ಹಲ್ಲು ನೋವನ್ನು ಮನೆಮದ್ದುಗಳಿಂದ ಸುಲಭವಾಗಿ ಗುಣಪಡಿಸಬಹುದು. ಅಡುಗೆ ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸಿ ಮದ್ದು ತಯಾರಿಸಬಹುದು..
ಲವಂಗದಿಂದ ಹಲ್ಲು ನೋವನ್ನು ನಿವಾರಿಸಬಹುದು. ಹಲ್ಲುನೋವು ಸಮಸ್ಯೆಗೆ ಲವಂಗದ ಎಣ್ಣೆ ತುಂಬಾ ಒಳ್ಳೆಯದು. ಲವಂಗದ ಎಣ್ಣೆಯಿಂದ ಹಲ್ಲುನೋವು ನಿವಾರಣೆಯಾಗುತ್ತದೆ.
ಲವಂಗದ ಎಣ್ಣೆಯು ಯುಜೆನಾಲ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ಹಲ್ಲುನೋವು, ಸೋಂಕುಗಳು, ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಇದಲ್ಲದೆ, ಲವಂಗ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಹಲ್ಲುನೋವು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ.
ಲವಂಗದ ಎಣ್ಣೆ ತಯಾರಿಸುವ ವಿಧಾನ
ಲವಂಗವನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ, ಗಾಜಿನ ಪಾತ್ರೆಯಲ್ಲಿ ಹಾಕಿ, ಲವಂಗವನ್ನು ಮುಚ್ಚುವಷ್ಟು ಆಲಿವ್ ಎಣ್ಣೆಯನ್ನು ಸುರಿಯಿರಿ ಮತ್ತು ಅದನ್ನು ಮುಚ್ಚಿ. ನಂತರ ಒಂದು ವಾರ ಅಥವಾ ಎರಡು ವಾರಗಳ ಕಾಲ ನೇರ ಸೂರ್ಯನ ಬೆಳಕಿನಲ್ಲಿ ಇರಿಸಿ, ಅದನ್ನು ಫಿಲ್ಟರ್ ಮಾಡಿ ಮತ್ತು ಲವಂಗ ಎಣ್ಣೆಯನ್ನು ಮತ್ತೊಂದು ಗಾಜಿನ ಪಾತ್ರೆಯಲ್ಲಿ ಸುರಿಯಿರಿ ಮತ್ತು ಅದನ್ನು ಬಳಸಿ.. ನೋವು ಎಲ್ಲಿದೆಯೋಮ ಅಲ್ಲಿ ಎಣ್ಣೆಯನ್ನು ಹಚ್ಚುವುದರಿಂದ ತಕ್ಷಣ ಹಲ್ಲು ನೋವಿಗೆ ಪರಿಹಾರ ಕಂಡುಕೊಳ್ಳಬಹುದು..
ಲವಂಗದ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ ಅದನ್ನು ಉಂಡೆ ಮಾಡಿ ನೋಯುತ್ತಿರುವ ಹಲ್ಲಿನ ಮೇಲೆ ಇಡಬೇಕು.ಇದರಿಂದ ತಕ್ಷಣಕ್ಕೆ ಹಲ್ಲಿನ ನೋವಿನಿಂದ ಮುಕ್ತಿ ಪಡೆಯಬಹುದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA