ಪಾವಗಡ: ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ಮಿಸಿರುವ ಪಾವನಗಂಗಾ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಕ್ರೀಡಾಕೂಟದ ಮೈದಾನಕ್ಕೆ ಶನಿವಾರದಂದು ಸ್ವಾಮಿ ಜಪಾನಂದ ಹಾಗೂ ಸ್ಥಳೀಯ ಶಾಸಕರಾದ ಹೆಚ್.ವಿ.ವೆಂಕಟೇಶ್ ಉದ್ಘಾಟನೆ ನೆರವೇರಿಸಿ ಚಾಲನೆ ನೀಡಿದರು.
ಇದೇ ವೇಳೆ NSS ಶಿಬಿರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ನಂತರ ಶಾಸಕರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು, ಪುರಸಭಾ ಅಧ್ಯಕ್ಷರಾದ ರಾಜೇಶ್, ಮಾಜಿ ಅಧ್ಯಕ್ಷರಾದ ಶಂಕರ್ ರೆಡ್ಡಿ, ಸದಸ್ಯ ಎನ್. ರವಿ, ಸಮಾಜ ಸೇವಕರಾದ ಬತ್ತಿನೇನಿ ನಾಗೇಂದ್ರ ರಾವ್, ಶ್ರೀನಿವಾಸ್ ನಾಯಕ್, ಪ್ರಾಂಶುಪಾಲ ಶಿವಾನಂದಯ್ಯ, ನಿಕಟ ಪೂರ್ವ ಪ್ರಾಂಶುಪಾಲ ಮಾರಪ್ಪ ಕೆ.ಓ., ಜಿ.ಸಿ. ದೇವರಾಜ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಮೈಲಾಪ್ಪ, ಜಯರಾಮಪ್ಪ, ಮಂಜುಳಾ, ರಂಗನಾಥ್ ಎಂ, ಸ್ಟುಡಿಯೋ ಅಮರ್ ,ಅಶೋಕ್ ಸೇರಿ ಇನ್ನೂ ಮುಂತಾದವರು ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx