ಮೂವರು ಮಕ್ಕಳು ಹಾಗೂ ಗಂಡನನ್ನು ತೊರೆದ ಮಹಿಳೆ, ನವವಧುವಿನಂತೆ ಸಿಂಗಾರಗೊಂಡು ಪ್ರಿಯತಮನ ಮನೆಗೆ ಬಂದ ಘಟನೆ ಉತ್ತರಪ್ರದೇಶದ ಸೋನ್ ಭದ್ರ ಎಂಬಲ್ಲಿ ಈ ಘಟನೆ ನಡೆದಿದೆ.
ವಿಭಾ ತನ್ನ ಗಂಡ ಹಾಗೂ ಮಕ್ಕಳನ್ನು ತೊರೆದು ಪ್ರಿಯತಮನ ಮನೆಗೆ ಬಂದಿದ್ದು, ವಧುವಿನಂತೆ ಶೃಂಗರಿಸಿಕೊಂಡು ಬಂದು ನಿಂದ ವಿಭಾಳನ್ನು ಕಂಡು ಸಂದೀಪ್ ಹಾಗೂ ಕುಟುಂಬಸ್ಥರು ಶಾಕ್ ಆಗಿದ್ದಾರೆ.,
ಮದುವೆಗೂ ಮೊದಲು ವಿಭಾ ಹಾಗೂ ಸಂದೀಪ್ ನಡುವೆ ಪ್ರೀತಿ ಇತ್ತು. ಆದ್ರೆ ವಿಭಾಳನ್ನು ಮನೆಯವರು ಬೇರೆ ಯುವಕನ ಜೊತೆಗೆ ವಿವಾಹ ಮಾಡಿಕೊಟ್ಟಿದ್ದಾರೆ. ಇಷ್ಟಾದರೂ ವಿಭಾಳ ಹಿಂದೆ ಸಂದೀಪ್ ಬಿದ್ದಿದ್ನಂತೆ.
ಅಲ್ಲದೇ ತಮ್ಮ ಪ್ರೀತಿಯ ಸಂದರ್ಭದಲ್ಲಿ ಜೊತೆಗಿದ್ದ ಫೋಟೋ ಹಾಗೂ ಖಾಸಗಿ ವಿಡಿಯೋಗಳನ್ನು ನಿನ್ನ ಪತಿ ಹಾಗೂ ಸಹೋದರನಿಗೆ ಕಳುಹಿಸುವುದಾಗಿ ಸಂದೀಪ್ ನಿರಂತರವಾಗಿ ವಿಭಾಳನ್ನು ಪೀಡಿಸುತ್ತಿದ್ದನಂತೆ.
ಸಂದೀಪ್ ನ ವರ್ತನೆಯಿಂದ ಅತ್ತ ಪತಿಯೊಂದಿಗೆ ನೆಮ್ಮದಿಯಾಗಿ ಸಂಸಾರ ಮಾಡಲಾಗದೇ, ಇತ್ತ ಪ್ರಿಯಕರನನ್ನೂ ಸಮಾಧಾನ ಪಡಿಸಲಾಗದ ವಿಭಾ, ಸಂದೀಪ್ ಗೆ ಪಾಠ ಕಲಿಸಲು ಮುಂದಾಗಿದ್ದಾಳೆ.
ವಧುವಿನಂತೆ ಸಿಂಗರಿಸಿಕೊಂಡು ನೇರವಾಗಿ ಸಂದೀಪ್ ನ ಮನೆಗೆ ಬಂದ ವಿಭಾ ನನ್ನನ್ನು ಮದುವೆಯಾಗು ಎಂದು ಕೂತಿದ್ದಾಳೆ. ಇದರಿಂದಾಗಿ ಸಂದೀಪ್ ಹಾಗೂ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA