ಬೀದರ್: 30 ಗ್ರಾಂ.ನ ಚಿನ್ನದ ಸರ ಕಳೆದುಕೊಂಡ ಮಹಿಳೆಗೆ ಪೊಲೀಸರು ತಕ್ಷಣವೇ ಸ್ಪಂದಿಸಿ, ಚಿನ್ನದ ಸರವನ್ನು ಪತ್ತೆ ಮಾಡಿ ಹಸ್ತಾಂತರಿಸಿರುವ ಘಟನೆ ಬಸವಕಲ್ಯಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಸವಕಲ್ಯಾಣದ ಮಹಿಳಾ ಗ್ರಾಹಕರೊಬ್ಬರು ದೀಪಾವಳಿ ಹಬ್ಬದ ಪ್ರಯುಕ್ತ ವಸ್ತುಗಳನ್ನು ಖರೀದಿಸಲು ಅಂಗಡಿಗಳಿಗೆ ಬಂದಿದ್ದು, ಬೇರೆ, ಬೇರೆ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಿದ್ದರು, ಬಳಿಕ ಮನೆಗೆ ಹೋಗುವ ಸಮಯದಲ್ಲಿ 30 ಗ್ರಾಂ. ಬಂಗಾರದ ಆಭರಣವನ್ನು ಕಳೆದುಕೊಂಡಿರುತ್ತಾರೆ. ಎಷ್ಟು ಹುಡುಕಾಡಿದರೂ ಸಿಗದ ಕಾರಣ ಅವರು ಬಸವಕಲ್ಯಾಣದ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದರು.
ತಕ್ಷಣ ಕಾರ್ಯ ಪ್ರವರ್ತರಾದ ಪಿ.ಎಸ್.ಐ ಅಂಬರೀಶ ರವರು ತಮ್ಮ ಠಾಣೆಯ ನಿಪೂಣ ಅಪರಾಧ ವಿಭಾಗದ ಸೀಮನ್, ಅಶೋಕ, ಗೌಸುದ್ದಿನ್, ಫ್ರಾನ್ಸಿಸ್, ವಿನೋದ ರವರ ಒಂದು ತಂಡವನ್ನು ರಚಿಸಿದ್ದು, ತಂಡವು ಕಾರ್ಯ ಪ್ರವರ್ತಗೊಂಡಿದ್ದು, ಸಿಬ್ಬಂದಿಯವರು ಮಹಿಳೆಯು ಯಾವ ಯಾವ ಅಂಗಡಿಗಳಲ್ಲಿ ಖರೀದಿಸಿದ ಅಂಗಡಿಗಳಿಗೆ ಭೇಟಿ ನೀಡಿ ಅಂಗಡಿಯಲ್ಲಿರುವ ಸಿ.ಸಿ ಟಿ.ವಿಯನ್ನು ಪರಿಶೀಲಿಸಿ ಬಂಗಾರವು ಬಿದ್ದಿದ್ದನ್ನು ಗಮನಿಸಿ ಚಿನ್ನದ ಸರವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಠಾಣೆಯಲ್ಲಿ ಪಿಎಸ್ ಐ ಅವರ ನೇತೃತ್ವದಲ್ಲಿ ಮಹಿಳೆಗೆ ಚಿನ್ನದ ಆಭರಣವನ್ನು ಹಸ್ತಾಂತರಿಸಲಾಯಿತು.
ಬಸವ ಕಲ್ಯಾಣ ನಗರ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿಯವರ ಜನಸ್ನೇಹಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q