nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

    June 17, 2026

    ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ

    June 17, 2026

    ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು

    June 17, 2026
    Facebook Twitter Instagram
    ಟ್ರೆಂಡಿಂಗ್
    • ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
    • ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ
    • ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು
    • ಸಮಾಜ ಕಲ್ಯಾಣ ಇಲಾಖೆ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಆರಂಭ
    • ಗ್ರಾಮೀಣ ಕುಡಿಯುವ ನೀರು ಪೂರೈಕೆ ವ್ಯತ್ಯಯವಾಗದಂತೆ ಕ್ರಮ: ಸಚಿವ ಈಶ್ವರ ಖಂಡ್ರೆ
    • ಶುಲ್ಕ ಮರುಪಾವತಿ ಯೋಜನೆಯಡಿ ಅರ್ಜಿ ಆಹ್ವಾನ
    • ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ
    • ಮಧುಗಿರಿ: ರಾಜಣ್ಣ, ಜಮೀರ್ ಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕನಸನ್ನು ನನಸು ಮಾಡಲು ಪಕ್ಷ ಸಂಘಟನೆ: ಜೆಡಿಎಸ್ ಮುಖಂಡ ಕೆ.ಎಂ.ಕೃಷ್ಣನಾಯಕ
    Uncategorized August 20, 2025

    ಕನಸನ್ನು ನನಸು ಮಾಡಲು ಪಕ್ಷ ಸಂಘಟನೆ: ಜೆಡಿಎಸ್ ಮುಖಂಡ ಕೆ.ಎಂ.ಕೃಷ್ಣನಾಯಕ

    By adminAugust 20, 2025No Comments2 Mins Read
    jds

    Provided by
    Provided by

    ಸರಗೂರು:  ಕಳೆದ 10 ವರ್ಷಗಳಿಂದ ತಾಲೂಕಿನಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದನ್ನು ಎದುರು ನೋಡುತ್ತಿರುವ ಕಾರ್ಯಕರ್ತರ ಕನಸನ್ನು ನನಸು ಮಾಡಲು ಕ್ಷೇತ್ರದಲ್ಲಿ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡುವುದಾಗಿ ಕೆ.ಎಂ.ಕೃಷ್ಣನಾಯಕ ತಿಳಿಸಿದರು.

    ಸೋಮವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರಿಂದ ಅದ್ಧೂರಿ ಸ್ವಾಗತ ಸ್ವೀಕರಿಸಿ. ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಪಕ್ಷದ ಕಾರ್ಯಕರ್ತರು ಅನುಭವಿಸುತ್ತಿರುವ ನೋವನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡಲು ಶ್ರಮಿಸಬೇಕು ಎಂದರು.

    ಮುಂದಿನ ಎರಡೂರು ತಿಂಗಳಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಚುನಾವಣೆ ನಡೆಯಲಿದ್ದು, ಮುಖಂಡರು ಹಾಗೂ ಕಾರ್ಯಕರ್ತರು ತಮ್ಮಲ್ಲಿರುವ ಅಸಮಾಧಾನ ಮರೆತು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದ ಅವರು, ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಕೂಚಿ ಎಂದರು.

    ತಾಲೂಕು ಸೇರಿದಂತೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಭ್ರಷ್ಟಾಚಾರ, ದುರಾಡಳಿತ, ಹಗರಣಗಳಲ್ಲಿ ಸರ್ಕಾರ ನಿರತವಾಗಿದೆ. ರಾಜ್ಯದ ಅಭಿವೃದ್ಧಿಗೆ ಹಣಕಾ ಸಿನ ಕೊರತೆ ಎದುರಾಗಿದ್ದು, ಖಜಾನೆ ಖಾಲಿಯಾಗಿದೆ ಎಂದು ಆರೋಪಿಸಿದರು.

    ಇದೇ ವೇಳೆ ಕೃಷ್ಣನಾಯಕ ಅವರ ಸಮ್ಮುಖದಲ್ಲಿ ನೂರಾರು ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು. ಅಲ್ಲದೇ ಬೆಂಗಳೂರಿನ ಜೆ.ಪಿ.ಭವನದಲ್ಲಿ ಜೆಡಿಎಸ್‌ ಗೆ ಸೇರ್ಪಡೆಗೊಂಡು ಪಟ್ಟಣಕ್ಕೆ ಆಗಮಿಸಿದ ಕೆ.ಎಂ.ಕೃಷ್ಣನಾಯಕ ಅವರು ಮೊದಲಿಗೆ ಜಿ.ಬಿ.ಸರಗೂರಿನ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕ್ಯಾತನಹಳ್ಳಿ, ಹಂಪಾಪುರ–ಹೊಮರಗಳೆ ಹೊಮ್ಮರಗಳ್ಳಿ ಮಾರ್ಗವಾಗಿ ಹ್ಯಾಂಡ್ ಪೋಸ್ಟ್‌ ಗೆ ತಲುಪಿ ಹ್ಯಾಂಡ್‌ ಪೋಸ್ಟ್‌ ನ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ದಾರಿಯುದ್ದಕ್ಕೂ ಕೃಷ್ಣನಾಯಕರಿಗೆ ಜೆಡಿಎಸ್ ಕಾರ್ಯ ಕರ್ತರು, ಮುಖಂಡರು ಹಾರ ತುರಾಯಿ ಹಾಕಿ ಅಭಿನಂದಿಸಿದರು.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಿಂದ ಕೃಷ್ಣನಾಯಕ ಅವರು ಸಾವಿರಾರು ಕಾರ್ಯಕರ್ತರ ಜೊತೆ ಕಾಲ್ನಡಿಗೆಯಲ್ಲಿ ಜೆಡಿಎಸ್ ಕಚೇರಿಗೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಕಾರ್ಯಕತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

    ಕೋಟೆ, ಸರಗೂರು ತಾಲೂಕಿನ ಜೆಡಿಎಸ್ ಅಧ್ಯಕ್ಷರಾದ ರಾಜೇಂದ್ರ ಗೋಪಾಲಸ್ವಾಮಿ, ಮಾಜಿ ಅಧ್ಯಕ್ಷರಾದ ಸಿ.ವಿ.ನಾಗರಾಜು, ನರಸಿಂಹೇಗೌಡ, ಲಿಂಗೇಗೌಡ, ಸಿಂಡೇನಹಳ್ಳಿ ಯತೀಶ್ ಕುಮಾರ್, ಶ್ಯಾಮ್ ಸುಂದರ್, ಮಳಲಿ ಶಾಂತಕುಮಾರ್, ಯೋಗ ನರ ಸಿಂಹ.ಡಿ.ಆರ್.ಮಹೇಶ್, ಎಂ.ಡಿ.ಮಂಚಯ್ಯ, ಹೋ.ಕೆ.ಮಹೇಂದ್ರ, ಗೆಂಡತ್ತೂರು ಪ್ರಕಾಶ್, ಸಿದ್ದೇಗೌಡ, ಸುದೀರ್, ಮಾಯಿ ಗೌಡ, ಶಶಿಧರ್, ಹೆಚ್.ಪಿ.ಪ್ರಕಾಶ್, ಎಂ.ಪಿ. ಶಂಕರ್, ಕೃಷ್ಣಗೌಡ, ಶಿವಶಂಕರ್, ಪ್ರಶಾಂತ್, ಪ್ರಸನ್ನ, ಶಿವಯ್ಯ, ಕಾಳಪ್ಪಾಜಿ, ಕೃಷ್ಣಪ್ಪ, ಸೋಮಲಿಂಗ, ಶಿವಪ್ಪಶೆಟ್ಟಿ, ನಾಗೇಂದ್ರ, ಸತೀಶ್, ನಾಗೇಗೌಡ, ಶಿವಕು ಮಾರ್, ಜವರೆಗೌಡ, ಮಾಯಪ್ಪ ಇದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬೆಂಗಳೂರು: ವಿಐಪಿ ಸಂಚಾರಕ್ಕೆ ಗರ್ಭಿಣಿ ಇದ್ದ ಕಾರು ತಡೆದಿದ್ದಕ್ಕೆ ರಸ್ತೆಯಲ್ಲೇ ಪತಿ ಪ್ರತಿಭಟನೆ; ತನಿಖೆಗೆ ಆದೇಶ!

    June 2, 2026

    ಬೆಂಗಳೂರು: ಆರ್ಟ್ ಆಫ್ ಲಿವಿಂಗ್‌ನಲ್ಲಿ ನೂತನ ‘ಧ್ಯಾನ ಮಂದಿರ’ ಉದ್ಘಾಟಿಸಿದ ಪ್ರಧಾನಿ ಮೋದಿ

    May 10, 2026

    ರಸ್ತೆ, ಅಭಿವೃದ್ಧಿ ಕಾಮಗಾರಿ ಗುಣಮಟ್ಟದಿಂದ ನಿರ್ಮಿಸಿ: ಶಾಸಕ ಕೆ.ಎನ್.ರಾಜಣ್ಣ ಸೂಚನೆ

    May 7, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

    June 17, 2026

    ತುಮಕೂರು : 2026–2027 ಸಾಲಿನ ಎಸ್ ಎಫ್ ಸಿ ಮುಕ್ತನಿಧಿ ಅನುದಾನದಲ್ಲಿ ಹಾಗೂ ನಗರಸಭಾ ನಿಧಿಯಲ್ಲಿ ಶೇ24.1, 7.25 ಹಾಗೂ…

    ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ

    June 17, 2026

    ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು

    June 17, 2026

    ಸಮಾಜ ಕಲ್ಯಾಣ ಇಲಾಖೆ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಆರಂಭ

    June 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.