ಸಂಸದರಾದ ಮಾಜಿ ಸದಸ್ಯರು ಪ್ರತಿ ತಿಂಗಳು 25,000 ರೂಪಾಯಿ ಪಿಂಚಣಿ ಪಡೆಯುತ್ತಾರೆ. ಪ್ರತಿ ಹೆಚ್ಚುವರಿ ವರ್ಷದ ಸೇವೆಗಾಗಿ ಪ್ರತಿ ತಿಂಗಳು 2,000 ಸಾವಿರ ರೂಪಾಯಿ ಹೆಚ್ಚುವರಿಯಾಗಿ ಪಡೆಯಲಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


