ತಿಪಟೂರು: ತಿಪಟೂರು ನಗರದ ಪುರಾತನ ಕಾಲದ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಹೆಸರಿನಲ್ಲಿ, ದೇವಸ್ಥಾನದ ಆವರಣದಲ್ಲಿ ಹಳ್ಳಿ ಮರ, ಬೇವಿನ ಮರ, ಹತ್ತಿಮರ, ಬಿಲ್ಪತ್ರೆ ಮರ ಹಾಗೂ ಬನ್ನಿಮರಗಳಿದ್ದು ಹತ್ತಾರು ವರ್ಷಗಳಿಂದ ಭಕ್ತರು ಇವುಗಳನ್ನು ಪೂಜಿಸಿಕೊಂಡು ಬರುತ್ತಿದ್ದಾರೆ.
“ದೇವರ ಹೆಸರಿನ ಅಭಿವೃದ್ಧಿಯಲ್ಲಿ ಪೌಳಿ ನಿರ್ಮಿಸಲು ಅಡ್ಡವಾಗುತ್ತಿದೆ ಎಂದು, ಇಂಥ ಫಲವತ್ತಾದ ದೈವಿಕ ಮರಗಳನ್ನು ಕಡಿಸಲು ಯಾವುದೇ ಕಾರಣಕ್ಕೆ ಬಿಡುವುದಿಲ್ಲ” ಎಂದು ಬಿಜೆಪಿ ಮುಖಂಡ ಲೋಕೇಶ್ವರ್ ತಿಳಿಸಿದರು.
“ಮೊನ್ನೆ ತಾನೆ ಪರಿಸರ ದಿನಾಚರಣೆ ನಡೆದಿದ್ದು ಎಲ್ಲಾ ಕಡೆ ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸಲು ಅರಿವು ಮೂಡಿಸುತ್ತಾರೆ. ಮರುದಿನವೇ 40 ರಿಂದ 50 ವರ್ಷದ ಮರಗಳನ್ನು ಕಡಿಸಲು ಪ್ರಯತ್ನಿಸುತ್ತಾರೆ” ಎಂದು ಲೋಕೇಶ್ವರ್ ತಿಳಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಮಾಜಿ ನಗರಸಭೆ ಮಾಜಿ ಉಪಾಧ್ಯಕ್ಷ ಸೊಪ್ಪ ಗಣೇಶ್ ಅಯ್ಯಪ್ಪ ಸ್ವಾಮಿ ಭಕ್ತರು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


