nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅಪ್ರಾಪ್ತ ಬಾಲಕಿ ಸಹಿತ 8 ಮಂದಿ ಮಹಿಳೆಯರ ಮೇಲೆ ಅತ್ಯಾಚಾರ: ಯೋಗ ಗುರು ಬಂಧನ

    September 18, 2025

    ಮೈಸೂರು ದಸರಾ: ಪ್ರತಿಭಟನೆ, ಗೊಂದಲ ನಡೆಯದಂತೆ ಕಟ್ಟೆಚ್ಚರ ವಹಿಸಲು ಸೂಚನೆ

    September 18, 2025

    ಕಮಲನಗರ, ತೋರಣ ಗ್ರಾಮದ ಸಂಪರ್ಕ ರಸ್ತೆ ದುರಸ್ತಿಗೆ ಹರಿದೇವ ಸಂಗನಾಳ ಆಗ್ರಹ

    September 18, 2025
    Facebook Twitter Instagram
    ಟ್ರೆಂಡಿಂಗ್
    • ಅಪ್ರಾಪ್ತ ಬಾಲಕಿ ಸಹಿತ 8 ಮಂದಿ ಮಹಿಳೆಯರ ಮೇಲೆ ಅತ್ಯಾಚಾರ: ಯೋಗ ಗುರು ಬಂಧನ
    • ಮೈಸೂರು ದಸರಾ: ಪ್ರತಿಭಟನೆ, ಗೊಂದಲ ನಡೆಯದಂತೆ ಕಟ್ಟೆಚ್ಚರ ವಹಿಸಲು ಸೂಚನೆ
    • ಕಮಲನಗರ, ತೋರಣ ಗ್ರಾಮದ ಸಂಪರ್ಕ ರಸ್ತೆ ದುರಸ್ತಿಗೆ ಹರಿದೇವ ಸಂಗನಾಳ ಆಗ್ರಹ
    • ಬೀದರ್ ನಲ್ಲಿ ತಲೆಕೆಳಗಾಗಿ ಹಾರಿದ ರಾಷ್ಟ್ರಧ್ವಜ
    • ವಿಶ್ವಕರ್ಮ ಸಮಾಜವು ಸಂಘಟಿತರಾದಾಗ ಯೋಜನೆಗಳ ಸದ್ಬಳಕೆಗೆ ಸಹಕಾರಿ: ತಹಶೀಲ್ದಾರ್ ಮೋಹನಕುಮಾರಿ ಸಲಹೆ
    • ಎಂ.ಎನ್.ಭೀಮರಾಜ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
    • ದನಗಳ ಅವಶೇಷ ಅರಣ್ಯ ಭೂಮಿಯಲ್ಲಿ ಎಸೆದ ಆರೋಪ: ಇಬ್ಬರ ಬಂಧನ
    • ಡಿಸೆಂಬರ್ 31 ರ ಮುನ್ನ ಹೊಸ ಚಿಕ್ಕೋಡಿ ಜಿಲ್ಲೆ ರಚನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಂತ್ರಗಳ ಬೋಧನೆ, ಪಾಠ ಪ್ರವಚನಗಳನ್ನ ನೀಡುವ ಧರ್ಮ ಭೂಮಿ ತೋವಿನಕೆರೆ:  ಸ್ವಸ್ತಿ ಶ್ರೀ ಲಕ್ಷ್ಮಿ ಭಟ್ಟಾರಕ ಶ್ರೀಗಳು
    ಕೊರಟಗೆರೆ November 10, 2024

    ಮಂತ್ರಗಳ ಬೋಧನೆ, ಪಾಠ ಪ್ರವಚನಗಳನ್ನ ನೀಡುವ ಧರ್ಮ ಭೂಮಿ ತೋವಿನಕೆರೆ:  ಸ್ವಸ್ತಿ ಶ್ರೀ ಲಕ್ಷ್ಮಿ ಭಟ್ಟಾರಕ ಶ್ರೀಗಳು

    By adminNovember 10, 2024No Comments4 Mins Read
    jaina

    ಕೊರಟಗೆರೆ: ವಿಶ್ವಕ್ಕೆ ಶಾಂತಿ  ಅಹಿಂಸಾ ಧರ್ಮವನ್ನು ಬೋಧಿಸುವ ಜೈನ ಧರ್ಮದ ಮಂತ್ರಗಳು , ಬೋಧನೆ , ಪಾಠ ಪ್ರವಚನಗಳನ್ನು ನೀಡುವ ಧರ್ಮಭೂಮಿ  ತೋವಿನಕೆರೆಯಾಗಿದೆ ,ಇಲ್ಲಿ ನಡೆಯುತ್ತಿದ್ದ ಮಂತ್ರಗಳು ಬೋಧನೆಗಳು, ಪ್ರವಚನಗಳು ವಿಶ್ವಮಾನವಾಗಿದ್ದು ,ಇದೊಂದು ಧರ್ಮ ಭೂಮಿಯಾಗಿದೆ ಎಂದು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿಶ್ರೀ ಲಕ್ಷ್ಮಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

    ಅವರಿಂದು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚನ್ನರಾಯನ ದುರ್ಗ ಹೋಬಳಿ ತೋವಿನಕೆರೆಯಲ್ಲಿ ಶ್ರೀ ದಿಗಂಬರ ಜೈನ ಶ್ರೀ ಚಂದ್ರಪ್ರಭಾ ತೀರ್ಥಂಕರರ  ಜಿನಮಂದಿರದಲ್ಲಿ ಚಂದ್ರನಾಥ ಭವನದ ಉದ್ಘಾಟನಾ ಸಮಾರಂಭದ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.


    Provided by
    Provided by
    Provided by

    ಈ ಹಿಂದೆ ಇಲ್ಲಿ ಮಂತ್ರಗಳ ಬೋಧನೆ ,ಪಾಠ ಪ್ರವಚನಗಳು ನಡೆಯುತ್ತಿದ್ದವು, ಮಾತಾಜಿಗಳು ಪ್ರವಚನ ನೀಡುತ್ತಿದ್ದರು, ಇದೊಂದು ಧರ್ಮ ಭೂಮಿಯಾಗಿದ್ದು ಧರ್ಮಕ್ಕೆ, ಸಾಹಿತ್ಯಕ್ಕೆ, ಹಲವಾರು ಮಹತ್ವದ ಕೊಡುಗೆಗಳನ್ನು ನೀಡಿದೆ ಎಂದರು.

    ಸರ್ಕಾರದಲ್ಲಿ ಇಂದು  ಓಟು ಬ್ಯಾಂಕ್ ರಾಜಕೀಯ ನಡೆದಿದೆ, ದೇಶದಲ್ಲಿ  ಇಂದು ಸಂಸ್ಕೃತಿಯ ಉದ್ಧಾರ ಬೇಕಿಲ್ಲ, ಭೂಮಿ, ಇತಿಹಾಸ ಬೇಡವಾಗಿದೆ ಎಂದು ವಿಷಾದಿಸಿದ ಭಟ್ಟರಕ ಶ್ರೀಗಳು, ದೇಶ, ಮಣ್ಣು, ಗಾಳಿ, ಬೆಳಕು, ಆಹಾರಗಳನ್ನು ಜೈನರು ಸಂರಕ್ಷಿಸಿದ್ದಾರೆ. ಇಲ್ಲದಿದ್ದರೆ ಎಲ್ಲವೂ  ಪರಕೀಯರ ಪಾಲಾಗುತ್ತಿತ್ತು ಎಂದ ಅವರು, ದೇಶಕ್ಕೆ ಹೆಣ್ಣು ಮಕ್ಕಳ ಸೇವೆ ಅಪಾರ ಎಂದರು.

    ಈಗಿನ ಸರ್ಕಾರಗಳಿಗೆ ಜೈನ ಧರ್ಮದ ಕೊಡುಗೆ ಅಪಾರವಾಗಿದೆ ಭಾರತದ ಲಾಂಛನ ,ಸಿಂಹ, ಅಶೋಕಸ್ಥಂಭ, ತ್ರಿವರ್ಣ ಧ್ವಜದ ಮಧ್ಯೆ ಚಕ್ರ, ಸೇರಿದಂತೆ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಭಟ್ಟರಕ ಶ್ರೀಗಳು, ಜನಪದ ತಜ್ಞ, ಸಾಹಿತಿ, ಡಾ.ಎಸ್.ಪಿ.ಪದ್ಮಪ್ರಸಾದ್  ಜೈನ್  ಕನ್ನಡ ಸಾಹಿತ್ಯಕ್ಕೆ, ಜೈನ ಧರ್ಮಕ್ಕೆ ,ಕನ್ನಡದ ಉಳಿವಿಗೆ  ಕೊಡುಗೆ ಅಪಾರ ಎಂದರು.

    ಸಂಕಟ ಬಂದಾಗ ಚತುರ್ಥಿ ಮಾಡಬೇಕು. ಚೌತಿಯ ದಿನ ಮಾಡಿ, ಉಪಹಾರ ಸೇವಿಸುವಂತೆ ಸಲಹೆ ನೀಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಂಸದ  ವಿ.ಎಸ್.ಉಗ್ರಪ್ಪ ಮಾತನಾಡಿ ಧರ್ಮ  ಪ್ರಚಾರಕರಿಗೆ ಮೋಕ್ಷ ಸಿಗಬೇಕು, ಮನುಕುಲದ ಅಭಿವೃದ್ಧಿಯಾಗಬೇಕು, ಪಂಚ ಸಂದೇಶಗಳ ಪಾಲನೆ ಅಗತ್ಯ ಭಾವನೆ ಬದ್ಧತೆಗಳನ್ನು ವೈಜ್ಞಾನಿಕವಾಗಿ ಕೊಡಬೇಕಿದ್ದು, ಸತ್ಯ ಎನ್ನುವುದು ಕಾನೂನು, ಸನ್ಯಾಸತ್ವದಲ್ಲೂ ಇಲ್ಲ, ಸಮಾಜದಲ್ಲಿ  ಇಂದು ಕಂದಕ ಹಿಂಸೆಗಳು ಹೆಚ್ಚಿವೆ ಎಂದು ಎಂದು ವಿಷಾಧಿಸಿದರು.

    ಗಣ್ಯರ ಸಂದೇಶ ಬಯಸಿದರೆ ಶಾಂತಿ ಸಾಧ್ಯ, ಒಳ್ಳೆ ಸಮಾಜ– ಧರ್ಮದ ಹಾದಿಯಲ್ಲಿ ನಡೆದಾಗ, ಮಾನವೀಯತೆ ನೆಲೆಗಟ್ಟು ರೂಪಿಸಿಕೊಂಡಾಗ ಇದು ಸಾಧ್ಯ , ನಾವು ಸಂಘಟಿತರಾದಾಗ ಬದುಕಿನಲ್ಲಿ ಬದಲಾವಣೆ ಅಗತ್ಯ ಎಂದರು.

    ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ, ರತ್ನತ್ರೆಯ ಕ್ರಿಯೇಷನ್ ನ  ಡಾ.ನೀರಜಾ ನಾಗೇಂದ್ರ ಕುಮಾರ್ ಮಾತನಾಡಿ  ಸಭಿಕರಿಲ್ಲದೆ ಸಭೆಗೆ ಶೋಭೆ ಇಲ್ಲ, ಧಾರ್ಮಿಕ ಸಭೆಗಳಲ್ಲಿ ಮಕ್ಕಳು ಕಡಿಮೆಯಾಗುತ್ತಿದ್ದು, ಈ ಬಗ್ಗೆ ಚಿಂತನೆ ಅಗತ್ಯ. ಜೈನ ಸಮಾಜದ ಉಳಿವಿಗೆ ಮಕ್ಕಳು ಅಗತ್ಯವಾಗಿದ್ದು, ಇಂದು ಧರ್ಮದ ಉಳಿವಿಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.

    ಎಲ್ಲದಕ್ಕೂ ಸುಖ ಅಗತ್ಯವಾಗಿದೆ, ತಾಂತ್ರಿಕ ಯುಗದಿಂದ ಅಧಿಕಾರ , ಹಣ , ಕೀರ್ತಿಯನ್ನು ಬಯಸುತ್ತಿದ್ದು ಇದರಿಂದ ಸುಖ, ಆತ್ಮಶಾಂತಿ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು. ಸಪ್ತವ್ಯಸನಗಳಿಂದ ದೂರವಿದ್ದು ಸಮಾಜದ ಮೌಲ್ಯಗಳನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.

    ತುಮಕೂರು  ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು  ದಿವ್ಯ ಸಾನಿಧ್ಯಆಶೀರ್ವಚನ ನೀಡಿ ಜೈನ ಧರ್ಮದ ಅಹಿಂಸ,  ಶಾಂತಿ , ಅಸ್ಮಿಯ, ಮೌಲ್ಯಗಳು ಪುರಾತನವಾದದ್ದು. ಇವುಗಳ ಸಾಧನೆಗಳನ್ನು ಪ್ರೇರೇಪಿಸುವಲ್ಲಿ  ಧರ್ಮದ ಕೊಡುಗೆ ಅಪಾರ, ಆಹಿಂಸೆ ಪರಿಚಯಿಸಿದ ಸಾಧನೆ, ಶಾಂತಿ ,ಸಾಂಗೀಕ ಬದುಕಿಗೆ, ಸಮಾಜಕ್ಕೆ ಪರಿಚಯಿಸಿದವರು ,ಹಾಲು ಜೇನು ಮಿಲನಗೊಂಡಂತಿದೆ ಎಂದರು.

    ಜೈನ ಧರ್ಮ,  ಹಿಂದೂ ಹಾಗೂ ಬೌದ್ಧ ಧರ್ಮದಲ್ಲಿ ಒಡನಾಟ ಹೊಂದಿದೆ ಭಾರತದ ಉಳಿವಿನಲ್ಲಿ ಜೈನ ಧರ್ಮದ ಪಾತ್ರ  ಅಪಾರವಾಗಿದ್ದುಈ ಬಗ್ಗೆ ಚಿಂತನೆ ಅಗತ್ಯ ಎಂದು ಅವರು ,ಧರ್ಮ ಎಲ್ಲವನ್ನು ಆಚರಣೆಯಿಂದ ನೋಡಬೇಕಿದೆ ಎಂದರು.

    ಸಮಾಜದ ಆರೋಗ್ಯಕ್ಕೆ ಸರ್ವವು  ಅವಿನ ಭಾವ  ಹೊಂದಿರಬೇಕು ಎಲ್ಲವನ್ನು ಆತ್ಮ ಗೌರವದಿಂದ ನೋಡಬೇಕು . ಇಲ್ಲದಿದ್ದರೆ ಧರ್ಮಕ್ಕೆ ಉಳಿಗಾಲವಿಲ್ಲ  ಎಂದರು.

    ದೇಶದಲ್ಲಿ ಧರ್ಮದ ಸಂಶೋಧನೆಗಳು ಹೆಚ್ಚು ಹೆಚ್ಚು ನಡೆದಿದೆ . ಇವು ಧರ್ಮಗಳು ಐಕ್ಯತೆಯಿಂದ ಬದುಕಲು ಪೂರಕವಾಗಿವೆ, ಭಾರತದ ಇತಿಹಾಸವನ್ನು ಭಾರತೀಯರೇ ಬರೆಯಬೇಕು , ಪರಕೀಯರ ಬರಹದ ಬದುಕಿನಲ್ಲಿ ಸೌಖ್ಯವಿಲ್ಲ ಯಾವುದಕ್ಕೂ ವಿವೇಚನೆ ಅಗತ್ಯ ಎಂದರು.

    ತಿಂಗಳಿಗೊಂದು ಚಿಂತನ ಸಭೆ ಅಗತ್ಯ ,ಗಣ್ಯರಿಂದ ಕಾರ್ಯಕ್ರಮಗಳು ಅಗತ್ಯ, ಸಮಸ್ಯೆ ಇರುವುದು ಧರ್ಮದಿಂದಲ್ಲ, ಜನರಿಂದ ಎಂದ ಅವರು ಎಲ್ಲದಕ್ಕೂ ವೈಚಾರಿಕತೆ ಅಗತ್ಯ ಎಂದ ಅವರು, ಈ ಬಗ್ಗೆ ಅಧ್ಯಯನಶೀಲರಾಗೋಣ ಎಂದರು.

    ಶ್ರೀ ಕ್ಷೇತ್ರ ಸಿದ್ದರ ಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಎಂದು ಯುವ ಪೀಳಿಗೆಗೆ ಧರ್ಮದ ಬೋಧನೆ ಅಗತ್ಯ ,ಆತ್ಮಸ್ಥೈರ್ಯ ತುಂಬುವುದು ಅಗತ್ಯ, ಜೈನ ಧರ್ಮ ಧಾರ್ಮಿಕ ಆಚರಣೆಯಲ್ಲಿ ಮಹತ್ವ ಹೊಂದಿದ್ದು,  ಇಂದು ಧೈರ್ಯ ಎನ್ನುವುದು ಅಗತ್ಯವಾಗಿದ್ದು, ಇದಕ್ಕೆ ಕರ್ಮವನ್ನು ನಿಗ್ರಹಿಸುವ ಶಕ್ತಿ ಇದೆ. ಧರ್ಮವನ್ನು ಆಚರಿಸಿದಾಗ ಧೈರ್ಯ, ಶಕ್ತಿ ಬರಲಿದೆ ಎಂದ ಅವರು, ಧರ್ಮದಿಂದ   ಆಚಾರವಂತರಾದಾಗ ಎಲ್ಲಾ ಸಾಧ್ಯವಾಗಲಿದೆ ,ಪರಂಪರೆಗಳನ್ನು ಯುವ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು .ಧರ್ಮದ ಹಾದಿಯಲ್ಲಿ ನಡೆದಾಗ ಎಲ್ಲಾ ಸಾಧ್ಯವಾಗಲಿದೆ ಸತ್ಯದ ಮೂಲಕ ಧರ್ಮದ ಹಾದಿ ಅನುಸರಿಸಿ, ಧರ್ಮದ ಆಚಾರ –ವಿಚಾರ ಗಳನ್ನ ರೂಡಿಸಿಕೊಳ್ಳುವಂತೆ ಕರೆ ನೀಡಿದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತೋವಿನಕೆರೆ ದಿಗಂಬರ ಜೈನ ಶ್ರೀಚಂದ್ರಪ್ರಭಾ ತೀರ್ಥಂಕರ  ಜಿನಮಂದಿರ ಅಧ್ಯಕ್ಷ  ಹಾಗೂ ತುಮಕೂರು ಶ್ರೀ ದಿಗಂಬರ ಜೈನ  ಶ್ರೀ ಪಾರ್ಶ್ವನಾಥ ಜಿನ ಮಂದಿರ ಸಮಿತಿಯ  ಉಪಾಧ್ಯಕ್ಷ   ಶೀತಲ್ ಪ್ರಾಸ್ತಾವಿಕ ನುಡಿಗಳನ್ನಡಿದರು.

    ಕಾರ್ಯಕ್ರಮದಲ್ಲಿ ಸಾಹಿತಿ , ಜಾನಪದ ತಜ್ಞ, ಡಾ.ಎಸ್. ಪಿ.ಪದ್ಮಪ್ರಸಾದ್ ಜೈನ,  ತೋವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರಿಜಮ್ಮ, ತೋವಿನಕೆರೆ ಜೈನ ಸಮಾಜದ ವಿಜಯ್ ಕುಮಾರ್, ವಿಮಲ್ ರಾಜ್, ಚಂದ್ರಪ್ರಭ, ಸುರೇಂದ್ರ ಜೈನ್, ಕುರಂ ಕೋಟೆ ಟಿ.ಎಸ್.ಪ್ರಕಾಶ್ ಜೈನ್, ಉದ್ಯಮಿ ಗಳಾದ ಜಿ.ಪಿ.ಉಮೇಶ್ ಕುಮಾರ್, ಸನ್ಮತಿ ಕುಮಾರ್,  ಸೆಕ್ಯೂರಿಟಿ ಸರ್ವಿಸ್ ಶೀತಲ್, ಎ.ಎನ್ ರಾಜೇಂದ್ರ ಪ್ರಸಾದ್ ,ಚಂದ್ರಕೀರ್ತಿ , ಧರಣಿಂದ್ರೆಯ್ಯ, ಸುಗಂಧರಾಜ, ಬೆಳಗುಲಿ ವಿಜಯ್ ಕುಮಾರ್ ,ಅರಸಪುರ ಸಂತೋಷ್, ಡಾ.ನಾಗೇಂದ್ರ ಕುಮಾರ್, ಸೇರಿದಂತೆ ತೋವಿನಕೆರೆ ಜೈನ ಸಮಾಜದ ಮುಖಂಡರುಗಳು, ಮಹಿಳಾ  ಜೈನ ಸಮಾಜದ  ಅಧ್ಯಕ್ಷರು, ಪದಾಧಿಕಾರಿಗಳು ಜೈನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶ್ರಾವಕ –ಶ್ರಾವಕಿಯರು ಭಾಗವಹಿಸಿದ್ದರು

    ಪುರೋಹಿತರಾದ ಪದ್ಮರಾಜ್, ಕಿರಣ್ ಪಂಡಿತ್ ಹಾಗೂ ಮಹಾವೀರ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.   ಬೆಳಗ್ಗೆ ವಾಸ್ತು ಹೋಮ, ಚಂದ್ರನಾಥ ಸ್ವಾಮಿಗೆ ನಿತ್ಯ ಅಭಿಷೇಕ ,ನವಗ್ರಹ ಆರಾಧನೆಗಳು ನಡೆದವು.  ಇದೇ ಸಂದರ್ಭದಲ್ಲಿ ಧರ್ಮ ಕಾರ್ಯಗಳಿಗೆ ಸಹಕರಿಸಿದ ,ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಕು. ಗ್ರೀಷ್ಮಾ ಸಂಗಡಿಗರು ಮಂಗಳಚರಣೆ ನೆರವೇರಿಸಿದರು. ಕುಮುದ ನಾಗಭೂಷಣ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

    ವರದಿ:  ಜೆ. ರಂಗನಾಥ, ತುಮಕೂರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಜಾತಿ ಜನಗಣತಿಯಲ್ಲಿ ಕುಂಚಿಟಿಗ ಎಂದೇ ನಮೂದಿಸಲು ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ಕರೆ

    September 17, 2025

    ಅರಸಾಪುರ ಗ್ರಾ.ಪಂ. ನೂತನ ಅಧ್ಯಕ್ಷೆಯಾಗಿ ಗಂಗರತ್ನಮ್ಮ ಅವಿರೋಧ ಆಯ್ಕೆ

    September 12, 2025

    ರಾಜಕೀಯ ಸ್ಥಿತಿಗತಿಯಲ್ಲಿ ಶಿಕ್ಷಕ ಪ್ರಶಸ್ತಿಗಳಿಸುವುದು ಸುಲಭವಲ್ಲ: ಈರಣ್ಣ

    September 12, 2025
    Our Picks

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025

    ರಾಜಕೀಯ, ಆರ್ಥಿಕ ಸ್ಥಿರತೆ ಭಾರತ 3ನೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

    August 29, 2025

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಅಪ್ರಾಪ್ತ ಬಾಲಕಿ ಸಹಿತ 8 ಮಂದಿ ಮಹಿಳೆಯರ ಮೇಲೆ ಅತ್ಯಾಚಾರ: ಯೋಗ ಗುರು ಬಂಧನ

    September 18, 2025

    ಬೆಂಗಳೂರು: ಯೋಗ ಸೆಂಟರ್ ​ಗೆ ಬರುತ್ತಿದ್ದ ಬಾಲಕಿ, ಯುವತಿಯರು ಸೇರಿದಂತೆ ಎಂಟು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಯೋಗ…

    ಮೈಸೂರು ದಸರಾ: ಪ್ರತಿಭಟನೆ, ಗೊಂದಲ ನಡೆಯದಂತೆ ಕಟ್ಟೆಚ್ಚರ ವಹಿಸಲು ಸೂಚನೆ

    September 18, 2025

    ಕಮಲನಗರ, ತೋರಣ ಗ್ರಾಮದ ಸಂಪರ್ಕ ರಸ್ತೆ ದುರಸ್ತಿಗೆ ಹರಿದೇವ ಸಂಗನಾಳ ಆಗ್ರಹ

    September 18, 2025

    ಬೀದರ್ ನಲ್ಲಿ ತಲೆಕೆಳಗಾಗಿ ಹಾರಿದ ರಾಷ್ಟ್ರಧ್ವಜ

    September 18, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.