nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಿಪಟೂರು:  ಟ್ಯೂಷನ್ ಗೆ ಹೋಗಿ ನಾಪತ್ತೆಯಾಗಿದ್ದ ಬಾಲಕ ಪತ್ತೆ | ನಮ್ಮ ತುಮಕೂರು ಫಲಶ್ರುತಿ

    January 13, 2026

    ತುಮಕೂರು:  ಜ.16ರಂದು ಮಿನಿ ಉದ್ಯೋಗ ಮೇಳ

    January 13, 2026

    ಜ.21ಕ್ಕೆ ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ: ಉಪರಾಷ್ಟ್ರಪತಿಗಳು ಸೇರಿದಂತೆ ಗಣ್ಯರ ಭಾಗಿ

    January 13, 2026
    Facebook Twitter Instagram
    ಟ್ರೆಂಡಿಂಗ್
    • ತಿಪಟೂರು:  ಟ್ಯೂಷನ್ ಗೆ ಹೋಗಿ ನಾಪತ್ತೆಯಾಗಿದ್ದ ಬಾಲಕ ಪತ್ತೆ | ನಮ್ಮ ತುಮಕೂರು ಫಲಶ್ರುತಿ
    • ತುಮಕೂರು:  ಜ.16ರಂದು ಮಿನಿ ಉದ್ಯೋಗ ಮೇಳ
    • ಜ.21ಕ್ಕೆ ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ: ಉಪರಾಷ್ಟ್ರಪತಿಗಳು ಸೇರಿದಂತೆ ಗಣ್ಯರ ಭಾಗಿ
    • ನೊಣವಿನಕೆರೆ ಪಿಎಂ ಶ್ರೀ ಶಾಲೆಯಲ್ಲಿ ಹಳ್ಳಿಯ ಸೊಗಡಿನ ಸಂಕ್ರಾಂತಿ ಸಂಭ್ರಮ: ವರ್ಲಿ ಚಿತ್ರಕಲೆ ಅನಾವರಣ
    • ಎನ್.ವಿ.ಶಶಿಕಲಾ ಅಧ್ಯಕ್ಷತೆಯಲ್ಲಿ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ
    • ಬೆಂಗಳೂರು: ‘ಒಳ ಮೀಸಲಾತಿಯ ಒಳಸುಳಿ’ ಹಾಗೂ ‘ಮೀಸಲಾತಿಯ ಮುನ್ನೋಟ’: ವಿಚಾರ ಸಂಕಿರಣ
    • ಸೋತರೂ, ಗೆದ್ದರೂ ಕ್ರೀಡಾಪಟುಗಳು ಒಂದೇ ಮನಸ್ಥಿತಿ ಹೊಂದಿರಬೇಕು: ಶಾಸಕ ಅನಿಲ್ ಚಿಕ್ಕಮಾದು
    • ಪಟ್ಟಣ ಪಂಚಾಯಿತಿ ಕಟ್ಟಡ ಕೆಡವಿ, ನೂತನವಾಗಿ ನಿರ್ಮಿಸಿ:  ಶಾಸಕ ಅನಿಲ್ ಚಿಕ್ಕಮಾದು ಸೂಚನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » 2024ರ ಲೋಕಸಭಾ ಚುನಾವಣೆ: ಚುನಾವಣಾ ಆಯೋಗದಿಂದ ದತ್ತಾಂಶ ಬಿಡುಗಡೆ
    ರಾಜ್ಯ ಸುದ್ದಿ March 7, 2025

    2024ರ ಲೋಕಸಭಾ ಚುನಾವಣೆ: ಚುನಾವಣಾ ಆಯೋಗದಿಂದ ದತ್ತಾಂಶ ಬಿಡುಗಡೆ

    By adminMarch 7, 2025No Comments3 Mins Read
    vote

    ವಿಶ್ವದ ಅತಿ ದೊಡ್ಡ ಚುನಾವಣೆಗೆ ಹೆಸರಾಗಿರುವ ಭಾರತದ 2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗವು ಸಮಗ್ರ ದತ್ತಾಂಶವನ್ನು ಬಿಡುಗಡೆ ಮಾಡಿದೆ.

    ಈ ದತ್ತಾಂಶವು ಏಕಕಾಲದಲ್ಲಿ ನಡೆದ 2024ರ ಲೋಕಸಭಾ ಚುನಾವಣೆ(543 ಕ್ಷೇತ್ರ) ಹಾಗೂ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ಸೇರಿದಂತೆ 4 ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಸಂಕ್ಷಿಪ್ತ ಅಂಕಿ–ಅಂಶಗಳನ್ನು ಈ ದತ್ತಾಂಶ ಒಳಗೊಂಡಿದೆ.


    Provided by
    Provided by

    ಚುನಾವಣಾ ವಿಶ್ಲೇಷಣೆ ಮಾಡಲು ಶಿಕ್ಷಣ ತಜ್ಞರು, ಸಂಶೋಧಕರು, ಚುನಾವಣಾ ವೀಕ್ಷಕರು ಹಾಗೂ ಮತದಾರರಿಗೆ ಈ ದತ್ತಾಂಶ ಅನುಕೂಲವಾಗಲಿದೆ.

    ಚುನಾವಣಾ ಆಯೋಗದ ಈ ಸ್ವಯಂಪ್ರೇರಿತ ದತ್ತಾಂಶ ಬಿಡುಗಡೆ ಕಾರ್ಯವು ಭಾರತದ ಚುನಾವಣಾ ವ್ಯವಸ್ಥೆಯ ಆಧಾರವಾಗಿರುವ ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುವ ಉದ್ದೇಶವನ್ನೊಳಗೊಂಡಿದೆ. ಈ ಸವಿವರವಾದ ದತ್ತಾಂಶ ಬಿಡುಗಡೆಯು ಶೈಕ್ಷಣಿಕ ಸಂಶೋಧನೆ ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲಾ ಪಾಲುದಾರರಿಗೆ ಚುನಾವಣೆ ಸಂಬಂಧಿಸಿದ ದತ್ತಾಂಶವನ್ನು ಬಹಿರಂಗಪಡಿಸುವ ಮೂಲಕ ಹೆಚ್ಚಿನ ಪಾರದರ್ಶಕತೆ ಕಾಪಾಡಿಕೊಳ್ಳುವುದಾಗಿದೆ.

    ಮತದಾರರ ವಿವರ :-

    2024ರ ಲೋಕಸಭಾ ಚುನಾವಣೆಯಲ್ಲಿ 97,97,51,847 ನೋಂದಾಯಿತ ಮತದಾರರಿದ್ದು, ವಿದ್ಯುನ್ಮಾನ ಮತ್ತು ಅಂಚೆ ಮತ ಸೇರಿದಂತೆ ಒಟ್ಟು 64.64 ಕೋಟಿ ಮತಗಳು ಚಲಾವಣೆಗೊಂಡಿವೆ. ಇದರಲ್ಲಿ 32,93,61,948 ಪುರುಷರು; 31,27,64,269 ಮಹಿಳೆಯರು ಹಾಗೂ 13,058 ತೃತೀಯ ಲಿಂಗಿಗಳು ಒಳಗೊಂಡಿದ್ದು, 42,81,594 ಅಂಚೆ ಮತಪತ್ರ ಸೇರಿದಂತೆ ಒಟ್ಟು 64,64,20,869 (63,71,839–ನೋಟಾ) ಮತಗಳು ಚಲಾವಣೆಗೊಂಡಿವೆ.
    ಈ ಚುನಾವಣೆಯಲ್ಲಿ ಅಸ್ಸಾಂ ರಾಜ್ಯದ ಧುಬ್ರಿ ಲೋಕಸಭಾ ಕ್ಷೇತ್ರದಲ್ಲಿ ಶೇ.92.3ರಷ್ಟು ಮತದಾನವಾಗುವ ಮೂಲಕ ಅತಿ ಹೆಚ್ಚು ಮತದಾನವಾಗಿರುವ ಲೋಕಸಭಾ ಕ್ಷೇತ್ರವೆನಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಅತಿ ಕಡಿಮೆ ಶೇ.38.7ರಷ್ಟು ಹಾಗೂ 11 ಲೋಕಸಭಾ ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ.

    2019ರ ಲೋಕಸಭಾ ಚುನಾವಣೆಯಲ್ಲಿ 91,19,50,734 ಮತದಾರರು ನೋಂದಾಯಿಸಿಕೊಂಡಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ 97,97,51,847 ಮತದಾರರು ನೋಂದಾಯಿಸಿಕೊಂಡಿದ್ದಾರೆ. ಇದರಿಂದ ಶೇ.7.43ರಷ್ಟು ಮತದಾರರ ಸಂಖ್ಯೆ ಹೆಚ್ಚಳವಾದಂತಾಗಿದೆ. ಜಮ್ಮು–ಕಾಶ್ಮೀರದ ಶ್ರೀನಗರದಲ್ಲಿಯೂ 2019ರಲ್ಲಿ ಕೇವಲ ಶೇ.14.4ರಷ್ಟಿದ್ದ ಮತದಾನ ಪ್ರಮಾಣ ಶೇ.38.7ಕ್ಕೆ ಏರಿಕೆಯಾಗಿದೆ.

    ಮತಗಟ್ಟೆ ವಿವರ :-

    2024ರ ಲೋಕಸಭಾ ಚುನಾವಣೆಯಲ್ಲಿ 10,52,664 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಪೈಕಿ 40 ಮತಗಟ್ಟೆಗಳಲ್ಲಿ ಮಾತ್ರ ಮರು ಮತದಾನವಾಗಿದೆ. ಮತದಾನಕ್ಕಾಗಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 1,62,069 ಹಾಗೂ ಲಕ್ಷದ್ವೀಪದಲ್ಲಿ ಅತಿ ಕಡಿಮೆ ಅಂದರೆ 55 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 11 ಸಂಸದೀಯ ಕ್ಷೇತ್ರಗಳು 1,000ಕ್ಕಿಂತ ಕಡಿಮೆ ಹಾಗೂ 3 ಸಂಸದೀಯ ಕ್ಷೇತ್ರಗಳು 3,000ಕ್ಕಿಂತ ಹೆಚ್ಚಿನ ಮತಗಟ್ಟೆಗಳನ್ನು ಹೊಂದಿದ್ದವು. 2024ರಲ್ಲಿ ಬಿಹಾರ್ ರಾಜ್ಯದಲ್ಲಿ ಅತಿಹೆಚ್ಚು 4739 ಹೊಸ ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು.

    ನಾಮನಿರ್ದೇಶನ ವಿವರ :-

    2024ರ ಚುನಾವಣೆಯಲ್ಲಿ ಒಟ್ಟು 12,459 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ ದೇಶದಲ್ಲಿಯೇ ಅತಿ ಹೆಚ್ಚು ನಾಮಪತ್ರಗಳನ್ನು ತೆಲಂಗಾಣ ರಾಜ್ಯದ ಮಲ್ಕಾಜ್ಗಿರಿ 114-ಲೋಕಸಭಾ ಕ್ಷೇತ್ರವು ಹೊಂದಿದೆ.

    ಮಹಿಳಾ ಮತದಾರರ ವಿವರ :-

    2024ರ ಚುನಾವಣೆಯಲ್ಲಿ ಒಟ್ಟು ನೋಂದಾಯಿತ 97,97,51,847 ಮತದಾರರ ಪೈಕಿ 47,63,11,240 ಮಹಿಳಾ ಮತದಾರರು ನೋಂದಾಯಿಸಿಕೊಂಡಿದ್ದರು. 2019ರ ಚುನಾವಣೆಯನ್ನು ಹೋಲಿಸಿದಾಗ ಈ ಚುನಾವಣೆಯಲ್ಲಿ ನೋಂದಾಯಿತ ಮತದಾರರ ಸಂಖ್ಯೆ ಶೇಕಡ 0.53ರಷ್ಟು ಹೆಚ್ಚಳವಾಗಿದೆ. ಅತಿ ಹೆಚ್ಚು ಮಹಿಳಾ ಮತದಾರರನ್ನು ಪುದುಚೇರಿ(53.03%) ಹಾಗೂ ಕೇರಳ(51.56%) ರಾಜ್ಯ ಹೊಂದಿದೆ. ಅಂದರೆ ಪ್ರತಿ 1,000 ಪುರುಷ ಮತದಾರರಿಗೆ 946 ಮಹಿಳಾ ಮತದಾರರಿದ್ದರು.

    ಮತದಾನ ಪ್ರಮಾಣ :-

    2024ರಲ್ಲಿ ಶೇಕಡ 65.55ರಷ್ಟು ಪುರುಷ ಹಾಗೂ ಶೇ.65.78ರಷ್ಟು ಮಹಿಳಾ ಮತದಾರರು ಮತ ಚಲಾಯಿಸಿದ್ದು, 2019ರಂತೆಯೇ 2024ರಲ್ಲಿಯೂ ಮತದಾನ ಪ್ರಮಾಣದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ. ಸಾರ್ವತ್ರಿಕ ಲೋಕಸಭಾ ಚುನಾವಣೆ ಇತಿಹಾಸದಲ್ಲಿ 2ನೇ ಬಾರಿ ಮಹಿಳೆಯರ ಮತದಾನದ ಪ್ರಮಾಣ ಹೆಚ್ಚಳವಾಗಿದೆ.

    ಗುಜರಾತಿನ ಸೂರತ್ ಲೋಕಸಭಾ ಕ್ಷೇತ್ರಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ.
    ಮಹಾರಾಷ್ಟ್ರ(ಮಹಿಳಾ ಅಭ್ಯರ್ಥಿಗಳ ಸಂಖ್ಯೆ-111), ಉತ್ತರಪ್ರದೇಶ(80) ಹಾಗೂ ತಮಿಳುನಾಡು(77) ರಾಜ್ಯಗಳು ಅತಿ ಹೆಚ್ಚು ಮಹಿಳಾ ಅಭ್ಯರ್ಥಿಗಳನ್ನು ಹೊಂದಿದೆ. ಚುನಾವಣೆ ನಡೆದ 543 ಲೋಕಸಭಾ ಕ್ಷೇತ್ರಗಳ ಪೈಕಿ 152 ಲೋಕಸಭಾ ಕ್ಷೇತ್ರಗಳಲ್ಲಿ ಯಾವುದೇ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿರುವುದಿಲ್ಲ.

    ತೃತೀಯ ಲಿಂಗ ಮತದಾರರ ವಿವರ :-

    2019ರ ಲೋಕಸಭಾ ಚುನಾವಣೆಯಲ್ಲಿ 39,075 ಹಾಗೂ 2024ರಲ್ಲಿ 48,272 ತೃತೀಯ ಲಿಂಗ ಮತದಾರರು ನೋಂದಾಯಿಸಿಕೊಂಡಿದ್ದು, 5 ವರ್ಷಗಳ ಅವಧಿಯಲ್ಲಿ ಶೇ.23.5ರಷ್ಟು ತೃತೀಯ ಲಿಂಗ ಮತದಾರರ ಸಂಖ್ಯೆ ಹೆಚ್ಚಳವಾಗಿರುವುದನ್ನು ಗಮನಿಸಬಹುದಾಗಿದೆ.

    ತಮಿಳುನಾಡು ರಾಜ್ಯವು ಅತಿ ಹೆಚ್ಚು 8,467 ತೃತೀಯ ಲಿಂಗ ಮತದಾರರನ್ನು ಹೊಂದಿದ್ದು, 2019ರಲ್ಲಿ ಶೇ.14.64 ಹಾಗೂ 2024ರಲ್ಲಿ ಶೇ.27.09ರಷ್ಟು ತೃತೀಯ ಲಿಂಗ ಮತದಾರರು ಮತ ಚಲಾಯಿಸಿದ್ದು, ಬಹುತೇಕ ತೃತೀಯ ಲಿಂಗ ಮತದಾರರು ಮತ ಚಲಾಯಿಸಿದ ಪ್ರಮಾಣ ದ್ವಿಗುಣವಾಗಿರುವುದು ಕಾಣಬಹುದಾಗಿದೆ.
    ಈ ಚುನಾವಣೆಯಲ್ಲಿ 90,28,696 ದಿವ್ಯಾಂಗ ಮತದಾರರು ಹಾಗೂ 1,19,374 ಸಾಗರೋತ್ತರ ಮತದಾರರು ನೋಂದಾಯಿಸಿಕೊಂಡಿದ್ದರು.

    ಚುನಾವಣಾ ಫಲಿತಾಂಶ ವಿವರ :-

    2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ದೇಶದ ಒಟ್ಟು 6 ರಾಷ್ಟ್ರೀಯ ಪಕ್ಷಗಳು ಭಾಗವಹಿಸಿದ್ದವು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ 7190 ಅಭ್ಯರ್ಥಿಗಳು ತಮ್ಮ ಠೇವಣಿಯನ್ನು ಕಳೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ 279 ಸ್ವತಂತ್ರ ಮಹಿಳಾ ಅಭ್ಯರ್ಥಿ ಸೇರಿ 3921 ಸ್ವತಂತ್ರ ಅಭ್ಯರ್ಥಿಗಳ ಪೈಕಿ 7 ಮಂದಿ ಮಾತ್ರ ಆಯ್ಕೆಯಾಗಿದ್ದು, 3905 ಅಭ್ಯರ್ಥಿಗಳು ಠೇವಣಿಯನ್ನು ಕಳೆದುಕೊಂಡಿದ್ದಾರೆ.

    2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ದತ್ತಾಂಶಗಳ ಸವಿವರವಾದ ವರದಿ ಹಾಗೂ ಅಂಕಿ-ಅAಶಗಳನ್ನು ಭಾರತ ಚುನಾವಣಾ ಆಯೋಗದ Link: Menu >>MEDIA & PUBLICATION>>Election Results & Statistics< https://www.gov.in.statistical-reports ನಿಂದ ಪಡೆಯಬಹುದಾಗಿದೆ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

     

    admin
    • Website

    Related Posts

    ಬೆಂಗಳೂರು: ‘ಒಳ ಮೀಸಲಾತಿಯ ಒಳಸುಳಿ’ ಹಾಗೂ ‘ಮೀಸಲಾತಿಯ ಮುನ್ನೋಟ’: ವಿಚಾರ ಸಂಕಿರಣ

    January 12, 2026

    ‘ಕೊರಗಜ್ಜ’ ರೀಲ್ಸ್ : ಚಿತ್ರತಂಡದ ವಿರುದ್ದ ಕೊಡಗಿನ ದೈವ ಆರಾಧಕರ ಆಕ್ರೋಶ

    January 12, 2026

    ದುನಿಯಾ ವಿಜಯ್ ನಟನೆಯ ಲ್ಯಾಂಡ್‌ ಲಾರ್ಡ್ ಸಿನಿಮಾದ ‘ರೋಮಾಂಚಕ’ ಹಾಡು ಬಿಡುಗಡೆ

    January 12, 2026

    Comments are closed.

    Our Picks

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ತಿಪಟೂರು:  ಟ್ಯೂಷನ್ ಗೆ ಹೋಗಿ ನಾಪತ್ತೆಯಾಗಿದ್ದ ಬಾಲಕ ಪತ್ತೆ | ನಮ್ಮ ತುಮಕೂರು ಫಲಶ್ರುತಿ

    January 13, 2026

    ತಿಪಟೂರು: ಟ್ಯೂಷನ್ ಗೆ ಹೋಗಿದ್ದ ಬಾಲಕ ನಾಪತ್ತೆಯಾಗಿದ್ದ  ಪ್ರಕರಣ ಸುಖಾಂತ್ಯವಾಗಿದ್ದು, ಕೊನೆಗೂ ನಾಪತ್ತೆಯಾಗಿದ್ದ ಬಾಲಕ ತಾಯಿ ಮಡಿಲು ಸೇರಿದ್ದಾನೆ. ಮಾಹಿತಿಗಳ…

    ತುಮಕೂರು:  ಜ.16ರಂದು ಮಿನಿ ಉದ್ಯೋಗ ಮೇಳ

    January 13, 2026

    ಜ.21ಕ್ಕೆ ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ: ಉಪರಾಷ್ಟ್ರಪತಿಗಳು ಸೇರಿದಂತೆ ಗಣ್ಯರ ಭಾಗಿ

    January 13, 2026

    ನೊಣವಿನಕೆರೆ ಪಿಎಂ ಶ್ರೀ ಶಾಲೆಯಲ್ಲಿ ಹಳ್ಳಿಯ ಸೊಗಡಿನ ಸಂಕ್ರಾಂತಿ ಸಂಭ್ರಮ: ವರ್ಲಿ ಚಿತ್ರಕಲೆ ಅನಾವರಣ

    January 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.