ಮೂಡುಬಿದರೆ: ಜೈನ ಧರ್ಮ ಪುರಾತನವಾದ ಧರ್ಮವಾಗಿದ್ದು ಸರ್ವಧರ್ಮಗಳೊಂದಿಗೆ ಸಮನ್ವಯ ಕಾಪಾಡಿಕೊಂಡು ಬರುತ್ತಿರುವ ಧರ್ಮವಾಗಿದೆ, ಎಲ್ಲಾ ಧರ್ಮಗಳನ್ನು ಪ್ರೋತ್ಸಾಹಿಸುತ್ತಿದ್ದು, ಈ ಪರಿ ಬೇರೆ ಧರ್ಮದಲ್ಲಿ ಕಾಣುವುದಿಲ್ಲ ಎಂದು ಮೂಡುಬಿದರೆ ಜೈನ ಮಠದ ಸ್ವಸ್ತಿ ಶ್ರೀ ಚಾರು ಕೀರ್ತಿ ಭಟ್ಟರಕ ಪಂಡಿತಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಅವರಿಂದ ಮೂಡುಬಿದರೆ ಲೆಪ್ಪ ಬಸದಿಯ ಶ್ರೀ ಚಂದ್ರನಾಥ ತೀರ್ಥಂಕರ ಹಾಗೂ ಮಾತೇ ಜ್ವಾಲಾ ಮಾಲಿನಿ ಅಮ್ಮನವರ 38ನೇ ವಾರ್ಷಿಕ ಲಟ್ಟಣಿಗೆ ಅಭಿಷೇಕ, ಧಾರ್ಮಿಕ ಸಭಾ, ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮೂಡುಬಿದಿರೆ ಬಾಗದಲ್ಲಿ ಶ್ರೀಮಂತ ಮನೆತನಗಳು, ಮಠಗಳು, ರಾಜರಿದ್ದರು ಜೈನ ಧರ್ಮದ ಆಚಾರ ವಿಚಾರಗಳನ್ನು ಜನ ಗೌರವಿಸುತ್ತಿದ್ದರು, ಎಲ್ಲಾ ಧರ್ಮಗಳನ್ನು ಪ್ರೋತ್ಸಾಹಿಸಿದ್ದಾರೆ ಇದೊಂದು ಸರ್ವಧರ್ಮ ಸಮನ್ವಯ ಕ್ಷೇತ್ರವಾಗಿತ್ತು ಎಂದರು.
ಮೂಡುಬಿದರೆಯಲ್ಲಿ ಜೈನ ಧರ್ಮಕ್ಕೆ ಪುರಾತನ ಇತಿಹಾಸವಿದೆ, ಉನ್ನತವಾಗಿ ಬೆಳೆದಿದೆ, ಪುತ್ತಿಗೆ ಅರಸರು, ಪರಂಪರೆ, ಕಾವ್ಯವಾಚನ ನೀಡಿದ್ದಾರೆ ಲೆಪ್ಪದ ಬಸದಿಗೆ ಈ ಹಿಂದೆ ವೈಭವದ ಪಂಚಕಲ್ಯಾಣಗಳು ನಡೆದಿವೆ ,ಕೆರೆ, ಕಟ್ಟೆ ಬಾವಿಗಳನ್ನು ಜನರಿಗೆ ಧಾರೆ ಎರೆದ ಜೈನ ಧರ್ಮ ಈ ಕಟ್ಟು ಕಟ್ಟಲೆಗಳನ್ನು ಕಾಪಾಡಿಕೊಂಡು ಬಂದಿದೆ ಎಂದರು .
ಬಸದಿಗೆ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು ಇದು ಜೀರ್ಣೋದ್ಧಾರಕ್ಕೆ ಮಾತ್ರ, ಎಂದ ಭಟ್ಟಾರಕ ಶ್ರೀಗಳು, ಆಚಾರ –ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು ಎಂದರು.
ಧರ್ಮಸ್ಥಳ ಜೈನ ಧರ್ಮೀಯರಿಗೆ ತವರು ಮನೆಯಾದರೂ ಇಲ್ಲಿ ಎಲ್ಲಾ ಸಮುದಾಯದವರು ಸೇರುತ್ತಾರೆ, ಶ್ರೀ ಹರ್ಷೇಂದ್ರ ಹೆಗಡೆಯವರು ಶಿಸ್ತಿಗೆ ಹೆಸರಾಗಿದ್ದು, ಧರ್ಮವಂತರು , ಅನುಭವ ವoತರು. ಧರ್ಮದ ಆಚರಣೆಯಿಂದ ಧರ್ಮದ ಪ್ರಭಾವನೆ ಆಗಲಿದೆ ಎಂದ ಅವರು, ಜನ ಎಷ್ಟೇ ಉನ್ನತ ಹುದ್ದೆಯವರಾದರು ಶ್ರಾವಕ ಆಚರಣೆ ಓದಬೇಕು ಶಿಬಿರಗಳು ,ವರ್ತನೆಗಳು, ಸ್ವಚ್ಛವಾಗಿರಬೇಕು ಸಂಸ್ಕಾರಗಳನ್ನು ನೀಡುವ ಕಾರ್ಯ ಧರ್ಮ ಮಾಡಬೇಕಿದೆ, ಈ ಹಿಂದೆ ಆದಿನಾಥ, ಮಹಾವೀರ ಹಾಗು ಚಂದ್ರನಾಥ ತೀರ್ಥಂಕರರು ಧರ್ಮಗಳನ್ನು ದಾರೆದಿದ್ದಾರೆ ಎಂದರು.
ಸ್ವಯಂಸೇವಕರಾಗಿ ದುಡಿದಾಗ, ಆತ್ಮಾವಲೋಕ ಲೋಕನ ಮಾಡಿಕೊಂಡಾಗ ಬಸದಿಗಳು ಸ್ವಚ್ಛವಾಗಲಿವೆ ಎಂದರು. ಶ್ರಾವಕರು ,ಪುರೋಹಿತರು ಎರಡು ಕಣ್ಣುಗಳಿದ್ದಂತೆ. ಬಸದಿಗಳ ರಕ್ಷಣೆಗೆ ಸ್ವಚ್ಛತೆ ಕೈಗೊಳ್ಳಬೇಕು, ಕೀಳಿರಿಮೆ ಮಾಡದೆ ಕರ್ತವ್ಯಗಳನ್ನು ಅಳವುಡಿಸಿಕೊಂಡು,ಕಟ್ಟು–ಕಟ್ಟಲೆಗಳನ್ನು ರಕ್ಷಿಸಿ ಉಳಿಸಿ ಬೆಳೆಸಬೇಕೆಂದರು.
ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ ಧರ್ಮ ಸಾಮ್ರಾಜ್ಯದ ಹಿಂದಿನ ನೆನಪುಗಳನ್ನು ಮಲಕು ಹಾಕಿ, ಮೂಡುಬಿದರೆ ಇದೊಂದು ದೈವತ್ವದ ನೆಲೆ ,ಧರ್ಮಭೂಮಿ , ಈಗಿರುವ ಬಸದಿಗಳಲ್ಲಿ ಪೂಜೆ ಆಗುವಂತೆ ಮಾಡಿ , ಸ್ವಚ್ಛತೆ ಕಾಪಾಡುವುದು ಅಗತ್ಯ. ಬಸದಿಗಳಲ್ಲಿ ಪುರೋಹಿತರುಗಳ ಕೊರತೆ ಇದೆ ಎಂದ ಅವರು, ಈ ಕಾಲಘಟ್ಟದಲ್ಲಿ ಸಿದ್ದರಾಮಯ್ಯ ಸರ್ಕಾರ 50 ಲಕ್ಷ ಬಿಡುಗಡೆ ಮಾಡಿದೆ ಎಂದರು.
ಸಮುದಾಯ ಭವನ, ಬಸದಿಗಳ ಜೀರ್ಣೋದ್ಧಾರ ವೇಣೂರು ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ 5 ಕೋಟಿ ರೂ.ಗಳನ್ನು ನೀಡಿದೆ, ಸರ್ಕಾರಕ್ಕೆ ತೆರಿಗೆ ಪಾವತಿಸುವಲ್ಲಿ ಜೈನ ಸಮುದಾಯ ಮೊದಲಿಗರು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಿಂಡಿಕೇಟ್ ನ ಮಾಜಿ ಸದಸ್ಯ ಕೆ. ಸುರೇಶ್ ಬಲ್ಲಾಳ್ ಮಾತನಾಡಿ ಜೈನ ಧರ್ಮ ಪುರಾತನವಾದ ಧರ್ಮವಾಗಿದ್ದು ಹಲವಾರು ಜೈನ ಬಸದಿಗಳು ದೇವಸ್ಥಾನಗಳಾಗಿವೆ ಎಂದರು .ಈ ಹಿಂದೆ ಹಳ್ಳಿ ಹಳ್ಳಿಗಳಲ್ಲಿ ಬಸದಿಗಳಿದ್ದವು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಿ.ಹರ್ಷೇಂದ್ರ ಹೆಗಡೆ ಮಾತನಾಡಿ, ಕ್ಷೇತ್ರದಲ್ಲಿ ಅನ್ನದಾನ, ವಸ್ತ್ರದಾನ ,ವಿದ್ಯಾದಾನ ಮಾಡಿದ್ದು ಅಭಯದಾನ ಕ್ಷೇತ್ರದಲ್ಲಿ ನಡೆಯುತ್ತಿದೆ. ಧರ್ಮ ಕ್ಷೇತ್ರಗಳ ಸ್ವಚ್ಛತೆ , ಶುಚಿತ್ವ ಕಾಪಾಡುವುದು ಎಲ್ಲಾ ಧರ್ಮಗಳ ಪ್ರಮುಖವಾಗಿದ್ದು,ಈ ಬಗ್ಗೆ ಚಿಂತನೆ ಅಗತ್ಯ ಎಂದರು.
ಬಸದಿಗಳ ಜೀರ್ಣೋದ್ಧಾರದಿಂದ ಸಮಾಜದಲ್ಲಿ ಐಕ್ಯತೆ ಬರುತ್ತದೆ , ಬಸದಿ ಸಮುದಾಯಗಳ ಜೀರ್ಣೋದ್ಧಾರದಿಂದ ಉತ್ತಮ ಪರಿಸರ ಬೆಳೆಯುತ್ತದೆ ಎಂದ ಅವರು, ವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು. ಭೂ– ಮಸೂದೆ ತಂದ ನಂತರ ಬಸದಿಗಳ ನಿರ್ವಹಣೆ ಕಷ್ಟವಾಗಿತ್ತು ಎಂದು ಅವರು, ವಿದ್ಯಾವಂತರಾಗಿ, ವಿಚಾರವಂತರಾಗಿ, ಆಚಾರವಂತರಾದಾಗ ಬೆಲೆ ಬರಲಿದೆ ಎಂದರು.
ಇದೇ ಸಂದರ್ಭದಲ್ಲಿ ಅರಳ ರಾಜೇಂದ್ರ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಮಲ್ ಕುಮಾರ್ ಬೆಟೆಗೇರಿ, ಅರಮನೆ ಎಲ್.ಎಂ. ವೀರೇಂದ್ರ, ಮೂಡುಬಿದ್ರೆ ಅರಮನೆಯ ಕುಲದೀಪ್ .ಎಂ. ಚೌಟ, ನಿಖಿಲ್, ಮಿಥುನ್ ಚೋಟ, ಸಿ.ಎಂ.ಸುರೇಶ್ ಕುಮಾರ್ , ಮೊಕೇಶ್ವರ ಆದರ್ಶ ಸೇರಿದಂತೆ ಅರಮನೆ ,ಕೊಂಡೆ ಮನೆ ,ಚೌಟ ಅರಮನೆ ಸದಸ್ಯರುಗಳು ,ಶ್ರಾವಕ -ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕು .ಖ್ಯಾತಿ ಪ್ರಾರ್ಥಿಸಿದರು. ಪ್ರಭಾತ್ ಬಲ್ಲಾಳ್ ಸ್ವಾಗತಿಸಿ –ಕಾರ್ಯಕ್ರಮ ನಿರೂಪಿಸಿದರು. ಸಿ.ಎಂ. ಆದರ್ಶ ವಂದಿಸಿದರು.
ವರದಿ: ಜೆ.ರಂಗನಾಥ. ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx