nammatumakuru

    Subscribe to Updates

    Get the latest creative news from FooBar about art, design and business.

    What's Hot

    ದೆಹಲಿಯಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

    June 11, 2026

    ರಾಜ್ಯ ಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ: ಜುಲೈ 6 ರಂದು ಬೆಂಗಳೂರಿನಲ್ಲಿ ಆಯೋಜನೆ

    June 11, 2026

    ಬೀದರ್: ಪೊಲೀಸರ ಭರ್ಜರಿ ಕಾರ್ಯಾಚರಣೆ; ₹14.50 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಮೂವರ ಬಂಧನ!

    June 11, 2026
    Facebook Twitter Instagram
    ಟ್ರೆಂಡಿಂಗ್
    • ದೆಹಲಿಯಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
    • ರಾಜ್ಯ ಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ: ಜುಲೈ 6 ರಂದು ಬೆಂಗಳೂರಿನಲ್ಲಿ ಆಯೋಜನೆ
    • ಬೀದರ್: ಪೊಲೀಸರ ಭರ್ಜರಿ ಕಾರ್ಯಾಚರಣೆ; ₹14.50 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಮೂವರ ಬಂಧನ!
    • “ಆರ್. ಅಶೋಕ್ ಕಸ ಮಾಫಿಯಾ ಗ್ಯಾಂಗ್‌ ನ ಏಜೆಂಟ್: ನನ್ನ ಮೇಲೆ ಅಸೂಯೆ ರಾಜಕೀಯ: ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು
    • ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡಿ: ಶಾಸಕ ಸಿ.ಬಿ.ಸುರೇಶ್‌ ಬಾಬು
    • ಕೊಟ್ಟೂರು: ಪ್ರೊ.ಬಿ.ಕೃಷ್ಣಪ್ಪನವರ 89ನೇ ಜನ್ಮದಿನಾಚರಣೆ; ದಸಂಸ ವತಿಯಿಂದ ಅರ್ಥಪೂರ್ಣ ಆಚರಣೆ
    • ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ
    • ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ವೃದ್ಧೆಯ ಕೊಲೆ: ಮುಖ್ಯ ಆರೋಪಿಗೆ ಜೀವಾವಧಿ, ಮತ್ತೊಬ್ಬಳಿಗೆ 3 ವರ್ಷ ಜೈಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪಾವಗಡ ಗಡಿ ಗ್ರಾಮಗಳಲ್ಲಿ ಜಾನುವಾರು, ಕೇಬಲ್ ಕಳ್ಳರ ಹಾವಳಿ: ರೈತರು ಕಂಗಾಲು!
    ಪಾವಗಡ May 25, 2026

    ಪಾವಗಡ ಗಡಿ ಗ್ರಾಮಗಳಲ್ಲಿ ಜಾನುವಾರು, ಕೇಬಲ್ ಕಳ್ಳರ ಹಾವಳಿ: ರೈತರು ಕಂಗಾಲು!

    By adminMay 25, 2026No Comments2 Mins Read
    police

    ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನ ಗಡಿ ಭಾಗದ ಗ್ರಾಮಗಳಲ್ಲಿ ಹಸು ಹಾಗೂ ಕೇಬಲ್ ಕಳ್ಳತನ ಪ್ರಕರಣಗಳು ಸರಣಿಯಾಗಿ ವರದಿಯಾಗುತ್ತಿದ್ದು, ಸ್ಥಳೀಯ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಸಾಸಲಕುಂಟೆ, ಪೆನ್ನೋಬನಹಳ್ಳಿ ಹಾಗೂ ಲಿಂಗದಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳು ಭಯದ ನೆರಳಿನಲ್ಲಿ ದಿನ ಕಳೆಯುವಂತಾಗಿದೆ.

    ಕಳೆದ ವಾರ ರಾತ್ರಿ ಸಾಸಲಕುಂಟೆ ಗ್ರಾಮದ ರೈತ ಧನ್ವಂತ್ ರೆಡ್ಡಿ ಅವರ ಕೊಟ್ಟಿಗೆಯಲ್ಲಿದ್ದ ಹಸು ನಾಪತ್ತೆಯಾಗಿತ್ತು. ಗಾಬರಿಗೊಂಡ ಅವರು ತಮ್ಮ ಸಹೋದರನ ಬೈಕ್‌ ನಲ್ಲಿ ಲಿಂಗದಹಳ್ಳಿ ಮಾರ್ಗವಾಗಿ ಹಸುವನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ಪೆನ್ನೋಬನಹಳ್ಳಿ ರಸ್ತೆ ಪಕ್ಕದಲ್ಲಿ ಮತ್ತೊಬ್ಬ ರೈತನ ಸೀಮೆಹಸುವಿನ ಹಗ್ಗ ಬಿಚ್ಚಿ ಕಳ್ಳತನ ಮಾಡಲು ಕಳ್ಳರು ಯತ್ನಿಸುತ್ತಿದ್ದರು. ಬೈಕ್‌ ನ ಹೆಡ್‌ ಲೈಟ್ ಬೆಳಕು ಕಂಡ ಕಳ್ಳನೊಬ್ಬ ಧನ್ವಂತ್ ರೆಡ್ಡಿ ಅವರತ್ತ ಕಲ್ಲು ತೂರಿ ದಾಳಿ ನಡೆಸಿದ್ದಾನೆ. ಇದರಿಂದ ಹೆದರಿದ ರೈತರು ಬೈಕನ್ನು ಸ್ವಲ್ಪ ದೂರದಲ್ಲೇ ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಕಳ್ಳರು ಸೀಮೆಹಸುವನ್ನು ಕದಿಯುವ ಯತ್ನ ಕೈಬಿಟ್ಟು, ಅಲ್ಲೇ ಸಿದ್ಧವಾಗಿ ನಿಲ್ಲಿಸಿದ್ದ ಟೆಂಪೋದಲ್ಲಿ ಪರಾರಿಯಾಗಿದ್ದಾರೆ.


    Provided by
    Provided by

    ಮೇ 21ರ ಒಂದೇ ದಿನ ನಾಲ್ಕು ಹಸುಗಳು ಕಳವು!

    • ಮೇ 21ರಂದು ಕಳ್ಳರು ಮತ್ತೆ ಅಟ್ಟಹಾಸ ಮೆರೆದಿದ್ದು, ಒಂದೇ ದಿನ ಕೋಟ್ಯಂತರ ರೂಪಾಯಿ ಮೌಲ್ಯದ ಜಾನುವಾರುಗಳನ್ನು ಹೊತ್ತೊಯ್ದಿದ್ದಾರೆ:
    • ನವೀನ್ ಕುಮಾರ್: ₹50 ಸಾವಿರ ಮೌಲ್ಯದ ಸೀಮೆ ಹಸು ಕಳವು.
    • ವೀರೇಶ್ ಕುಮಾರ್ (ಪೆನ್ನೋಬನಹಳ್ಳಿ): ₹50 ಸಾವಿರ ಮೌಲ್ಯದ ಹಸು ನಾಪತ್ತೆ.
    • ಸೋಮಶೇಖರರೆಡ್ಡಿ: ಸೀಮೆಹಸು ಕಳವು.
    • ಅಮಲ ರಂಗಪ್ಪ (ಕೊಡಿಗೇನಹಳ್ಳಿ): ಸೀಮೆ ಹಸು ಕಳ್ಳತನ.

    ಇದೇ ದಿನ ಸಾಸಲಕುಂಟೆ ಗ್ರಾಮದ ರೈತ ದಿವಾಕರರೆಡ್ಡಿ ಅವರಿಗೆ ಸೇರಿದ ಸುಮಾರು ₹1 ಲಕ್ಷ ಮೌಲ್ಯದ 28 ಮೀಟರ್ ಉದ್ದದ ಡಬಲ್ ಕೇಬಲ್ ವೈರನ್ನು ಸಹ ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ನೊಂದ ರೈತರು ಅರಸೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಜಿಲ್ಲೆಯ ಹಲವು ಭಾಗಗಳಲ್ಲಿ ದನ, ಕರು, ಕುರಿ, ಮೇಕೆ ಸೇರಿದಂತೆ ಸಾಕುಪ್ರಾಣಿಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದೆ. ತೋಟದ ಮನೆಗಳಲ್ಲಿ ನಾಯಿಗಳ ಕಾವಲು ಇದ್ದರೂ ಕಳ್ಳರು ಪ್ರಾಣಿಗಳನ್ನು ಹೇಗೆ ನಾಪತ್ತೆ ಮಾಡುತ್ತಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಕನಿಷ್ಠ 50 ಸಾವಿರಕ್ಕೂ ಅಧಿಕ ಬೆಲೆ ಬಾಳುವ ಈ ಹಸುಗಳೇ ಎಷ್ಟೋ ಬಡ ಕುಟುಂಬಗಳಿಗೆ ಜೀವನಾಧಾರವಾಗಿದ್ದವು. ಈಗ ಅವುಗಳೇ ಕಳುವಾಗಿರುವುದರಿಂದ ರೈತರ ಕಷ್ಟ ಹೇಳತೀರದಾಗಿದೆ.

    “ಈ ಕಳ್ಳತನ ದಂಧೆಯ ಹಿಂದೆ ಸ್ಥಳೀಯರೇ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಗ್ರಾಮೀಣ ಭಾಗದ ಜನರು ಒಗ್ಗಟ್ಟಾಗಿ ರಾತ್ರಿ ವೇಳೆ ಪಹರೆ (ಗಸ್ತು) ನಡೆಸಿದರೆ ಕಳ್ಳರನ್ನು ಹಿಡಿಯಬಹುದು” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕಳ್ಳರನ್ನು ಬಂಧಿಸುವ ಮೂಲಕ ರೈತರ ಆತಂಕವನ್ನು ದೂರ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಪಾವಗಡ: ರಂಗಸಮುದ್ರದಲ್ಲಿ ವಾಲ್ಮೀಕಿ ಮೂರ್ತಿಗೆ ವಿಶೇಷ ಪೂಜೆ

    June 8, 2026

    ಪಾವಗಡದಲ್ಲಿ ವಿಶ್ವ ಪರಿಸರ ದಿನಾಚರಣೆ: ‘ಗಿಡ ಬೆಳೆಸುವುದು ನಮ್ಮ ಕರ್ತವ್ಯ’: ಸಿಡಿಪಿಓ ಸುನಿತಾ

    June 6, 2026

    ಸಹನಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ವಿವಿಧ ಸ್ಪರ್ಧೆಗಳು, ಬಹುಮಾನ ವಿತರಣೆ

    June 5, 2026

    Leave A Reply Cancel Reply

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ದೆಹಲಿಯಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

    June 11, 2026

    ನವದೆಹಲಿ/ಬೆಂಗಳೂರು: ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ಷಡಕ್ಷರಿ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿದ್ದು, ಅವರನ್ನು ದೆಹಲಿಯ…

    ರಾಜ್ಯ ಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ: ಜುಲೈ 6 ರಂದು ಬೆಂಗಳೂರಿನಲ್ಲಿ ಆಯೋಜನೆ

    June 11, 2026

    ಬೀದರ್: ಪೊಲೀಸರ ಭರ್ಜರಿ ಕಾರ್ಯಾಚರಣೆ; ₹14.50 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಮೂವರ ಬಂಧನ!

    June 11, 2026

    “ಆರ್. ಅಶೋಕ್ ಕಸ ಮಾಫಿಯಾ ಗ್ಯಾಂಗ್‌ ನ ಏಜೆಂಟ್: ನನ್ನ ಮೇಲೆ ಅಸೂಯೆ ರಾಜಕೀಯ: ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

    June 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.