ಇಂದಿನ ಕಾಲದಲ್ಲಿ ಎಲ್ಲರ ಬಳಿಯೂ ಮೊಬೈಲ್ ಇರುತ್ತದೆ.ಅದರಲ್ಲೂ ಇಂಟರ್ನೆಟ್ ಇರುವ ಮೊಬೈಲ್ ಇದ್ದರೆ ಮುಗಿದೇ ಹೋಯ್ತು. ಹಿಂದೂ ಮುಂದು ನೋಡದೇ ತಮಗೆ ಬಂದ ಸುದ್ಧಿಯನ್ನು ಇನ್ನೊಬ್ಬರಿಗೆ ಕಳಿಸುವುದೇ ಕೆಲಸವಾಗಿಬಿಟ್ಟಿದೆ.
ಇದೇ ತರಹ ಇಲ್ಲೊಂದು ಸುಳ್ಳು ಸುದ್ಧಿ ಕಳೆದ ಎರಡು ದಿನಗಳಿಂದ ಸಖತ್ ವೈರಲ್ ಆಗಿದೆ” . ಗುಜರಾತ್’ನಲ್ಲಿ 12 ವರ್ಷದ ನಂತರ ಗಂಡು ಮಗುವಿಗೆ ಜನ್ಮ ಕೊಟ್ಟ ತಾಯಿಗೆ , ವೈದ್ಯರು ತಾಯಿ ಮತ್ತು ಮಗು ಇಬ್ಬರಲ್ಲಿ ಒಬ್ಬರನ್ನು ಮಾತ್ರ ಉಳಿಸಬಹುದು ಎಂದಾಗ , ತಾಯಿ ಮಗುವನ್ನು ಉಳಿಸಿ ಈ ಮಗು ಜಗತ್ತನ್ನು ನೋಡಲಿ ಎಂದು ಹೇಳಿ 2 ನಿಮಿಷ ಮಗುವನ್ನು ಮುದ್ದಾಡಿ ಪ್ರಾಣ ಬಿಟ್ಟಳು ” ಎಂಬ ಕಟ್ಟುಕಥೆಯ ಮತ್ತು ಸುಳ್ಳು ಸುದ್ಧಿಯ ಸತ್ಯಾಸತ್ಯತೆಯನ್ನು ಬೆನ್ನತ್ತಿದ್ದ ವೇಳೆ ಇಂದೊಂದು ಸುಳ್ಳು ಸುದ್ಧಿ ಎಂಬುದು ಖಚಿತವಾಗಿದೆ.
ಹೌದು, ಈ ಫೋಟೋ ಬ್ರೆಜಿಲ್ ದೇಶದ್ದು, ಡಿಸೆಂಬರ್ 14, 2015ರಲ್ಲಿ Facebookನಲ್ಲಿ ಅಪ್ಲೋಡ್ ಆದ ಚಿತ್ರವಿದು. ಇದರ ಲಿಂಕ್ ಅನ್ನು ಕೆಳಗಡೆ ಹಾಕಲಾಗಿದೆ.
ತಾಯಿಗಿಂತ ದೇವರಿಲ್ಲ ಎಂಬುದು ನೂರಕ್ಕೆ ನೂರು ಸತ್ಯ , ಆದರೆ ಭಾರತೀಯರ ಈ ಭಾವನೆ ಜೊತೆ ಆಟ ಆಡುವ ಧುರಳರ ಬಗ್ಗೆ ಎಚ್ಚರವಾಗಿರಿ ಮತ್ತು ಒಂದು ಸುದ್ಧಿಯನ್ನು ಇನ್ನೊಬ್ಬರಿಗೆ ಕಳುಹಿಸುವ ಮುನ್ನ ಅದರ ವಾಸ್ತವ ಸತ್ಯಾಸತ್ಯತೆಯನ್ನು ಅರಿಯಿರಿ. ಇಲ್ಲದಿದ್ದರೆ ಪೋಲೀಸರ ಅತಿಥಿಯಾಗಲು ಸಿದ್ಧರಾಗಿರಿ. ಆಯ್ಕೆ ನಿಮಗೆ ಬಿಟ್ಟದ್ದು.
ವರದಿ : ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy