ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಿಪಟೂರು ಗ್ರಾಮಾಂತರ ತಾಲೂಕು ನೊಣವಿನಕೆರೆ ವಲಯದ ಪುಣ್ಯಕೋಟಿ ಜ್ಞಾನ ವಿಕಾಸ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೊಣವಿನಕೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಸವಟಗಿ ದೀಪ ಬೆಳಗಿಸಿ ಮಾತನಾಡಿ, ಸರ್ಕಾರ ಮಾಡದಿರುವ ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿದೆ, ಇದರಿಂದ ಎಲ್ಲರಿಗೂ ತುಂಬಾ ಸಹಾಯವಾಗುತ್ತಿದೆ. ಆರೋಗ್ಯವೇ ಭಾಗ್ಯ ಎನ್ನುವ ಹಾಗೆ ಎಲ್ಲರು ತಪಾಸಣೆ ಮಾಡಿಸಿ ಆರೋಗ್ಯ ಸಮಸ್ಯೆ ಇದ್ದಲ್ಲಿ ಸೂಕ್ತ ವೈದ್ಯರ ಸಲಹೆಯೊಂದಿಗೆ ಔಷಧಿ ತೆಗೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಸದಸ್ಯರಿಗೆ ಕುಮಾರ್ ಆಸ್ಪತ್ರೆಯ ಡಾ.ಶ್ರೀಧರ್ ಸಿಬ್ಬಂದಿಯವರ ಮೂಲಕ ರಕ್ತದ ಗುಂಪು, ಗರ್ಭಕೋಶ ತಪಾಸಣೆ ಮಹಾವೀರ ಜೈನ ಆಸ್ಪತ್ರೆ ವತಿಯಿಂದ ಬಿಪಿ, ಶುಗರ್ ಸ್ಪರ್ಶ, ಇಸಿಜಿ ಜ್ಯೋತಿ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ತಪಾಸಣೆ ಮಾಡಿ ಸೂಕ್ತ ಸಲಹೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ಸದಸ್ಯರು ದಯಾನಂದ ಕಾಬೋರಪ್ಪ ಒಕ್ಕೂಟ ಪದಾಧಿಕಾರಿಗಳಾದ ರಂಗಣ್ಣ, ಸಮಾಜ ಸೇವಕರಾದ ಮಹೇಶ್, ಉಡಿಸಲ್ಲಮ್ಮ ಸಮುದಾಯ ಭವನದ ಕನ್ವೀನಿಯರ್ ಬಸವರಾಜು, ವಲಯದ ಮೇಲ್ವಿಚಾರಕರು ಮುನಿಕೃಷ್ಣ, ಜ್ಞಾನ ವಿಕಾಸ ಸಮನ್ವಯಧಿಕಾರಿ ಭಾಗ್ಯಲಕ್ಷ್ಮಿ, ಸೇವಾಪ್ರತಿನಿಧಿಗಳು ಕೇಂದ್ರದ ಎಲ್ಲಾ ಸದಸ್ಯರು ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC