ಹುಬ್ಬಳ್ಳಿ: ಹುಬ್ಬಳ್ಳಿಯ ಶ್ರೀ ಅನಂತನಾಥ ಬಸದಿಯಲ್ಲಿ ಶ್ರೀ ಪದ್ಮಾವತಿ ಮಹಿಳಾ ಮಂಡಲ ಆಯೋಜನೆ ಯಲ್ಲಿ ಶ್ರೀ ವರ್ಧಮಾನ ಪರಿಹಾರ ಸೇವಾ ಟ್ರಸ್ಟ್ ರಾಜಸ್ಥಾನದ ಬಿವಡಿ ಸಹಯೋಗದೊಂದಿಗೆ ಉಚಿತ ತರಬೇತಿ ಹಾಗೂ ಸವಲತ್ತುಗಳ ವಿತರಣೆ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ದೆಹಲಿಯ ಅಶೋಕ್ ಜೈನ ಆಶಾ ಸುದರ್ಶನ್ ಜೈನ್, ವಿಮಲ್ ತಾಳಿಕೋಟೆ, ಮಹೇಶ್ ಕಾಸರ್, ವಿನಾಯಕ ಶೆಟ್ಟಿ, ಭಾಗವಹಿಸಿ ಮಾರ್ಗದರ್ಶನ ನೀಡಿದರು.
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಧ್ಯಕ್ಷರಾದ ಪದ್ಮಪ್ರಕಾಶ್ ಪದ್ಮಾವತಿ ಜೈನ ಮಹಿಳಾ ಸಮಾಜದ ಪದಾಧಿಕಾರಿಗಳು, ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳುಉಪಸ್ಥಿತರಿದ್ದರು.
ಸುಧಾ ಶಿರಗುಪ್ಪಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಸಂತ ಜೈನ್ ಕಾರ್ಯಕ್ರಮ ನಿರೂಪಿಸಿದರು. ಆರ್ಥಿಕವಾಗಿ ಹಿಂದುಳಿದವರಿಗೆ ಹೊಲಿಗೆ ತರಬೇತಿ. ತರಬೇತಿ ಪಡೆದವರಿಗೆ ಉಚಿತ ಹೊಲಿಗೆ ಯಂತ್ರಗಳ ವಿತರಣೆ ಹಾಗೂ ಆರ್ಥಿಕ ಸಹಕಾರ, ಆಹಾರದ ಕಿಟ್ ಗಳ ವಿತರಣೆ ,ಜೈನ ಮಹಿಳೆಯರ ಮಕ್ಕಳಿಗೆ ಸ್ಕಾಲರ್ಶಿಪ್ ಗಳ ವಿತರಿಸಯಿತು. ಇದಕ್ಕೆ ಬೆನ್ನೆಲುಬಾಗಿ ವರ್ಧಮಾನ ಪರಿಹಾರ ಸೇವಾ ಟ್ರಸ್ಟ್ ಎಲ್ಲಾ ರೀತಿಯ ಸಹಕಾರ ನೀಡಿತು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಪದ್ಮಾವತಿ ಮಹಿಳಾ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ: ಜೆ.ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4