ವಿಚ್ಛೇದನ ಅರ್ಜಿ ಸಲ್ಲಿಸಿದ್ದರೆ ತಿಂಗಳಾನುಗಟ್ಟಲೇ, ವರ್ಷಗಟ್ಟಲೇ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತೆ. ಆದರೆ, ಚಂದನ್ ಶೆಟ್ಟಿ ನಿವೇದಿತಾ ದಂಪತಿ ವಿಚ್ಛೇದನ ಮಾತ್ರ ಒಂದೇ ದಿನದಲ್ಲಿ ಆಗಿದೆ. ಫ್ಯಾಮಿಲಿ ಕೋರ್ಟ್‌ನ 13ಬಿ ಸೆಕ್ಷನ್ ನಲ್ಲಿ ಒಂದೇ ದಿನದಲ್ಲಿ ವಿಚ್ಚೇದನ ದೊರೆಯುತ್ತದೆಯೇ ?
ಗಂಡ-ಹೆಂಡತಿಗೆ ಜತೆಯಾಗಿ ಬದುಕಲು ಕಷ್ಟವಾಗುತ್ತಿದೆ ಎಂದಾಗ ಅತ್ಯಂತ ಸುಲಭವಾಗಿ ಹಾಗೂ ತ್ವರಿತವಾಗಿ ವಿಚ್ಛೇದನ ಪಡೆಯುವ ಮಾರ್ಗ ಇದು. ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್ 13ಬಿಯು ಫ್ಯಾಮಿಲಿ ಕೋರ್ಟ್‌ನಲ್ಲಿ ದಂಪರಿಗಳಿಗೆ ಸಮ್ಮತಿಯ ಒಪ್ಪಿಗೆ ನೀಡಿ ಡಿವೋರ್ಸ್ ಪಡೆಯಲು ಅವಕಾಶ ದಯಪಾಲಿಸುತ್ತದೆ. ಇದಕ್ಕಾಗಿ ಗಂಡ-ಹೆಂಡತಿ ಇಬ್ಬರೂ ಮ್ಯೂಚುವಲ್ ಕನ್ಸೆಂಟ್ ಅಂದರೆ ಶಾಂತಿಯುತ ಪ್ರತ್ಯೇಕತೆಗೆ ಒಪ್ಪಿಗೆ ನೀಡುವ ಅಗ್ರಿಮೆಂಟ್ ಅನ್ನು ಕೋರ್ಟ್‌ಗೆ ನೀಡಬೇಕು. 1976ರ ಮೇ 27 ರಂದು ಹಿಂದೂ ವಿವಾಹ ಕಾಯಿದೆಯಲ್ಲಿ ಈ ನಿಬಂಧನೆಯನ್ನು ಸೇರಿಸಲಾಗಿದೆ.
ಈ ಕನ್ಸೆಂಟ್ ಫಾರ್ಮ್ ನಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಕೆ ಮಾಡಬೇಕಾದಲ್ಲಿ ಎರಡೂ ಕಡೆಯವರು ಕೆಲವೊಂದು ಷರತ್ತುಗಳನ್ನು ಪಾಲನೆ ಮಾಡಬೇಕಾಗುತ್ತದೆ. ಇಬ್ಬರೂ ಕೂಡ ಕಳೆದೊಂದು ವರ್ಷದಿಂದ ಒಟ್ಟಿಗೆ ವಾಸ ಮಾಡುತ್ತಿರುವ ಮಾಹಿತಿ ನೀಡಬೇಕು. ಮದುವೆ ಮುರಿಯುವ ಮಾತಿಗೆ ಇಬ್ಬರದೂ ಬೇಷರತ್ ಒಪ್ಪಿಗೆ ಇರಬೇಕು. ತೀರಾ ಕೆಲವೊಂದು ಸಂದರ್ಭದಲ್ಲಿ ಮಾತ್ರವೇ 1 ವರ್ಷ ಒಟ್ಟಿಗೆ ಬಾಳುವ ಕ್ಲಾಸ್ ಅನ್ನು ಕೋರ್ಟ್ ತೆಗೆದುಹಾಕುತ್ತದೆ. ಇನ್ನೂ ಕೆಲವೊಂದು ಷರತ್ತಿನಲ್ಲಿ ತುರ್ತು ವಿಚ್ಛೇದನ ಸಿಗುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


