nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ

    June 13, 2026

    ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ

    June 13, 2026

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026
    Facebook Twitter Instagram
    ಟ್ರೆಂಡಿಂಗ್
    • ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ
    • ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ
    • ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ
    • ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!
    • ಪಾವಗಡ: ನಿಯಮ ಉಲ್ಲಂಘನೆ, ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ರದ್ದುಪಡಿಸಿ ಇಲಾಖೆ ಖಡಕ್ ಆದೇಶ! | ಶಾಸಕ ವೆಂಕಟೇಶ್ ವಿರುದ್ಧ ಎಫ್‌ ಐಆರ್ ದಾಖಲಿಸಲು ಒತ್ತಾಯ
    • ಜುಲೈ 15ರಂದು ಎಲ್ಲಾ ರೈತಪರ ಸಂಘಟನೆಗಳು, ಮುಖಂಡರೊಂದಿಗೆ ಹೇಮಾವತಿ ನಾಲಾ ವೀಕ್ಷಣೆ: ಶಾಸಕ ಸಿ.ಬಿ. ಸುರೇಶ್‌ ಬಾಬು ಕರೆ
    • ಪಾವಗಡ: ಸಕಾಲಕ್ಕೆ ಸಿಗದ ಚಿಕಿತ್ಸೆ; ಹಾವು ಕಚ್ಚಿ ಬಿ.ಫಾರ್ಮಸಿ ವಿದ್ಯಾರ್ಥಿ ದುರ್ಮರಣ
    • ಐದು ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಗುದ್ದಲಿ ಪೂಜೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಚಿಂತಕರ ಚಾವಡಿಯ ಸದಸ್ಯರಿಂದ ನುಡಿನಮನ | ಎಸ್.ಎಂ.ಕೃಷ್ಣ ಅವರು ಈ ನಾಡಿನ ಸಾಂಸ್ಕೃತಿಕ ನಾಯಕ
    ರಾಜ್ಯ ಸುದ್ದಿ December 10, 2024

    ಚಿಂತಕರ ಚಾವಡಿಯ ಸದಸ್ಯರಿಂದ ನುಡಿನಮನ | ಎಸ್.ಎಂ.ಕೃಷ್ಣ ಅವರು ಈ ನಾಡಿನ ಸಾಂಸ್ಕೃತಿಕ ನಾಯಕ

    By adminDecember 10, 2024No Comments4 Mins Read
    s m krishna

    ಬೆಳಗಾವಿ ಸುವರ್ಣ ವಿಧಾನಸೌಧ: “ಎಸ್.ಎಂ.ಕೃಷ್ಟ ಅವರು ಈ ನಾಡಿನ ಸಾಂಸ್ಕೃತಿಕ ನಾಯಕ.. ದೇವರಾಜು ಅರಸು ಸರಿ ಸಮಾನವಾದ ಮೌಲ್ಯಯುತ ಆಡಳಿತ ನಡೆಸಿದ ಧೀಮಂತ..  ಎಲ್ಲರನ್ನೂ ಒಳಗೊಳ್ಳುವ ರಾಜಕಾರಣ ಮಾಡಿದ ಮುತ್ಸದ್ಧಿ”

    ಡಿಸೆಂಬರ್ 10ರಂದು ನಡೆದ ಎರಡನೇ ದಿನದ ಅಧಿವೇಶನದಲ್ಲಿ ‘ಚಿಂತಕರ ಚಾವಡಿ’ ಎಂದೇ ಹೆಸರಾದ ಮೇಲ್ಮನೆಯಲ್ಲಿ ಈ ಮೇಲಿನಂತೆ ಎಸ್ ಎಂ ಕೃಷ್ಣ ಅವರ ವ್ಯಕ್ತಿತ್ವವನ್ನು ಬಣ್ಣಿಸಲಾಯಿತು.


    Provided by
    Provided by

    ಸಂತಾಪ ಸೂಚನೆಯ ನಿರ್ಣಯದ ಪ್ರಕಟಣೆ ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಸ್ಯರಿಗೆ ಮಾತನಾಡಲು ಅವಕಾಶ ಕಲ್ಪಿಸಿದರು.

    ಸಮಚಿತ್ತ ಹೊಂದಿದ್ದರು:

    ವಿಧಾನ ಪರಿಷತ್ ಶಾಸಕರಾದ ಡಾ.ತಿಮ್ಮಯ್ಯ ಅವರು ಮಾತನಾಡಿ, ಡಾ.ರಾಜಕುಮಾರ ಅವರು ಅಪಹರಣವಾದಾಗ ಅವರನ್ನು ರಕ್ಷಣೆ ಮಾಡಿ ನಾಡಿಗೆ ಒಪ್ಪಿಸಿದ ಕೀರ್ತಿ ಎಸ್ ಎಂ ಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.

    ಶಿಸ್ತುಬದ್ಧ ರಾಜಕಾರಣಿ: ಪರಿಷತ್ ಶಾಸಕರಾದ ಎಸ್ ಎಲ್ ಭೋಜೇಗೌಡ

    ಅವರು ಮಾತನಾಡಿ, ಕೃಷ್ಣ ಅವರು ನಾಲ್ಕು ಸದನಗಳಲ್ಲಿ ಕುಳಿತು ಸೇವೆ ಮಾಡಿದರು. ಶಿಸ್ತುಬದ್ಧವಾದ ರಾಜಕಾರಣಿಯಾಗಿದ್ದರು. ಯಾವುದಕ್ಕು ಧೃತಿ ಗೆಡುತ್ತಿರಲಿಲ್ಲ. ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.

    ನೋಡಿ ಕಲಿಯಬೇಕು: ಪರಿಷತ್ ಶಾಸಕರಾದ ಶಶೀಲ್ ಜಿ ನಮೋಶಿ ಅವರು ಮಾತನಾಡಿ, ದೇವದುರ್ಗದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಕೊಡುವ ಮೂಲಕ ಬಿಸಿ ಊಟ ಯೋಜನೆಯನ್ನು ಆರಂಭಿಸಿದರು. ನೋಡಿ ಕಲಿಯುವಂತಹ ರಾಜಕಾರಣಿ ಎಸ್ ಎಂ ಕೃಷ್ಟ ಆಗಿದ್ದರು ಎಂದರು.

    ಮುಂದಿನ ಪೀಳಿಗೆಗೆ ಸ್ಪೂರ್ತಿ:  ಪರಿಷತ್ ಶಾಸಕರಾದ ಬಿ.ಕೆ.ಹರಿಪ್ರಸಾದ್ ಅವರು ಮಾತನಾಡಿ, ವಿದ್ಯಾರ್ಥಿ ದಿಶೆಯಿಂದಲು ನಾವು ಎಸ್ ಎಂ ಕೃಷ್ಣ ಅವರೊಂದಿಗೆ ಒಡನಾಟ ಹೊಂದಿದ್ದೆವು. ಎಲ್ಲ ಸದನದಲ್ಲೂ ಸದಸ್ಯರಾಗಿ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗುವಂತೆ ಆಡಳಿತ ನಡೆಸಿದರು ಎಂದರು.

    ಸಮಯೋಚಿತ ರಾಜಕಾರಣಿ: ಪರಿಷತ್ ಶಾಸಕರಾದ ಸಿ.ಟಿ.ರವಿ ಅವರು ಮಾತನಾಡಿ,  ಪ್ರತಿಯೊಂದನ್ನು ಸಮಯೋಚಿತವಾಗಿ ಮಾಡುವ, ಉತ್ತಮ ನಿರ್ಣಯ ತೆಗೆದುಕೊಂಡು ಆಡಳಿತ ನಡೆಸಿದ ಕೀರ್ತಿ ಎಸ್ ಎಂ ಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.

    ಶಿಕ್ಷಣದಲ್ಲಿ ಕ್ರಾಂತಿ ಮಾಡಿದರು: ಕೃಷ್ಣ ಅವರ ಆತ್ಮೀಯತೆ, ಸಂಸ್ಕಾರ, ನಡವಳಿಕೆ ಎಲ್ಲವೂ ವಿಶೇಷವಾಗಿತ್ತು. ಕೃಷ್ಣ ಅವರು

    ಈ ನಾಡಿನ ಸಾಂಸ್ಕೃತಿಕ ನಾಯಕ. ನನ್ನ ಸರ್ಕಾರದ ಮೊದಲ ಆದ್ಯತೆ ಅಕ್ಷರ ಮತ್ತು ಆರೋಗ್ಯ ಎಂದು ಹೇಳುತ್ತಿದ್ಧರು. ತಮ್ಮ ಸಂಪುಟದಲ್ಲಿ ನನಗೆ ಶಾಲಾ ಶಿಕ್ಷಣ ಖಾತೆ ನೀಡಿದರು. ಸರ್ಕಾರಿ ಶಾಲೆಗಳನ್ನು ದೇವಾಲಯದ ರೀತಿ ಮಾಡಿದರು. ಮಕ್ಕಳನ್ನು ದೇವರೆಂದು ಭಾವಿಸಿದ್ದರು ಎಂದು ಪರಿಷತ್ ಶಾಸಕರಾದಅಡಗೂರ ಹೆಚ್.ವಿಶ್ವನಾಥ ಅವರು ತಿಳಿಸಿದರು.

    ಮಾನವೀಯ ಮೌಲ್ಯ ಹೊಂದಿದ್ದರು: ಪರಿಷತ್ ಶಾಸಕರಾದ ಎಂ.ನಾಗರಾಜ ಅವರು ಮಾತನಾಡಿ,  ಕೃಷ್ಟ ಅವರು ಮಾನವೀಯ ಮೌಲ್ಯ ಹೊಂದಿದ ನಾಯಕರಾಗಿದ್ದರು. ಶಿಸ್ತು ಸಂಯಮದ ರಾಜಕಾರಣ ಮಾಡಿದರು ಎಂದರು.

    ಬುದ್ಧ, ಬಸವ ಅಂಬೇಡ್ಕರ್ ವಿಚಾರಧಾರೆ: ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ ಅವರು ಮಾತನಾಡಿ, ಬುದ್ದ, ಬಸವ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ವಿಕಾಸಸೌಧವನ್ನು ನಿರ್ಮಿಸಿದ ಕೀರ್ತಿ ಕೃಷ್ಟ ಅವರಿಗೆ ಸಲ್ಲುತ್ತದೆ ಎಂದರು.

    ಡ್ರೆಸ್ ಕೋಡ್ ವಿಶೇಷ:

    ಪರಿಷತ್ ಶಾಸಕರಾದ ಶರವಣ ಟಿ.ಎ. ಅವರು ಮಾತನಾಡಿ, ವಿದೇಶದ ಜನರು ಕರ್ನಾಟಕದತ್ತ ನೋಡುವಂತೆ ಬೆಂಗಳೂರನ್ನು ಅಭಿವೃದ್ಧಿಪಡಿಸಿದರು. ಅವರು ವ್ಯಕ್ತಿಯಲ್ಲ; ದೊಡ್ಡ ಶಕ್ತಿಯಾಗಿದ್ದರು. ಅವರ ಡ್ರೆಸ್ ಕೋಡ್,‌ ಸಮಯಕ್ಕೆ ಸರಿಯಾಗಿ ಮಾಡುವ ಕಾರ್ಯವಿಧಾನ ಕೂಡ ವಿಶೇಷ ಎಂದರು.

    ಹೃದಯ ವೈಶಾಲ್ಯತೆ:

    ಪರಿಷತ್ ಶಾಸಕರಾದ ಪಿ ಎಚ್ ಪೂಜಾರ ಅವರು ಮಾತನಾಡಿ, ಸಿಎಂ ಆಗಿದ್ದಾಗ ಆಲಮಟ್ಟಿ ಜಲಾಶಯದ ಬಗ್ಗೆ ಗಮನ ಹರಿಸಿದ್ದರು. ಬಾಗಲಕೋಟಿ ಆಲಮಟ್ಟಿ ಸಂತ್ರಸ್ತರಿಗಾಗಿ ವಿಶೇಷ ಪ್ಯಾಕೇಜ್ ನೀಡಿ ಸ್ಪಂದನೆ ನೀಡಿದ್ದು ವಿಶೇಷ. ಹೃದಯ ವೈಶಾಲ್ಯ ಹೊಂದಿದ ರಾಜಕಾರಣಿಯಾಗಿದ್ದರು ಎಂದರು.

    ಮುತ್ಸದ್ಧಿ ರಾಜಕಾರಣಿ:  ಪರಿಷತ್ ಶಾಸಕರಾದ ಎನ್. ರವಿಕುಮಾರ್ ಅವರು ಮಾತನಾಡಿ, ಎಸ್ ಎಂ ಕೃಷ್ಣ ಅವರು ಸಮದೃಷ್ಟಿ ಹೊಂದಿದ ಮರೆಯಲಾರದ ರಾಜಕಾರಣಿಯಾಗಿದ್ದರು. ಪ್ರತಿಭಟನೆಕಾರರಿಗೆ ಸ್ಪಂದನೆ ನೀಡುತ್ತಿದ್ದರು. ಸಮಾಜವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಉತ್ತಮ ರಾಜಕಾರಣ ಮಾಡಿದರು. ಬೆಂಗಳೂರನ್ನು ಕ್ಲೀನ್ ಸಿಟಿ ಗ್ರೀನ್ ಸಿಟಿ ಮಾಡಿದರು.

    ಚಿತ್ರರಂಗದೊಂದಿಗೆ ಉತ್ತಮ ಬಾಂಧವ್ಯ:

    ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ ಅವರು ಮಾತನಾಡಿ, ಯುವ ನಾಯಕರಿಗೆ ಸ್ಪೂರ್ತಿ ತುಂಬುತ್ತಿದ್ದರು. ಚಿತ್ರರಂಗದೊಂದಿಗೆ ಸಹ ಉತ್ತಮ ಬಾಂದವ್ಯ ಹೊಂದಿದ್ದರು ಎಂದರು.

    ಜಾತಿರಹಿತ ರಾಜಕಾರಣಿ:

    ಪರಿಷತ್ ಶಾಸಕರಾದ ಉಮಾಶ್ರೀ ಅವರು ಮಾತನಾಡಿ, ಕೃಷ್ಣ ಅವರು ತಮ್ಮ ಆಡಳಿತಾವಧಿಯಲ್ಲಿ ಕಾರ್ಯಕರ್ತರನ್ನು ಗುರುತಿಸಿ ಪ್ರೋತ್ಸಾಹ ನೀಡಿದರು. ಸಣ್ಣ ಸಣ್ಣ ಸಮುದಾಯಗಳ ಕಾರ್ಯಕರ್ತರಿಗೆ ವಿಶೇಷ ಆದ್ಯತೆ ಕಲ್ಪಿಸಿದರು ಎಂದರು.

    ಕರ್ನಾಟಕ ರಾಜ್ಯದ ಜೆಂಟಲಮನ್: ಪರಿಷತ್ ಶಾಸಕರಾದ ಕೆ ಎಸ್ ನವೀನ್  ಅವರು ಮಾತನಾಡಿ, ಕೃಷ್ಣ ಅವರು ಅಳಿಸಲಾಗದ ಸೇವೆಯನ್ನು ರಾಜ್ಯ ಮತ್ತು ರಾಷ್ಟ್ರಕ್ಕೆ ನೀಡಿದ್ದಾರೆ ಎಂದರು.

    ರೈತರ ಒಡನಾಡಿ:

    ಪರಿಷತ್ ಶಾಸಕರಾದ ಮಧು ಜಿ ಮಾದೇಗೌಡ ಅವರು ಮಾತನಾಡಿ, ಕೃಷ್ಣ ಅವರ ಕಾಲದಲ್ಲಿ ಬರ ಪರಿಸ್ಥಿತಿ ತಲೆ‌ದೋರಿದಾಗ ರೈತರ ಒಡನಾಡಿಯಾಗಿ ಅದನ್ನು ಸರಿಯಾಗಿ ನಿಬಾಯಿಸಿದರು.  ಕಂಪ್ಯೂಟರ್ ಶಿಕ್ಷಣಕ್ಕಾಗಿ ಮಾಹಿತಿ ಸಿಂಧು ಕಾರ್ಯಕ್ರಮ ಜಾರಿ ಮಾಡಿದರು ಎಂದರು.

    ಬುದ್ಧಿವಾದ ಹೇಳುತ್ತಿದ್ದರು:

    ಪರಿಷತ್ ಶಾಸಕರಾದ ನಸೀರ್ ಅಹ್ಮದ್ ಅವರು ಮಾತನಾಡಿ, ಸದನದಲ್ಲಿ ಹೇಗಿರಬೇಕು. ಹೇಗೆ ಮಾತಾಡಬೇಕು ಎಂದು ಯುವ ರಾಜಕಾರಣಿಗಳಿಗೆ ಸಲಹೆ ಮಾಡುತ್ತಿದ್ದರು. ಐಟಿಬಿಟಿಗೆ ವಿಶೇಷ ಒತ್ತು ನೀಡಿದ್ದರು ಎಂದರು.

    ಐಟಿ–ಬಿಟಿಯ ವಾರಸುದಾರ:

    ಪರಿಷತ್ ಶಾಸಕರಾದ ಹೆಚ್ ಪಿ ಸುಧಾಮ್ ದಾಸ್ ಅವರು ಮಾತನಾಡಿ, ಕೃಷ್ಣ ಅವರು ರಾಜಕಾರಣದ ವಿಶೇಷ ನೆಲವಾದ ಮಂಡ್ಯದಿಂದ ಬಂದು ವಿಶಿಷ್ಟ ರಾಜಕಾರಣ ಮಾಡಿದರು. ಮಾಹಿತಿ ತಂತ್ರಜ್ಞಾನಕ್ಕೆ ಉತ್ತೇಜನ ನೀಡಿ ಐಟಿ ಬಿಟಿಯ ವಾರಸುದಾರ ಎಂದು ಖ್ಯಾತಿ ಪಡೆದರು ಎಂದರು.

    ಸಮರ್ಥ ನಿರ್ಹಹಣೆ:

    ಪರಿಷತ್ ಶಾಸಕರಾದ ಐವನ್ ಡಿ’ಸೋಜಾ ಅವರು ಮಾತನಾಡಿ, ವಿಧಾನಸಭೆ, ವಿಧಾನ ಪರಿಷತ್, ರಾಜ್ಯ ಸಭೆ, ಲೋಕಸಭೆ ಎಲ್ಲ ಕಡೆಗೂ ಉತ್ತಮವಾಗಿ ಕಾರ್ಯ ನಿರ್ವಹಿಸಿ ತಮಗೆ ವಹಿಸಿದ ಖಾತೆಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಿದರು ಎಂದರು.

    ಕ್ರೀಡಾ ಕ್ಷೇತ್ರದ ಒಲವು:

    ಪರಿಷತ್ ಶಾಸಕರಾದ ಗೋವಿಂದರಾಜು ಅವರು ಮಾತನಾಡಿ, ಕ್ರೀಡಾ ಕ್ಷೇತ್ರದ ಬಗ್ಗೆ ಸಹ ಕೃಷ್ಣ ಅವರಿಗೆ ಒಲವಿತ್ತು. ವಿಂಬಲ್ಡನ್ ಕ್ರೀಡಾಕೂಟ ವೀಕ್ಷಣೆಗಾಗಿ ವಿದೇಶಕ್ಕೆ ತೆರಳುತ್ತಿದ್ದರು ಎಂದರು.

    ಸ್ಮಾರ್ಟ್ ರಾಜಕಾರಣಿ:

    ಪರಿಷತ್ ಶಾಸಕರಾದ ಕೇಶವ ಪ್ರಸಾದ ಎಸ್ ಅವರು ಮಾತನಾಡಿ, ಕೃಷ್ಣ ಅವರು ತಮ್ಮ ಆಡಳಿತಾವಧಿಯಲ್ಲಿ ಗಮನಾರ್ಹ ಕೆಲಸ ಮಾಡಿ ಸ್ಮಾರ್ಟ್ ರಾಜಕಾರಣಿಯಾಗಿ ಗುರುತಿಸಿಕೊಂಡರು ಎಂದು ತಿಳಿಸಿದರು.

    ಸಂತಾಪ: ಮೃತರ ಗೌರವಾರ್ಥ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿ ಗೌರವ ಸಲ್ಲಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    “ಹೌದು ನಾನು ಏಜೆಂಟ್, ಆದರೆ ಮಾಫಿಯಾ ಕಮಿಷನ್ ಏಜೆಂಟ್ ಅಲ್ಲ”: ಸಿಎಂ ಡಿಕೆಶಿಗೆ ಆರ್. ಅಶೋಕ್ ತಿರುಗೇಟು

    June 11, 2026

    26 ವರ್ಷಗಳ ಹಿಂದೆ ಸರ್ಕಸ್ ಕಂಪನಿ ಜೊತೆ ಓಡಿಹೋಗಿದ್ದ ಸತೀಶ್ ‘ಸಲೀಂ’ ಆಗಿ ಮನೆಗೆ ವಾಪಸ್!

    June 11, 2026

    ಅಕ್ರಮ ಸಂಬಂಧಕ್ಕೆ ಮಹಿಳೆ ಬಲಿ; ಪ್ರಿಯಕರನ ಬಂಧನ!

    June 11, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ

    June 13, 2026

    ಕೊರಟಗೆರೆ: ರಾಜ್ಯದಲ್ಲಿ ವಿದ್ಯುತ್ ವಿತರಣಾ ಚಟುವಟಿಕೆಗಳನ್ನು ನಡೆಸಲು ಟಾಟಾ ಪವರ್ ಸೇರಿದಂತೆ ಯಾವುದೇ ಖಾಸಗಿ ಕಂಪನಿಗಳಿಗೆ ಅನುಮತಿ ನೀಡಬಾರದು ಎಂದು…

    ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ

    June 13, 2026

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026

    ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!

    June 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.