ಸಾಕಷ್ಟು ಜನರು ಚಳಿಗಾಲದಲ್ಲಿ ಸ್ನಾನ ಮಾಡುವುದನ್ನು ಕಡಿಮೆ ಮಾಡುತ್ತಾರೆ. ಚಳಿಗಾಲದಲ್ಲಿ ಹೆಚ್ಚು ಬೆವರುವುದಿಲ್ಲ. ಹಾಗಾಗಿ ಸ್ನಾನ ಮಾಡದೇ ಇರುವವರ ಸಂಖ್ಯೆ ಹೆಚ್ಚು. ಆದರೆ ಚಳಿಗಾಲದಲ್ಲಿ ಸ್ನಾನ ಮಾಡಲೇ ಬೇಕೇ? ಮಾಡದಿದ್ದರೂ ಸಾಕೆ? ಎನ್ನುವುದನ್ನು ತಿಳಿಯೋಣ ಬನ್ನಿ…
ತಜ್ಞರ ಪ್ರಕಾರ ಚಳಿಗಾಲದಲ್ಲಿ ನಿಯಮಿತವಾಗಿ ಸ್ನಾನ ಮಾಡುವುದು ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಂತೆ. ನಮ್ಮ ದೇಹದ ವೈಯಕ್ತಿಕ ನೈರ್ಮಲ್ಯ ಕಾಪಾಡಲು ನಿಯಮಿತ ಸ್ನಾನ ಅತ್ಯಗತ್ಯವಾಗಿದೆ.
ಚಳಿಗಾಲದಲ್ಲಿ ಬೆವರು ಬಿಡುವುದು ಕಡಿಮೆಯಾದರೂ ನಿಮ್ಮ ದೇಹವು ತೈಲವನ್ನು ಉತ್ಪಾದಿಸುತ್ತದೆ. ಸತ್ತ ಚರ್ಮದ ಕೋಶಗಳನ್ನು ಹೊರ ಹಾಕುತ್ತದೆ ಮತ್ತು ಬ್ಯಾಕ್ಟೀರಿಯಾವನ್ನು ಸಂಗ್ರಿಹಿಸುತಂತೆ. ನಿಯಮಿಯ ಸ್ನಾನವು ಕಶ್ಮಲಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದರಿಂದ ಸೋಂಕು, ದೇಹದ ವಾಸನೆ, ನೈರ್ಮಲ್ಯ ಸಂಬಂಧಿಕ ಸಮಸ್ಯೆಗಳಿಂದ ನೀವು ಪಾರಾಗಬಹುದು.
ಚಳಿಗಾಲದಲ್ಲಿ ಬೆಚ್ಚಗಿನ ನೀರಿನ ಸ್ನಾನ ಮಹತ್ವದ್ದಾಗಿದೆ. ಇದು ದೇಹದ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ನಿಮ್ಮ ದೇಹವು ಶೀತಗಳು ಮತ್ತು ಜ್ವರದಂತಹ ಸಾಮಾನ್ಯ ಚಳಿಗಾಲದ ಕಾಯಿಲೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೋರಾಡಲು ಸಹಾಯ ಮಾಡುತ್ತದೆ. ಬೆಚ್ಚಗಿನ ಸ್ನಾನವು ಮೂಗಿನ ಹಾದಿಗಳನ್ನು ತೆರೆಯಲು ಮತ್ತು ಕಟ್ಟಿದ ಮೂಗಿ ಸಮಸ್ಯೆಗೆ ಪರಿಹಾರವಾಗಿದೆ.
ಬೆಚ್ಚಗಿನ ನೀರಿನ ಸ್ನಾನವು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಇದು ಮನಸ್ಸು ಶಾಂತಗೊಳಿಸಲು ಸಹಕಾರಿಯಾಗುತ್ತದೆ. ಇದರಿಂದ ಉತ್ತಮ ನಿದ್ದೆಯೂ ಸಾಧ್ಯವಾಗುತ್ತದೆ. ಅಲ್ಲದೇ ಚರ್ಮದ ಆರೋಗ್ಯಕ್ಕೂ ಬಹಳ ಉತ್ತಮವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx