nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ

    August 6, 2026

    ಹೊಳೆನರಸೀಪುರಕ್ಕೆ ನೂತನ ವಸತಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ: ಪಟಾಕಿ, ಸೇಬಿನ ಹಾರ ಹಾಕಿ ಭವ್ಯ ಸ್ವಾಗತ

    August 6, 2026

    ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ

    August 5, 2026
    Facebook Twitter Instagram
    ಟ್ರೆಂಡಿಂಗ್
    • ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ
    • ಹೊಳೆನರಸೀಪುರಕ್ಕೆ ನೂತನ ವಸತಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ: ಪಟಾಕಿ, ಸೇಬಿನ ಹಾರ ಹಾಕಿ ಭವ್ಯ ಸ್ವಾಗತ
    • ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ
    • ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್
    • ಸಚಿವ ಸ್ಥಾನ ಸಿಗಲಿಲ್ಲವೆಂದು ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ: ಪ್ರಿಯಾಂಕ್ ಖರ್ಗೆ
    • ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಚುರುಕು: 105 ಅಡಿಗೆ ತಲುಪಿದ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ
    • ಬಿಜೆಪಿಯವರು ಬರ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ನೀಡಲಿ: ಸಚಿವ ಸಂತೋಷ್ ಲಾಡ್
    • ನನ್ನ ಮತದಾನ ನನ್ನ ಹಕ್ಕು: ಎಸ್ಐಆರ್ ಜಾಗೃತಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕುಣಿಗಲ್ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕ್ಷೇತ್ರೋತ್ಸವ ಮತ್ತು ದಶಮಾನೊತ್ಸವ: 2024
    ಕುಣಿಗಲ್ November 7, 2024

    ಕುಣಿಗಲ್ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕ್ಷೇತ್ರೋತ್ಸವ ಮತ್ತು ದಶಮಾನೊತ್ಸವ: 2024

    By adminNovember 7, 2024No Comments2 Mins Read
    kunigal

    ಕುಣಿಗಲ್ ಕೃಷಿ ಸಂಶೋಧನಾಕೇಂದ್ರ, ಕುಣಿಗಲ್‌ ನಲ್ಲಿ ದಿನಾಂಕ : 06—11–2024ರಂದು ಬೆಂಗಳೂರು, ಕೃಷಿ ವಿಜ್ಞಾನಕೇಂದ್ರ, ಕೊನೆಹಳ್ಳಿ, ಸಿಮಿಟ್ ಹೈದರಾಬಾದ್, ಕುಣಿಗಲ್‌ ನ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು, ಕೃಷಿಕ ಸಮಾಜ, ಐ.ಡಿ.ಎಫ್ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಮತ್ತು ತುಮಕೂರು ಹಾಲು ಒಕ್ಕೂಟಸಹಯೋಗದಲ್ಲಿಕ್ಷೇತ್ರೋತ್ಸವ ಮತ್ತು ದಶಮಾನೋತ್ಸವ–2024 ಕಾರ್ಯಕ್ರಮವನ್ನುಏರ್ಪಡಿಸಲಾಯಿತು.

    ಈ ಕಾರ್ಯಕ್ರಮವನ್ನುವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರಾದ ಡಾ.ಕೇಶವಯ್ಯರವರು ಉದ್ಘಾಟಿಸಿ ಮಾತನಾಡಿ ಕರ್ನಾಟದ ರಾಜ್ಯದ ಕೃಷಿ ಪ್ರದೇಶವು ಮರುಭೂಮಿಯಾಗಿ ಪರಿವರ್ತನೆಯಾಗುತ್ತಿದೆ. ಈ ನಿಟ್ಟಿನಲ್ಲಿ ಖುಷ್ಕಿ ಬೇಸಾಯದ ನಿರ್ವಹಣೆ ಕುರಿತಂತೆ ಎರಡನೇ ಹಸಿರುಕ್ರಾಂತಿ ಯಾಗಬೇಕೆಂದುಕರೆಕೊಟ್ಟುರು. ಮುಂದುವರೆದು, ರೈತರು ಆಹಾರ ಬದ್ದತೆಯ ಜೊತೆಗೆ ಪೌಷ್ಟಿಕತೆ ಭದ್ರತೆಯ ಕಡೆ ಹೆಚ್ಚು ಗಮನ ನೀಡಬೇಕೆಂದುಕರೆಕೊಟ್ಟರು.

    ತುಮಕೂರು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಡಾ.ರಮೇಶ್‌ ಮಾತನಾಡಿ, ಪ್ರಸ್ತುತ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ರೈತರ ಅಭಿವೃದ್ದಿಗಾಗಿ ಚಾಲ್ತಿಯಲ್ಲಿರುವ ಯೋಜನೆಗಳ ಬಗ್ಗೆ ತಿಳಿಸಿದರು ಹಾಗೂ ಮುಂದಿನ ದಿನಗಳಲ್ಲಿ ನ್ಯಾನೊಗೊಬ್ಬರ ಬಳಕೆಯ ಪ್ರಾತ್ಯಾಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಮತ್ತು ಹಸಿರುಗೊಬ್ಬರ ಬಳಕೆಯ ಪ್ರೋತ್ಸಾಹಕ್ಕಾಗಿ 70% ಸಬ್ಸಿಡಿ ನೀಡಲಾಗುವುದು ಎಂದು ತಿಳಿಸಿದರು.

    ನಂತರ ಡಾ.ಪಿ.ಮಹದೇವು ಪ್ರಾಧ್ಯಾಪಕರು ವಲಯ ಕೃಷಿ ಸಂಶೋಧನಾಕೇಂದ್ರ, ಮಂಡ್ಯರವರು ನೀರಿನ ಸಂರಕ್ಷಣೆ, ಮಣ್ಣಿನ ಪೋಶಕಾಂಶಗಳ ನಿರ್ವಹಣೆ ಹಾಗೂ ಸಮಗ್ರ ಕೃಷಿ ಪದ್ದತಿಯನ್ನು ಅಳಡಿಸಿಕೊಳ್ಳುವುದರಿಂದ ಕೃಷಿಯಲ್ಲಿ ಲಾಭದಾಯಕತೆಯನ್ನು ಕಾಣುವ ಬಗ್ಗೆ ಹಾಗೂ ವಿವಿಧ ಮೇವಿನ ಬೆಳೆಗಳ ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ಮಾಹಿತಿ ನೀಡಿದರು.

    ನಂತರ ಡಾ.ದಿನೇಶ್ ಬೇಸಾಯತಜ್ಞರು ಕೃಷಿ ವಿಜ್ಞಾನಕೇಂದ್ರ, ರಾಮನಗರ ಅವರು ಪ್ರಸ್ತುತ ಸ್ಥಿತಿಯ ಒಣಬೇಸಾಯದಲ್ಲಿ ಬಳಸಬೇಕಾದ ನೂತನ ತಂತ್ರಜ್ಞಾನಗಳು ಹಾಗೂ ಸುಧಾರಿತ ತಳಿಗಳ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು.

    ಸಂತೋಷ್ ಶೇಠ್ ಯೋಜನಾಧಿಕಾರಿಗಳು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಕುಣಿಗಲ್‌ ರವರುತಮ್ಮಕೇಂದ್ರದಿಂದ ರೈತರಿಗೆ ನೀಡುವ ಸೌಲಭ್ಯಗಳು ಹಾಗೂ ಕೈಗೊಂಡಿರುವ ಯೋಜನೆಗಳ ಬಗ್ಗೆ ತಿಳಿಸಿದರು. ಮುಂದುವರೆದು ಈ ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ಮೂಡಿಬಂದಿದ್ದು ಮುಂದಿನ ದಿನಗಳಲ್ಲಿ ನಡೆಸುವಂತಹ ಕೃಷಿ ಚಟುವಟಿಕೆಗಳಲ್ಲಿ ನಮ್ಮ ಸಹಕಾರವಿರುತ್ತದೆ ಎಂದರು.

    ಡಾ.ಲೋಗಾನಂದನ್, ವಿಜ್ಞಾನಿಗಳು ಮತ್ತು ಮುಖ್ಯಸ್ಥರು ಕೃಷಿ ವಿಜ್ಞಾನಕೇಂದ್ರ ಹಿರೆಹಳ್ಳಿ ಕೇಂದ್ರದಿಂದ ರೈತಬಾಂದವರಿಗೆ ದೊರೆಯುವ ಸೌಲಭ್ಯಗಳು, ತರಬೇತಿ ಮತ್ತು ಪರಿಕರಗಳ ಬಗ್ಗೆ ಮಾಹಿತಿ ನೀಡಿ ಈ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.

    ಈ ಸಂದರ್ಭಧಲ್ಲಿಕಾರ್ಯಕ್ರಮಕ್ಕೆ ಆಗಮಿಸಿದ ರೈತರಿಗೆಕೇಂದ್ರದಲ್ಲಿಕೈಗೊಂಡಿರುವ ವಿವಿಧ ಬೆಳೆಗಳ ತಳಿಗಳು ಮತ್ತು ತಾಂತ್ರಿಕತೆಗಳ ಕುರಿತಂತೆ ಕೇಂದ್ರದ ಕ್ಷೇತ್ರ ಅಧೀಕ್ಷಕರಾದ ಡಾ.ಕೆ.ಆರ್. ಶ್ರೀನಿವಾಸ್ ಬಂದಂತ ವರಿಸಿದರು.

    ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರ, ಕೊನೆಹಳ್ಳಿ, ಕೇಂದ್ರದ ಮುಖ್ಯಸ್ಥರಾದ ವಿ.ಗೋವಿಂದೇಗೌಡರವರು ರೈತ ಸ್ನೇಹಿ ಹಾಗೂ ರೈತರ ಸಮಸ್ಯೆಗೆ ಅನುಗುಣವಾಗಿ ವಿಶ್ವವಿದ್ಯಾನಿಲಯದ ಸಂಬಂಧಪಟ್ಟ ಸಂಶೋಧನಾ ಕೇಂದ್ರಗಳು ನೂತನ ಸುಧಾರಿತ ತಳಿಗಳು, ಬೆಳೆ ಪದ್ದತಿಗಳ ಕುರಿತು ಪ್ರಾಯೋಗಗಳನ್ನು ನಡೆಸಿ ಕ್ಷೇತ್ರೋತ್ಸವ ಆಯೋಜಿಸಲಾಗಿದೆ. ಈ ಕ್ಷೇತ್ರೋತ್ಸವದಲ್ಲಿ ಪ್ರದರ್ಶಿಸುತ್ತಿರುವ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳಬೇಕು ಎಂದರು. ಮುಂದುವರೆದು ರೈತರುಜಮೀನಿನಲ್ಲಿಒಂದು ಬೆಳೆಗೆ ಸೀಮಿತರಾಗದೆ ಸಮಗ್ರ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಬಂದಂತಹ ಉತ್ಪಾನೆಗೆ ಮೌಲ್ಯವರ್ಧನೆ ಮಾಡಿ ರೈತಗುಂಪುಗಳ ಮುಖಾಂತರ ಮಾರಾಟ ಮಾಡಿ ಉದ್ಯಮಿಗಳಾಗುವುದರ ಜೊತೆಗೆ ಬಳಕೆ ಮಾಡಬೇಕೆಂದು ಕರೆಕೊಟ್ಟರು.

    ಕಾರ್ಯಕ್ರಮದ ಭಾಗವಹಿಸಿದ ಗಣ್ಯವ್ಯಕ್ತಿಗಳನ್ನು ಹಾಗೂ ರೈತರಿಗೆ ವಂದಿಸುತ್ತಾ ಪ್ರಸ್ತುತ ಹವಾಮಾನ ಚತುರ ಡಿಜಿಟಲ್ ಕೃಷಿ ಘೋಷವಾಕ್ಯದೊಂದಿಗೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನಕೇಂದ್ರದಲ್ಲಿ ನವೆಂಬರ್ 14 ರಿಂದ 17 ರವರೆಗೆ ನಡೆಯುವ ಕೃಷಿ ಮೇಳದಲ್ಲಿ ಹೆಚ್ಚಿನ ರೈತರು ಬಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕರೆನೀಡಿದರು.

    ಈ ಕಾರ್ಯಕ್ರಮದಲ್ಲಿ ಸಿಮಿಟ್ ಸಂಸ್ಥೆಯ ವಿಜ್ಞಾನಿ ಡಾ.ಟಿ.ಸತೀಸ್, ಸಹಾಯಕ ಕೃಷಿ ನಿರ್ದೇಶಕರಾದರಂಗನಾಥ್, ಪಶು ಸಂಗೋಪನೆ ಪಾಲಿಟೆಕ್ನಿಕ್‌ ನ ಪ್ರಾಂಶುಪಾಲರಾದ ಡಾ.ಸುಮ ಕೇವಿಕೆ ಗೃಹ ವಿಜ್ಞಾನಿ ಡಾ.ಸಿಂಧು ಡಾ.ಸಿದ್ದಗಂಗಯ್ಯ, ಡಾ.ಸೋಮಶೇಖರಪ್ಪ ಪಿ. ಮುಂತಾದವರು ಉಪಸ್ಥಿತರಾಗಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಕುಣಿಗಲ್: ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಜಮಾ–ಖರ್ಚು ವಿವರ ಘೋಷಣೆ

    July 29, 2026

    ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ: ಹೋರಾಟಕ್ಕೆ ಸಂದ ಜಯ– ಶಾಸಕ ಡಾ.ಎಚ್.ಡಿ.ರಂಗನಾಥ್

    July 26, 2026

    ಕುಣಿಗಲ್: ಮೇಣದ ಬತ್ತಿ ಹಿಡಿದು ಎಸ್‌ ಐಆರ್ ಜಾಗೃತಿ ಜಾಥಾ

    July 14, 2026

    Comments are closed.

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ

    August 6, 2026

     ರಾಘವೇಂದ್ರ ಅಡಿಗ ಎಚ್ಚೆನ್. ಹೆಲ್ತ್‌ ಕೇರ್ ಗ್ಲೋಬಲ್ ಎಂಟರ್‌ ಪ್ರೈಸಸ್ (HCG), ಬೆಂಗಳೂರು, ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್…

    ಹೊಳೆನರಸೀಪುರಕ್ಕೆ ನೂತನ ವಸತಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ: ಪಟಾಕಿ, ಸೇಬಿನ ಹಾರ ಹಾಕಿ ಭವ್ಯ ಸ್ವಾಗತ

    August 6, 2026

    ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ

    August 5, 2026

    ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್

    August 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.