ತುಮಕೂರು: ಎಕ್ಸ್ ಪ್ರೆಸ್ ಕೆನಾಲ್ ಪೈಪ್ ಲೈನ್ ಮುಖಾಂತರ ರಾಮನಗರ ಜಿಲ್ಲೆಗೆ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗಲು ಕಿಲೋಮೀಟರ್ 70 ರಿಂದ ಆರಂಭವಾಗಿರುವ ಕಾಮಗಾರಿಯನ್ನು ತಕ್ಷಣ ನಿಲ್ಲಿಸಲು ತುಮಕೂರಿನ ವಿವಿಧ ಮಠಗಳ ಸ್ವಾಮೀಜಿಗಳು, ಮುಖಂಡರಾದ ಸೊಗಡು ಶಿವಣ್ಣ, ಎಂ.ಟಿ.ಕೃಷ್ಣಪ್ಪ, ಎಸ್ ಡಿ ದಿಲೀಪ್ ಕುಮಾರ್ ದನಿಯಕುಮಾರ್ ಇತರೆ ಸಂಘ ಸಂಸ್ಥೆಗಳ ಮುಖಂಡರುಗಳು ಬೆಂಬಲ ಕೋರಿದರು.
ಹೇಮಾವತಿ ಯೋಜನೆ ಆಡಿ ತುಮಕೂರು ಜಿಲ್ಲೆಗೆ ೨೫ ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿರುವುದು ಸರಿ ಅಷ್ಟೇ.? ಆದರೆ ಇದುವರೆಗೂ ಕೂಡ ಯಾವ ವರ್ಷದಲ್ಲೂ ತುಮಕೂರು ಜಿಲ್ಲೆಗೆ ಲಭ್ಯವಾಗಿರುವ ನೀರಿನ ಪ್ರಮಾಣಕ್ಕೆ ಅನುಸಾರವಾಗಿ ಒಂದು ವರ್ಷವೂ ಕೂಡ 25 ಟಿಎಂಸಿ ನೀರು ತುಮಕೂರು ಜಿಲ್ಲೆಗೆ ಬಂದಿರುವುದಿಲ್ಲ. 25 ಟಿಎಂಸಿ ನೀರಿನಲ್ಲಿ ನೀರಾವರಿ ಯೋಜನೆಗಳು ಹಾಗೂ ಕುಡಿಯುವ ನೀರಿನ ಯೋಜನೆಗಳು ಸೇರ್ಪಡೆಗೊಂಡಿರುತ್ತವೆ. ನೀರಿನ ಅಭಾವದಿಂದ. ಈ ಎಲ್ಲ ಯೋಜನೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುತ್ತವೆ.
ಮಳೆಯ ಪ್ರಮಾಣ ಕಡಿಮೆಯಾದಂತ ವರ್ಷಗಳಲ್ಲಿ ತೀವ್ರ ಸಂಕಷ್ಟಕ್ಕೆ ತುಮಕೂರು ಜಿಲ್ಲೆ ಸಿಲುಕಿದೆ. ಪರಿಸ್ಥಿತಿ ಈಗಿರುವಾಗ ಹೇಮಾವತಿ ಯೋಜನೆ ಎಪ್ಪತ್ತು ಕಿಲೋಮೀಟರ್ ನಿಂದ ಸುಮಾರು 35.4 ಕಿಲೋಮೀಟರ್ ಉದ್ದದ ಪೈಪ್ ಲೈನ್ ಲಿಂಕ್ ಎಕ್ಸ್ಟ್ರೆಸ್-ಕಾಮಗಾರಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿದೆ. ಈ ಮೂಲಕ ರಾಮನಗರ ಜಿಲ್ಲೆಗೆ ಹೇಮಾವತಿ ನೀರನ್ನು ಕೊಂಡೊಯ್ಯುವ ಕಾರ್ಯಕ್ರಮವನ್ನು ಸರ್ಕಾರಿ ಈಗಾಗಲೇ ಕೈಗೆತ್ತಿಕೊಂಡಿದ್ದು ಕೆಲಸವು ಕೂಡ ಪ್ರಾರಂಭವಾಗಿರುತ್ತದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಈ ಯೋಜನೆಯಿಂದಾಗಿ ತುಮಕೂರು ಜಿಲ್ಲೆಗೆ ಬರುತ್ತಿರುವ ನೀರಿನ ಪ್ರಮಾಣದಲ್ಲಿ ಬಹಳಷ್ಟು ಪ್ರಮಾಣ ನೀರು ರಾಮನಗರ ಜಿಲ್ಲೆಗೆ ನೇರವಾಗಿ ಹರಿಯುವುದರಿಂದ ತುಮಕೂರು ಜಿಲ್ಲೆಯ ಜೀವನ ಅಡೆಯಾಗಿರುವ ಹೇಮಾವತಿ ನಮ್ಮಿಂದ ಕೈತಪ್ಪುವ. ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ತೀವ್ರ. ಬರಗಾಲವನ್ನು ಎದುರಿಸುತ್ತಿರುವ ತುಮಕೂರು ಜಿಲ್ಲೆಯಲ್ಲಿ ಯಾವುದೇ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಜನ ಜಾನುವಾರು ಪ್ರಾಣಿ ಪಕ್ಷಿ ಜಲಚರಗಳು ಕುಡಿಯುವ ನೀರು ಕೂಡ ತೀವ್ರ ಸಂಕಷ್ಟ ಎದುರಿಸುತ್ತಿವೆ. ಈ ಸಂದರ್ಭದಲ್ಲಿ ಹೇಮಾವತಿ ನೀರನ್ನು ರಾಮನಗರ ಜಿಲ್ಲೆಗೆ ನೀಡುವುದಕ್ಕೆ ನಮ್ಮ ಬಲವಾದ ವಿರೋಧವಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಹಾಗೂ ವಿವಿಧ ಪಕ್ಷದ ಜನಪ್ರತಿನಿಧಿಗಳು ಸಂಘಟನೆಗಳು, ರೈತ ಸಂಘಟನೆಗಳು ಪ್ರಾಣಿ–ಪಕ್ಷಿಗಳ ಹಿತ ಕಾಯುವ ಹೋರಾಟಗಾರರು. ಸೇರಿದಂತೆ ಎಲ್ಲರೂ ಕೂಡ ಒಗ್ಗಟ್ಟಿನಿಂದ ಇದಕ್ಕ ವಿರೋಧ ವ್ಯಕ್ತಪಡಿಸಿ, ಕಾಮಗಾರಿ ನಡೆಸುತ್ತಿರುವ ಸ್ಥಳದಲ್ಲಿ ಧರಣಿ ನಡೆಸಲು ತೀರ್ಮಾನಿಸಿರುವುದಾಗಿ ಹೋರಾಟಗಾರರು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ತೆಗೆದುಕೊಂಡು ಹೋಗಲು ನಮ್ಮ ಬಲವಾದ ವಿರೋಧವಿದ್ದು , ಕೂಡಲೇ ಕಾಮಗಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಲು ಈ ಮೂಲಕ ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ: ಶಿವಕುಮಾರ್, ಮೇಷ್ಟ್ರು ಮನೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


