ಪಾವಗಡ: ಯ ನಾ ಹೊಸಕೋಟೆ ಹೋಬಳಿಯ ದೊಡ್ಡಲಂಬಾಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕ ಆಂಜನೇಯಲು ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯ ದಿನವೆಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಂವಿಧಾನ ಜಾರಿಗೆ ಬಂದ ಈ ದಿನ ಬಹಳ ವಿಶೇಷವಾಗಿದ್ದು, ಭಾರತ ಸ್ವಾತಂತ್ರ್ಯಕ್ಕೆ ಹೋರಾಡಿದ ಹಲವು ಪ್ರಮುಖ ನಾಯಕರನ್ನು ಮತ್ತು ಸಂವಿಧಾನ ಜಾರಿಗೆ ಶ್ರಮಿಸಿದಂತಹ ಪ್ರತಿಯೊಬ್ಬರು ನಮಗೆ ಸ್ಪೂರ್ತಿಯಾಗಿದ್ದಾರೆ. ಈ ದಿನ ಧ್ವಜಾರೋಹಣ ಮಾಡಿದ ನನಗೆ ಹೆಮ್ಮೆಯಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕರಾದ ಆಂಜನೇಯಲು, SDMC ಅಧ್ಯಕ್ಷ ಸೀನ ನಾಯ್ಕ, ಅಂಗವಾಡಿ ಶಿಕ್ಷಕಿ ಶಾನಮ್ಮ, ಊರಿನ ಗ್ರಾಮಸ್ಥರಾದ ಹನುಮಂತ ನಾಯ್ಕ, ಲಾಲ ನಾಯ್ಕ, ಹಳೆಯ ವಿದ್ಯಾರ್ಥಿಗಳಾದ ಹರೀಶ್ ನಾಯ್ಕ, ನಾರಾಯಣ ನಾಯ್ಕ, ಚೇತನ್, ನಂದೀಶ್ ನಾಯ್ಕ, ಶ್ರೀಕಾಂತ್ ನಾಯ್ಕ, ಹಾಜರಿದ್ದರು,
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy