ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಪ್ರತ್ಯೇಕವಾಗಿ ಆಗಮಿಸಿದಕ್ಕಾಗಿ ಈ ದಂಪತಿಗಳು ಇತ್ತೀಚೆಗೆ ಮತ್ತೆ ಸುದ್ದಿಯಲ್ಲಿದ್ದಾರೆ. ಇಲ್ಲಿಂದ ಅವರ ಡಿವೋರ್ಸ್ ರೂಮರ್ಸ್ ಸಖತ್ ವೈರಲ್ ಆಗುತ್ತಿದೆ.
ಇತ್ತೀಚೆಗೆ ಅಭಿಷೇಕ್ ಬಚ್ಚನ್ ವಿಚ್ಛೇದನದ ಪೋಸ್ಟ್’ವೊಂದನ್ನು ಲೈಕ್ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದರು. ಹೀಗೆ ವಿಚ್ಛೇದನ ಸುದ್ದಿಗೆ ಪುಷ್ಠಿ ನೀಡುವಂತೆ ಒಂದಾದ ಮೇಲೊಂದು ಮಾಹಿತಿ ಹರಿದುಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಬಚ್ಚನ್ ಕುಟುಂಬ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಅದರಂತೆ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಐಶ್ವರ್ಯಾ ತನ್ನ ಮತ್ತು ಅಭಿಷೇಕ್ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯಗಳನ್ನು ಉಂಟುಮಾಡುವ ವಿಷಯದ ಬಗ್ಗೆ ಮಾತನಾಡಿದ್ದಾರೆ. ‘ನಾವಿಬ್ಬರೂ ತುಂಬಾ ಬಲವಾದ, ಚಿಂತನಶೀಲ ವ್ಯಕ್ತಿತ್ವವನ್ನು ಹೊಂದಿದ್ದೇವೆ. ನಾವು ಇನ್ನೂ ವಾದ ಮತ್ತು ಚರ್ಚೆಯ ನಡುವಿನ ವ್ಯತ್ಯಾಸವನ್ನು ಕಲಿಯುತ್ತಿದ್ದೇವೆ. ಹೀಗಾಗಿ ಎಂತದ್ದೇ ವಿಚಾರಗಳಿದ್ದರೂ ವಾದಕ್ಕಿಂತ ಮೊದಲು ಚರ್ಚೆ ಮಾಡುತ್ತೇವೆ. ಅಭಿಷೇಕ್ ಜೊತೆ ಮನಸ್ಥಾಪ ಇರೋದು ನಿಜ ಆದರೆ ನಾವಿಬ್ಬರೂ ಚರ್ಚೆ ಮಾಡಿ ಬಳಿಕ ಮುಂದಿನದನ್ನು ನೋಡುತ್ತೇವೆ” ಎಂದು ಐಶ್ ಹೇಳಿಕೊಂಡಿದ್ದಾರೆ.
View this post on Instagram
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


