ಕೊರಟಗೆರೆ: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಗ್ರಹಾರ ಗ್ರಾಮ ಪಂಚಾಯಿತಿಯ ಥರಟಿ ಗ್ರಾಮದಲ್ಲಿ ಒಂದು ಕುಟುಂಬವೊಂದು ವಾಸಿಸಲು ಸೂಕ್ತ ಮನೆಯಿಲ್ಲದೇ ಸಂಕಷ್ಟದಲ್ಲಿ ಜೀವಿಸುತ್ತಿರುವ ಘಟನೆ ಗೃಹ ಸಚಿವರ ಕ್ಷೇತ್ರದಲ್ಲೇ ನಡೆದಿದೆ.
8 ಜನರಿರುವ ಕುಟುಂಬ ಈ ಬಡ ಕುಟುಂಬದಲ್ಲಿ ಮಂಜಮ್ಮ ತಿಮ್ಮಣ್ಣ ದಂಪತಿಯ ಮನೆಯಲ್ಲಿ ಹಿರಿಯ ಜೀವಗಳು ಮೂರು ಜನ ಇದ್ದಾರೆ. ಯಾರಿಗೂ ಪೆನ್ಷನ್ ಬರುತ್ತಿಲ್ಲ. ನಾಲ್ಕು ವರ್ಷದಿಂದ ಒಂದು ಟಾರ್ಪಲ್ ಅಡಿಯಲ್ಲಿ ವಾಸ ಮಾಡುತ್ತಿದ್ದಾರೆ. ನಮ್ಮ ಮನೆ ಬಿದ್ದುಹೋಗಿದೆ ಎಂದು ಅಧಿಕಾರಿಗಳಿಗೆ ಅಂಗಲಾಚಿದರು ಯಾರು ಬಂದಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಈ ಹಿಂದೆ ಇವರಿಗೆ ಮನೆ ಮಂಜೂರು ಮಾಡಲಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯೆ ದ್ರಾಕ್ಷಯಿಣಿ ತಿಳಿಸಿದರು. ಆದರೆ ಮನೆ ಕಂದಾಯ ಕಟ್ಟಲು ಸಹ ಹಣವಿಲ್ಲ. ಹೀಗಿರುವಾಗ ಮನೆ ಕಟ್ಟಲು ಚೈತನ್ಯವಿಲ್ಲದ ನಮ್ಮ ಬಳಿ ಹಣ ಎಲ್ಲಿದೆ ಎಂದು ಕುಟುಂಬಸ್ಥರು ಪ್ರಶ್ನಿಸಿದ್ದಾರೆ.
ಅನಾರೋಗ್ಯ ಪೀಡಿತ ತಾಯಿ ವಯಸ್ಸಾದ ತಂದೆ ಇವರ ಆಸ್ಪತ್ರೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಬಳಿ ಹಣವಿಲ್ಲ ಇನ್ನೂ ಮನೆ ಕಟ್ಟಲು ಹೇಗೆ ಸಾಧ್ಯ ಎಂದು ಈ ಕುಟುಂಬದ ತಿಮ್ಮಣ್ಣ ಪ್ರಶ್ನಿಸಿದ್ದಾರೆ.
ತಂದೆ ತಾಯಿ ಇಬ್ಬರಿಗೂ ಇದುವರೆಗೂ ಸರ್ಕಾರದ ಯಾವುದೇ ವೃದ್ದಾಪ್ಯ ವೇತನ ಬರುತ್ತಿಲ್ಲ. ನಾನು ಒಬ್ಬ ದುಡಿಯುವುದರಲ್ಲಿ ತಂದೆ ತಾಯಿ ಆರೋಗ್ಯದ ಖರ್ಚು. ಮಕ್ಕಳ ಸ್ಕೂಲ್ ಬಟ್ಟೆ ಪುಸ್ತಕ, ಸಂಸಾರದ ಖರ್ಚು ಎಲ್ಲಾ ಇದರಲ್ಲಿ ನಡೆಯಬೇಕು ಏನು ಮಾಡಲಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮನೆ ಸ್ನಾನದ ಗೃಹ, ಶೌಚಾಲಯ ಯಾವುದು ಅನುಕೂಲ ಇಲ್ಲದೆ ನಮ್ಮ ಮನೆಯ ಹೆಣ್ಣು ಮಕ್ಕಳು ಸ್ನಾನ ಮಾಡಲು ಜಾಗವಿಲ್ಲದೆ ಪರದಾಡುವ ಪರಿಸ್ಥಿತಿ ಇದೆ. ಹಿರಿಯ ಜೀವಗಳನ್ನ ಎತ್ತಿಕೊಂಡು ಹೋಗಿ ಶೌಚಾ ಮುಗಿಸಿಕೊಂಡು ಕರ್ಕೊಂಡು ಬರಬೇಕು. ಶೌಚಾಲಯಕ್ಕಾಗಿ ಕಿಲೋ ಮಿಟರ್ ಗಟ್ಟಲೆ ಹೋಗಬೇಕಾಗಿದೆ. ಮನೆಯ ಹೆಣ್ಣು ಮಕ್ಕಳು ಸ್ನಾನ ಮಾಡಬೇಕಾದರೆ ಸುತ್ತಲೂ ಹಳೆಯ ಸೀರೆಗಳನ್ನು ಕಟ್ಟಿಕೊಳ್ಳಬೇಕು. ಮನೆಯ ಹೆಣ್ಣು ಮಕ್ಕಳು ಸ್ನಾನ ಮಾಡಬೇಕಾದರೆ ಕೆಲ ಪುಂಡರು ಮನೆಗಳ ಮೇಲೆ ಅತ್ತಿ ನೋಡುತ್ತಾರೆ ಎಂದು ಕುಟುಂಬಸ್ಥರ ಅಳಲು ತೋಡಿಕೊಂಡರು.
ಮನೆ ಇಲ್ಲ ಶೌಚಾಲಯ ಇಲ್ಲ ಸ್ನಾನ ಗೃಹ ಇಲ್ಲವೇ ಇಲ್ಲ ಮನೆ ಮುಂದೆ ಚರಂಡಿಯಂತು ಹೇಳಲೇಬೇಡಿ. ಬೆಳಗಾದರೆ ಪ್ರತಿನಿತ್ಯ ಅಕ್ಕ ಪಕ್ಕದ ಮನೆಯವರಿಂದ ಬೈಗುಳ ಕೇಳಬೇಕು. ನಮ್ಮ ಮನೆಯಿಂದ ಚರಂಡಿ ನೀರು ಹೋಗಲು ಅವಕಾಶವಿಲ್ಲ. ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನೆ ಹಾಕಿ ಕೊಡಿ ಎಂದರೆ, 13 ವರ್ಷದ ಮನೆ ಕಂದಾಯ ಕಟ್ಟಿ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಬಡ ಕುಟುಂಬದ ನೋವಿನ ಗೋಳು ಕೇಳೋರು ಯಾರು ಇಲ್ಲವೇ? ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA