ಸರಗೂರು: ತಾಲ್ಲೂಕಿನ ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ನೋಟ್ ಪುಸ್ತಕ, ಇಂಗ್ಲಿಷ್ ಡಿಕ್ಷನರಿ, ಪೆನ್ಸಿಲ್ ಮತ್ತು ಸಿಹಿ ಲಡ್ಡು ಹಂಚುವ ಮೂಲಕ ಪಿ.ಸಿ.ಸಿ. ರಾಜ್ಯ ಉಪಾಧ್ಯಕ್ಷರು, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ರವರ ಹುಟ್ಟುಹಬ್ಬವನ್ನು ಶನಿವಾರ ದಂದು ಆಚರಿಸಲಾಯಿತು.
ನಂತರ ರಾಜೀವ್ ಗಾಂಧಿ ಪಂಚಾಯತ್ ರಾಜ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಗ್ರಾಮೀಣ ಮಹೇಶ್ ಮಾತನಾಡಿ, “ನಂಜುಂಡಸ್ವಾಮಿರವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ವಂಚಿತರಾದ ನಂತರ, ನಡೆದ ವಿಧಾನ ಪರಿಷತ್ ಸದಸ್ಯ ಸ್ಥಾನದ ಆಕಾಂಕ್ಷಿಯೂ ಆಗಿದ್ದರು.
ಆದರೆ ಯಾವುದೇ ಅವಕಾಶಗಳು ಇವರಿಗೆ ಲಭಿಸಲಿಲ್ಲ. ಇದರ ನಡುವೆ ಬೆಂಗಳೂರಿನಲ್ಲಿ ಕಾರು ಅಪಘಾತಕ್ಕೆ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿ ಪುನರ್ಜನ್ಮವನ್ನು ಪಡೆದವರಾಗಿದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲಿ ರಾಜಕೀಯ ಪುನರ್ಜನ್ಮ ತಾಳಲಿ ಎಂದು ಆಶಿಸುತ್ತಾ ಹುಟ್ಟು ಹಬ್ಬದ ಶುಭಾಶಯಗಳು ಕೋರುತ್ತಿದ್ದೇವೆ” ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸೇವಾದಳ ತಾಲ್ಲೂಕು ಕಾರ್ಯಕರ್ತ ಕೊತ್ತೇಗಾಲ ಅನುಪ್, ಮುಖಂಡರು ದೊಡ್ಡಯ್ಯ, ಸಿದ್ದರಾಜು, ಚಿನ್ನಯ್ಯ, ಇನ್ನೂ ಮುಖಂಡರು ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಹಾದನೂರು ಚಂದ್ರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


