nammatumakuru

    Subscribe to Updates

    Get the latest creative news from FooBar about art, design and business.

    What's Hot

    ನನ್ನ ದೃಷ್ಟಿಕೋನದಲ್ಲಿ ಆತ್ಮಗಳ ಪರಿಕಲ್ಪನೆ

    September 28, 2025

    ಬೀದರ್  | ಪೋಷಕತ್ವ ಯೋಜನೆ ಜಾಗೃತಿ ತರಬೇತಿಯ ಕಾರ್ಯಕ್ರಮ

    September 27, 2025

    ಸರಗೂರು | ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ

    September 27, 2025
    Facebook Twitter Instagram
    ಟ್ರೆಂಡಿಂಗ್
    • ನನ್ನ ದೃಷ್ಟಿಕೋನದಲ್ಲಿ ಆತ್ಮಗಳ ಪರಿಕಲ್ಪನೆ
    • ಬೀದರ್  | ಪೋಷಕತ್ವ ಯೋಜನೆ ಜಾಗೃತಿ ತರಬೇತಿಯ ಕಾರ್ಯಕ್ರಮ
    • ಸರಗೂರು | ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ
    • ಪೋತಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅವಿರೋಧ ಆಯ್ಕೆ
    • ಸೆ.28ರಂದು ಪಾವಗಡದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ: ಯತ್ನಾಳ್ ಭಾಗಿ
    • ಇಳಿಯುವ ಮುನ್ನವೇ ಚಲಿಸಿದ ಬಸ್: ಮಗಳ ಮನೆಗೆ ಹೋಗಿ ಬರುತ್ತಿದ್ದ ಮಹಿಳೆ ಸಾವು!
    • ಬೀದರ್ | 1. 34 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕ ವಸ್ತು ನಾಶ
    • ತುಮಕೂರು | ಆಮೆ ವೇಗದಲ್ಲಿ ಸಾಗಿದ ಜಾತಿವಾರು ಸಮೀಕ್ಷೆ: ಕಾಡುತ್ತಿರುವ ಸಮಸ್ಯೆಗಳೇನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೋಟೆ ಕೊತ್ತಲುಗಳ ನಾಡು: ದಕ್ಷಿಣದ ಹಂಪಿ ನಿಡಗಲ್ಲು ಬೆಟ್ಟದ ಶ್ರೀ ಕಷ್ಟಹರಣ ಪಾರ್ಶ್ವನಾಥ ತೀರ್ಥಂಕರ ಸನ್ನಿಧಿ
    ಲೇಖನ January 31, 2025

    ಕೋಟೆ ಕೊತ್ತಲುಗಳ ನಾಡು: ದಕ್ಷಿಣದ ಹಂಪಿ ನಿಡಗಲ್ಲು ಬೆಟ್ಟದ ಶ್ರೀ ಕಷ್ಟಹರಣ ಪಾರ್ಶ್ವನಾಥ ತೀರ್ಥಂಕರ ಸನ್ನಿಧಿ

    By adminJanuary 31, 2025No Comments3 Mins Read
    jaina basadi

    ಲೇಖನ : ಜೆ ರಂಗನಾಥ ತುಮಕೂರು

    ನಿಡಗಲ್ ದುರ್ಗ ತುಮಕೂರು ಜಿಲ್ಲೆ, ಪಾವಗಡ ತಾಲೂಕಿನ ,ಐತಿಹಾಸಿಕ ತಾಣ ಇದನ್ನ “ದಕ್ಷಿಣದ ಹಂಪಿ” ಎಂದೆಲ್ಲ ಕರೆಯುತ್ತಾರೆ.


    Provided by
    Provided by
    Provided by

    ಈ ಕ್ಷೇತ್ರಕ್ಕೆ ನೀಲಾಂಜನಗಿರಿ ,ನೀಲಾವತಿ, ಕಾಳಂಜನ ಗಿರಿ ಹಾಗೂ ಕಾಳಂಜನ ದುರ್ಗಕರೆಯುತ್ತಿದ್ದರು. ಐತಿಹಾಸಿಕ ನಿಡಗಲ್ ಬೆಟ್ಟ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಹಲವು ರಾಜ ಮನೆತನಗಳ ರಾಜಧಾನಿಯಾಗಿ ಮೆರೆದು ಇಂದು ಹಾಳು ಕೊಂಪೆಯಾಗಿದೆ.
    ಸಮುದ್ರಮಟ್ಟದಿಂದ 2,669 ಆಡಿಗಳು,(1149 ಮೀಟರ್ ಗಳು) ಎತ್ತರದಲ್ಲಿರುವ ಈ ಪ್ರದೇಶವನ್ನು ನೊಳಂಬರು, ಚೋಳರು, ಚಾಲುಕ್ಯರು, ವಿಜಯನಗರ ಅರಸರು, ಹೊಯ್ಸಳರು, ಹೈದರಾಲಿ –ಟಿಪ್ಪು ಸುಲ್ತಾನ್, ಹರತಿ — ನಿಡಗಲ್ ಪಾಳೆಗಾರರು ,ಆಳ್ವಿಕೆ ನಡೆಸಿದ್ದಾರೆ. ಇವರು ಹಲವಾರು ದೇಗುಲಗಳು, ಕೋಟಿ ಕೊತ್ತಲುಗಳು, ಕಲ್ಯಾಣಿ ಗಳನ್ನು ಕೊಟ್ಟು ಪಾವನರಾಗಿದ್ದಾರೆ.

    ನಿಡುಗಲ್ಲು ಬೆಟ್ಟ ನಿಡಿದಾದ ಕೊಡುಗಲ್ಲಿನಂತೆ ಚೂಪಾಗಿರುವ ಈ ಬೆಟ್ಟ ಬಿಸಿಲಿನಲ್ಲಿ ಮಿಂಚುತ್ತಿರುತ್ತದೆ. ಸುತ್ತಲು ಆಚ್ಚಹಸಿರು, ಗಿರಿ ಕಂದರಗಳು, ಪಾಳು ಬಿದ್ದ ದೇಗುಲಗಳು ,ಕೋಟೆ ಕೊತ್ತಲುಗಳು, ಮಾಸ್ತಿ ಗಲ್ಲುಗಳು ,ವೀರಗಲ್ಲುಗಳು , ನಿಷದಿ ಕಲ್ಲುಗಳು, ಫಿರಂಗಿಗಳು, ಕಲ್ಯಾಣಿಗಳು ಶಾಸನಗಳಿದ್ದು ಇವು ಇತಿಹಾಸವನ್ನೇ ಹೇಳುತ್ತವೆ. ಇದೊಂದು ತುಮಕೂರು ಜಿಲ್ಲೆಯಲ್ಲಿರುವ ದಕ್ಷಿಣದ ಹಂಪಿಯಾಗಿದೆ.

    ಇಲ್ಲಿನ ಶ್ರೀ ಕಷ್ಟ ಹರಣ ಪಾರ್ಶ್ವನಾಥ ಬಸದಿ ಪುರಾತನವಾದದ್ದು , ನೆಲಮಟ್ಟದಿಂದ 10 ಅಡಿಗಳ ಎತ್ತರದ ಬೆಟ್ಟದ ಮೇಲೆ ಮೂರು ಅಡಿಗಳ ಎತ್ತರದ ಜಕತಿಯ ಮೇಲೆ ನಿರ್ಮಿಸಲಾಗಿದೆ. ಎರಡು ಗರ್ಭಗುಡಿಗಳಿಂದ ನಿರ್ಮಾಣವಾಗಿರುವ ಈ ಬಸದಿ ಸುಖನಾಸಿ, ನವರಂಗಗಳನ್ನ ಹೊಂದಿದೆ ಪ್ರಧಾನ ಬಿಂಬ ಶ್ರೀ ಕಷ್ಟ ಹರಣ ಪಾರ್ಶ್ವನಾಥ ವಿಗ್ರಹ ಸುಮಾರು ಐದು ಅಡಿಗಳ ಎತ್ತರವಿದ್ದು, ಇದನ್ನ ಪುನರ್ ಪ್ರತಿಷ್ಠಾಪಿಸಲಾಗಿದೆ ಹಾಗೂ ಮತ್ತೊಂದು ಗರ್ಭಗುಡಿಯಲ್ಲಿ ಶ್ರೀ ಪದ್ಮಾವತಿ ಅಮ್ಮನವರ ನೂತನ ಬಿಂಬವನ್ನ ಪ್ರತಿಷ್ಠಾಪನೆ ಮಾಡಲಾಗಿದೆ.

    ಪ್ರಾಚೀನ ಶ್ರೀ ಪಾರ್ಶ್ವನಾಥ ಸ್ವಾಮಿ ವಿಗ್ರಹ 7 ಎಡೆ ಸರ್ಪ ಗಳಿಂದ ಕೂಡಿದ್ದು, ಕರಿ ಕಲ್ಲಿನ ಮೂರ್ತಿ ಮನಮೋಹಕವಾಗಿದೆ .ಬಸದಿಯ ಮುಂಭಾಗ ಸುಮಾರು 30 ಅಡಿ ಎತ್ತರದ ಮಾನಸ್ತಂಭ ವಿದೆ ಅದರ ಮೇಲೆ ಚತುರ್ಮುಖ ಬಿಂಬಗಳಿವೆ.

    ಚೋಳರ ದೊರೆ ಇಮ್ಮಡಿ ಈರಂಗೋಳನ ಕಾಲದಲ್ಲಿ ಗಂಗಯ್ಯ, ಮಾರಯ್ಯ ಹಾಗೂ ಬಚ್ಚಲದೇವಿ ತಮ್ಮ ಗುರುಗಳಾದ ಶ್ರೀ ನೇಮೀನಾಥ ಪಂಡಿತರ ಸಲಹೆಯಂತೆ ಕ್ರಿಸ್ತ.ಶಕ 1232 ರಲ್ಲಿ ಈ ಜೈನ ಬಸದಿ ನಿರ್ಮಾಣ ಮಾಡಿದರೆoದು ಶಾಸನಗಳಲ್ಲಿ ಉಲ್ಲೇಖವಿದೆ .ಇದನ್ನು ಜೋಗ ವಟ್ಟಿಗೆಯ ಬಸದಿ, ಶ್ರೀ ಪಾರ್ಶ್ವನಾಥ ಬಸದಿ, ಶ್ರೀ ಕಷ್ಟಹರಣ ಪಾರ್ಶ್ವನಾಥ ಬಸದಿ ಎಂದೆಲ್ಲ ಕರೆಯುತ್ತಾರೆ.

    ನಿಡಗಲ್ ಬೆಟ್ಟದ ಶ್ರೀ ಕಷ್ಟಹರಣ ಪಾರ್ಶ್ವನಾಥ ಜೈನಬಸದಿ ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಆಡಳಿತ ವ್ಯಾಪ್ತಿಗೆ ಸೇರಿದೆ.
    ಈ ಪುರಾತನ ಜೈನ ಬಸದಿ ರಾಜರ ಆಳ್ವಿಕೆ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು .ತದನಂತರ ಹಾಳು ಕೊಂಪೆಯಾಗಿ ಶಿಥಿಲವಸ್ತೆ ತಲುಪಿದೆ. ಈ ಭಾಗದ ಶ್ರಾವಕರೆಲ್ಲ ಊರು ತೊರೆದು ಬೇರೆಡೆಗೆ ಹೋಗಿ ನೆಲೆಸಿದ್ದಾರೆ. ಕೆಲ ದಶಕಗಳ ಹಿಂದೆ ಜೈನಮುನಿ ಬೆಳಗಾವಿ ಜಿಲ್ಲೆ ಶಮನೇವಾಡ ದ ಮುನಿಶ್ರೀ ಧರ್ಮ ಭೂಷಣ ಮಹಾರಾಜರು 1986 ರಲ್ಲಿ ವಿಹಾರ ಅರ್ಥವಾಗಿ ಈ ಭಾಗದಲ್ಲಿ ಸಂಚರಿಸುವಾಗ ಇಲ್ಲಿ ಜೈನ ಬಸದಿ ಇರುವ ವಿಷಯ ತಿಳಿದು ಈ ಬಸದಿಗೆ ಕಾಯಕಲ್ಪ ನೀಡಲು ಶ್ರಮಿಸಿದರು.

    1998ರಲ್ಲಿ ಮಾತೆ ಶ್ರೀ ಕಾಂಚನಮತಿ ಮಾತಾಜಿಯವರು ಈ ಬಸದಿಯ ದರ್ಶನ ಪಡೆದು ಮುನಿಶ್ರೀ ವಿಮಲಸಾಗರ ಮಹಾರಾಜರ ಆಶಯದಂತೆ ಈ ಜೈನ ಬಸದಿಗೆ ಶ್ರೀ ಕಷ್ಟ ಹರಣ ಪಾರ್ಶ್ವನಾಥ ಬಸದಿ ಎಂದು ನಾಮಕರಣ ಮಾಡಿದರು.

    2009ರಲ್ಲಿ ಶ್ರೀ ಕ್ಷೇತ್ರ ಹೊಂಬುಜ ಜೈನಮಠದ ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಶ್ರೀ ಮಾತೆ ಪದ್ಮಾವತಿ ಅಮ್ಮನವರನ್ನು ಪ್ರತಿಷ್ಠಾಪಿಸಿದರು. ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿ ಶ್ರೀ ಲಕ್ಷ್ಮೀಸೇನಾ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಮೂರ್ತಿಗೆ ವಜ್ರ ಲೇಪನ ಮುಖವಾಡ ರಚಿಸಿ ಕೊಟ್ಟರು ಹಾಗೂ ಪಂಚಕಲ್ಯಾಣ ನೆರವೇರಿಸಿದರು.

    ಇಲ್ಲಿ ಶ್ರೀ ಪಾರ್ಶ್ವನಾಥರ 5 ಅಡಿಯ ಖಡ್ಗಾಸನ ಮೂರ್ತಿ ಇದೆ .ಶ್ರೀ ಕ್ಷೇತ್ರ ನಿಡಗಲ್ ಬೆಟ್ಟದ ಶ್ರೀ ಕಷ್ಟಹರಣ ಪಾರ್ಶ್ವನಾಥ ಜೈನ ಬಸದಿಗೆ ಹಲವಾರು ಸಾಹಿತಿಗಳು, ಸಂಶೋಧಕರು , ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಹೊಸ ಬೆಳಕು ಚೆಲ್ಲಿದ್ದಾರೆ. ಈ ಪುರಾತನ ಜೈನ ಬಸದಿಗೆ ಕಾಯಕಲ್ಪದಲ್ಲಿ ಸ್ಥಳೀಯರು ಜೈನ ಸಮಾಜದ ಕೊಡುಗೆ ಕಾರ್ಯ ಪ್ರಶಂಸನಿಯ.

    ಈ ಐತಿಹಾಸಿಕ ನಿಡಗಲ್ ಬೆಟ್ಟದ ಶ್ರೀ ಕಷ್ಟಹರಣ ಪಾರ್ಶ್ವನಾಥ ಸ್ವಾಮಿ ಸನ್ನಿಧಿ ರಾಜಧಾನಿ ಬೆಂಗಳೂರಿನಿಂದ 160 ಕಿ.ಮೀ, ಜಿಲ್ಲಾ ಕೇಂದ್ರ ತುಮಕೂರಿನಿಂದ 129 ಕಿ.ಮೀ ,ತಾಲೂಕು ಕೇಂದ್ರದಿಂದ 33 ಕಿ.ಮೀ ,ಚಳ್ಳಕೆರೆಯಿಂದ 60 ಕಿ.ಮೀ, ಪಾವಗಡ -ಚಳ್ಳಕೆರೆ ರಾಜ್ಯ ಹೆದ್ದಾರಿಯ ದೊಡ್ಡೇನಹಳ್ಳಿ ಕ್ರಾಸ್ ನಿಂದ 8 ಕಿಲೋಮೀಟರ್ ಹಾಗೂ ರಂಗಸಮುದ್ರದಿಂದ 9 ಕಿ.ಮೀ. ಗಳ ದೂರವಿದೆ . ಇತ್ತೀಚೆಗೆ ಕಾಂಕ್ರೀಟ್ ರಸ್ತೆ ಅಳವಡಿಸಲಾಗಿದೆ. ಅಲ್ಲದೆ ಇದೆ ಹೆದ್ದಾರಿಯ ಶೈಲಾಪುರ ಗೇಟ್ ನಿಂದ 8 ಕಿ.ಮೀ. ದೂರವಿದೆ. ಬೆಳ್ಳಿ ಬಟ್ಟಲು ಗೇಟ್ ನಿಂದ 6 ಕಿ.ಮೀ., ದೂರವಿದೆ.

    ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನೀಡಿದ ದುರ್ಗದ ಶ್ರೀ ಕಷ್ಟಹರಣ ಪಾರ್ಶ್ವನಾಥ ಜಿನಮಂದಿರದ ವಾರ್ಷಿಕ ಪೂಜಾ ಮಹೋತ್ಸವ 2025 ನೇ ಫೆಬ್ರವರಿ 2 ರಂದು ಭಾನುವಾರ ನಡೆಯಲಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

     

    admin
    • Website

    Related Posts

    ನನ್ನ ದೃಷ್ಟಿಕೋನದಲ್ಲಿ ಆತ್ಮಗಳ ಪರಿಕಲ್ಪನೆ

    September 28, 2025

    ಮಹಾಲಯ ಅಮಾವಾಸ್ಯೆ  | ಪಿತೃ ಪಕ್ಷ – ಎಡೆ ಹಬ್ಬ

    September 22, 2025

    ಬೆಳಕಿನ ವೇಗದ ಬಗ್ಗೆ ಒಂದು ಸಣ್ಣ ಆತ್ಮಾವಲೋಕನ

    August 13, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ನನ್ನ ದೃಷ್ಟಿಕೋನದಲ್ಲಿ ಆತ್ಮಗಳ ಪರಿಕಲ್ಪನೆ

    September 28, 2025

    ನಾನು ಈ ಲೇಖನವನ್ನು ಬರೆಯುತ್ತಿರುವ ಸಂದರ್ಭದಲ್ಲಿ ಈ ಹಿಂದೆ ಆತ್ಮಗಳಿಗೆ ಸಂಬಂಧಿಸಿದಂತೆ ಯಾವ ಲೇಖನವನ್ನೂ ಓದಿರುವುದಿಲ್ಲ ಎಂದು ಸ್ಪಷ್ಟೀಕರಣ ಮಾಡುತ್ತಾ…

    ಬೀದರ್  | ಪೋಷಕತ್ವ ಯೋಜನೆ ಜಾಗೃತಿ ತರಬೇತಿಯ ಕಾರ್ಯಕ್ರಮ

    September 27, 2025

    ಸರಗೂರು | ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ

    September 27, 2025

    ಪೋತಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅವಿರೋಧ ಆಯ್ಕೆ

    September 27, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.