nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ

    July 31, 2026

    ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ

    July 31, 2026

    ತುಮಕೂರು:  ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ

    July 31, 2026
    Facebook Twitter Instagram
    ಟ್ರೆಂಡಿಂಗ್
    • ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ
    • ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ
    • ತುಮಕೂರು:  ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ
    • ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ
    • ಹೇಮಾವತಿ ನೀರಿಗಾಗಿ ಅನಿರ್ದಿಷ್ಟಾವಧಿ ಸತ್ಯಾಗ್ರಹ : ಅಹೋರಾತ್ರಿ ಧರಣಿ ಆರಂಭ!
    • ಮಾನವ ಕಳ್ಳಸಾಗಾಣಿಕೆ ಸಮಾಜಕ್ಕೆ ಮಾರಕ: ಉಚಿತ ಕಾನೂನು ಸೇವೆಗಳ ಸದುಪಯೋಗಕ್ಕೆ ನ್ಯಾಯಾಧೀಶೆ ಸುಷ್ಮಾ ಎಂ. ಕರೆ
    • ಔರಾದ್: ಕಲುಷಿತ ನೀರು ಸರಬರಾಜಾಗದಂತೆ ಮುಂಜಾಗ್ರತೆ ವಹಿಸಿ: ಇಒ ಕಿರಣ ಪಾಟೀಲ್ ಸೂಚನೆ
    • ಗಡಿ ಚೆಕ್‌ ಪೋಸ್ಟ್‌ ಗಳಲ್ಲಿ ಕಟ್ಟೆಚ್ಚರ ವಹಿಸಿ: ಡಿವೈಎಸ್‌ ಪಿ ಬಲ್ಲಪ್ಪ ನಂದಗಾಂವೆ ಸೂಚನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಹುಭಾಷಿಕ ಅಧ್ಯಯನ ಮಾದರಿ ಬೆಳೆಯಬೇಕು: ಕಮಲಾಕರ ಭಟ್
    ತುಮಕೂರು April 6, 2025

    ಬಹುಭಾಷಿಕ ಅಧ್ಯಯನ ಮಾದರಿ ಬೆಳೆಯಬೇಕು: ಕಮಲಾಕರ ಭಟ್

    By adminApril 6, 2025No Comments2 Mins Read
    tumakuru vv

    ತುಮಕೂರು: ಬೇರೆಬೇರೆ ಭಾಷೆಗಳನ್ನು ಕಲಿತು ಅಲ್ಲಿ ಬಂದಿರುವ ಸಾಹಿತ್ಯದ ಅಧ್ಯಯನ ಮಾಡುವುದೇ ತೌಲನಿಕ ಅಧ್ಯಯನದ ಮೊದಲ ಮೆಟ್ಟಿಲು. ಬಹುಭಾಷಿಕ ಅಧ್ಯಯನ ಮಾದರಿ ಬೆಳೆಯಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬಹುಭಾಷಿಕ ವಿದ್ವತ್ತು ಕಡಿಮೆ ಆಗುತ್ತಿದೆ ಎಂದು ಮಹಾರಾಷ್ಟ್ರದ ಅಹಮದ್‌ನಗರ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಡಾ.ಕಮಲಾಕರ ಭಟ್ ಅಭಿಪ್ರಾಯಪಟ್ಟರು.

    ತುಮಕೂರು ವಿಶ್ವವಿದ್ಯಾನಿಲಯದ ಅಲ್ಲಮಪ್ರಭು ಅಧ್ಯಯನ ಪೀಠವು ಇಂಗ್ಲಿಷ್ ಹಾಗೂ ಕನ್ನಡ ವಿಭಾಗಗಳ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಕೀರ್ತಿನಾಥ ಕುರ್ತಕೋಟಿಯವರ ‘ಕರ್ಟೆಸಿ ಆಫ್ ಕ್ರಿಟಿಸಿಸಂ’ ಲೇಖನಗಳ ಸಂಕಲನದ ಅನುವಾದಿತ ಕೃತಿಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಬಹುಭಾಷಿಕ ಅಧ್ಯಯನದ ಮಾದರಿಯನ್ನು ತೋರಿಸಿಕೊಟ್ಟವರು ಕುರ್ತಕೋಟಿ. ಅವರಿಗೆ ಹಿಂದಿ, ಮರಾಠಿ, ಇಂಗ್ಲಿಷ್, ಕನ್ನಡ, ಸಂಸ್ಕೃತ, ಗುಜರಾತಿ ಮೊದಲಾದ ಭಾಷೆಗಳ ಸಾಹಿತ್ಯದ ಆಳವಾದ ಪರಿಚಯ ಇತ್ತು. ಇಂತಹ ವಿದ್ವತ್ತು ಈಗ ಕಡಿಮೆಯಾಗಿದೆ ಎಂದರು.

    ಯಾವ ಭಾಷೆಯೂ ಸ್ವಯಂಪೂರ್ಣ ಅಲ್ಲ. ಒಂದು ಭಾಷೆಗೆ ಇನ್ನೊಂದರೊಂದಿಗೆ ಅವಿನಾಭಾವ ಸಂಬಂಧ ಇರುತ್ತದೆ. ಪರಸ್ಪರ ಕೊಂಡುಕೊಳ್ಳುವಿಕೆಯಿಂದ ಅವು ಶ್ರೀಮಂತವಾಗುತ್ತವೆ. ಸಾಹಿತ್ಯ ಪರಂಪರೆಗಳು ಕೂಡ ಸ್ವಯಂಪೂರ್ಣ ಅಲ್ಲ. ಒಂದು ಇನ್ನೊಂದರೊಂದಿಗೆ ನಿರಂತರ ಸಂಭಾಷಣೆಯಲ್ಲಿ ತೊಡಗಿರುತ್ತವೆ. ಆದರೆ ಇದನ್ನು ನಮ್ಮಸಾಹಿತ್ಯ ಅದ್ಯಯನಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂದರು.

    ವಿಚಾರಗಳನ್ನು ಬಹಳ ಸರಳವಾಗಿ ಹೇಳುವ ಕೌಶಲ ಕುರ್ತಕೋಟಿಯವರಿಗೆ ಸಿದ್ಧಿಸಿತ್ತು. ಅವರು ಕೇವಲ ವಿದ್ವಾಂಸರಿಗಾಗಿ ಬರೆಯುತ್ತಿರಲಿಲ್ಲ. ತಮ್ಮ ಓದುಗರು ಅಥವಾ ಕೇಳುಗರು ತಮಗಿಂತ ಕಡಿಮೆ ತಿಳಿದವರು ಎಂಬ ಭಾವನೆಯೂ ಅವರಲ್ಲಿರಲಿಲ್ಲ ಎಂದರು.

    ಸಾಹಿತ್ಯ ಇತಿಹಾಸ ಬರವಣಿಗೆಯ ಹೊಸ ಮಾದರಿಯನ್ನು ಕುರ್ತಕೋಟಿಯವರು ಕೊಟ್ಟಿದ್ದಾರೆ. ಅವರ ವಿಮರ್ಶೆಯಲ್ಲಿ ಹೊಸ ಹೊಳಹುಗಳಿರುತ್ತಿದ್ದವು. ಅವರನ್ನು ಕನ್ನಡೇತರರಿಗೆ ಪರಿಚಯಿಸುವ ಉದ್ದೇಶದಿಂದ ‘ಕರ್ಟೆಸಿ ಆಫ್ ಕ್ರಿಟಿಸಿಸಂ’ ಕೃತಿ ರಚಿಸಿದ್ದೇನೆ ಎಂದರು.

    ಅಲ್ಲಮಪ್ರಭು ಅಧ್ಯಯನಪೀಠದ ಸಂಯೋಜಕ ಪ್ರೊ. ಎನ್.ಎಸ್. ಗುಂಡೂರ ಮಾತನಾಡಿ, ಕುರ್ತಕೋಟಿಯವರು ನಮ್ಮ ನಡುವಿನ ನಿಜವಾದ ಸಾಹಿತ್ಯಕ ಚರಿತ್ರಕಾರ. ಸಾಮಾನ್ಯ ವಿದ್ಯಾರ್ಥಿಗೂ ಅರ್ಥವಾಗುವ ಭಾಷೆಯಲ್ಲಿ ಅವರ ಬರವಣಿಗೆ ಇತ್ತು. ಪಶ್ಚಿಮದ ಪ್ರಸಿದ್ಧ ಕವಿಗಳು ಹೇಳದ ಅನೇಕ ಹೊಳಹುಗಳನ್ನು ಅವರು ತಮ್ಮ ಕೃತಿಗಳಲ್ಲಿ ನೀಡಿದರು. ಪ್ರತಿಭೆ ಕಣ್ಣು ತೆರೆದರೆ ಜೀವನ ಸಾರ್ಥಕವಾಗ್ತದೆ ಎಂಬುದಕ್ಕೆ ಅವರೇ ನಿದರ್ಶನ ಎಂದರು.

    ಪ್ರಾಧ್ಯಾಪಕರಾದ ಪ್ರೊ. ನಿತ್ಯಾನಂದ ಬಿ. ಶೆಟ್ಟಿ, ಪ್ರೊ. ಹೆಚ್.ಕೆ.ಶಿವಲಿಂಗಸ್ವಾಮಿ, ಡಾ. ಗೀತಾ ವಸಂತ ಮತ್ತಿತರರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ

    July 31, 2026

    ತುಮಕೂರು:  ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ

    July 31, 2026

    ವಾಣಿಜ್ಯ ಬಳಕೆಗೆ ಗೃಹ ಬಳಕೆ ಸಿಲಿಂಡರ್ ಬಳಕೆ: 8 ವಶ

    July 30, 2026

    Comments are closed.

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ

    July 31, 2026

    ತಿಪಟೂರು: ತಾಲೂಕಿನ ಕಟ್ಟೇಮನೆ ಕೋಟೇನಾಯಕನಹಳ್ಳಿಯಲ್ಲಿ 58ನೇ ವರ್ಷದ ಶ್ರೀ ಬನಶಂಕರಿ ಅಮ್ಮನವರ ಭೀಮನ ಅಮಾವಾಸ್ಯೆ ಮಹೋತ್ಸವ ಆ.12 ಮತ್ತು 13…

    ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ

    July 31, 2026

    ತುಮಕೂರು:  ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ

    July 31, 2026

    ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ

    July 31, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.