10ನೇ ವರ್ಷದ ಯೋಗ ದಿನದ ಅಂಗವಾಗಿ ಕೊರಟಗೆರೆ ತಾಲ್ಲೂಕಿನ ಅರಸಪುರ ಸರ್ಕಾರಿ ಶಾಲೆಯ ಮಕ್ಕಳು ಯೋಗಾಭ್ಯಾಸ ಮಾಡಿದರು.
ವಿಶೇಷ ಮಕ್ಕಳಿಗೆ ಯೋಗಭ್ಯಾಸ ಹೇಳಿಕೊಟ್ಟ ಶಿಕ್ಷಕ ವೃಂದ, ಮಕ್ಕಳ ಜೊತೆಗೆ ಯೋಗಾಭ್ಯಾಸ ಮಾಡಿದರು.
ಈ ವೇಳೆ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಆನಂದ್, ಯೋಗ ಎನ್ನುವುದು ನಮ್ಮ ಪೂರ್ವಿಕರಿಂದ ಬಂದ ಬಹುದೊಡ್ಡ ಕೊಡುಗೆ, ಯೋಗವನ್ನ ಮಕ್ಕಳು ತಮ್ಮ ಬಾಲ್ಯದಲ್ಲಿ ಅಭ್ಯಾಸ ಮಾಡಿದರೆ ದೇಹದಲ್ಲಿ ಉತ್ತಮ ಆರೋಗ್ಯ ವೃದ್ಧಿಸುತ್ತದೆ. ಯಾವುದೇ ರೋಗ ರೂಜಿನಗಳು ಬರದಂತೆ ದೇಹವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA