ಬೆಂಗಳೂರು: ಯತ್ನಾಳ್ ಬಿಜೆಪಿಯಿಂದ ಯಾಕೆ ಉಚ್ಛಾಟನೆ ಆದ್ರು ಅಂತ ತಿಳಿದುಕೊಳ್ಳಲಿ, ಆ ಮೇಲೆ ನಮ್ಮ ಪಕ್ಷ, ನಮ್ಮ ಅಧ್ಯಕ್ಷರು, ನಮ್ಮ ಸಿಎಂ ಬಗ್ಗೆ ಮಾತಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಡಿ.ಕೆ ಶಿವಕುಮಾರ್ ಬಿಜೆಪಿ ಹೋಗೋಕೆ ಸಿದ್ಧತೆ ಮಾಡಿದ್ರು ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಬಿಜೆಪಿಯಲ್ಲಿರುವವರಿಗೆ ಸ್ವಂತಕ್ಕೆ ಅಸೆಸ್ ಮೆಂಟ್ ಮಾಡೋಕೆ ಆಗಿಲ್ಲ. ಅವರು ಬಿಜೆಪಿಯಲ್ಲಿ ಉಳಿತಾರೋ ಇಲ್ಲವೋ ಅವರಿಗೇ ಗೊತ್ತಿಲ್ಲ. ಅವರು ನಮ್ಮ ಅಧ್ಯಕ್ಷರ ಬಗ್ಗೆ ವಿಮರ್ಶೆ ಮಾಡ್ತಾರಾ ಎಂದು ಪ್ರಶ್ನಿಸಿದ್ದಾರೆ.
ಯತ್ನಾಳ್ ಯಾಕೆ ಹೊರಗೆ ಹೋಗಿದ್ದಾರೆ ಅಂತ ಇನ್ನು ಅವರಿಗೆ ಗೊತ್ತಿಲ್ಲ. ಬಿಜೆಪಿಯಲ್ಲಿ ಯಾರು ಹೊರಗೆ ಹೋಗ್ತಾರೆ, ಒಳಗೆ ಬರ್ತಾರೆ ಅಂತ ಅವರಿಗೆ ಗೊತ್ತಾಗುತ್ತಾ? ಅವರು ಸೆಲ್ಫ್ ಅಸೆಸ್‌ಮೆಂಟ್ ಅಲ್ಲೇ ವಿಫಲರಾಗಿದ್ದಾರೆ. ಇವರೆಲ್ಲ ನಮ್ಮ ಪಕ್ಷ, ಸಿಎಂ ಹಾಗೂ ಡಿ.ಕೆ ಶಿವಕುಮಾರ್ ಅವರ ಬಗ್ಗೆ ಅಸೆಸ್ ಮಾಡ್ತಾರಾ ಎಂದು ಕಿಡಿಕಾರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC