ಕೊರಟಗೆರೆ: ತಾಲ್ಲೂಕಿನ ಬಜ್ಜನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪೋಷಕರು ಮತ್ತು ಎಸ್ ಡಿ ಎಂ ಸಿ ಸದಸ್ಯರ ಸಹಕಾರದಿಂದ ಶಾಲಾ ಎಲ್ಲಾ ಮಕ್ಕಳಿಗೆ ಟ್ರ್ಯಾಕ್ಸ್ ಶೂಟ್ ವಿತರಣೆ ಮಾಡಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷ ತಿಮ್ಮರಾಜು ಮಾತನಾಡಿ, ಸರ್ಕಾರದಿಂದ ಮಕ್ಕಳಿಗೆ ಶಿಕ್ಷಣದ ಎಲ್ಲಾ ಸವಲತ್ತುಗಳು ಲಭ್ಯವಾಗುತ್ತಿದ್ದು, ಗ್ರಾಮೀಣ ಮಟ್ಟದ ಮಕ್ಕಳು ಓದುವುದರ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಚೆನ್ನಾಗಿ ಓದಿ ಉನ್ನತ ಮಟ್ಟದ ಅಧಿಕಾರ ಪಡೆದುಕೊಂಡು ಶಾಲೆಗೆ , ಗ್ರಾಮಕ್ಕೆ ತಂದೆ ತಾಯಿಗಳಿಗೆ ಗೌರವ ತರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಸನ್ನ ಕುಮಾರ್, ಸಹ ಶಿಕ್ಷಕರಾದ ವೇಣು ಗೋಪಾಲ್, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ವೇತ, ಸದಸ್ಯರಾದ ಶ್ರೀನಿವಾಸ್ , ಚಂದ್ರಶೇಖರ್, ಕೆ.ತಿಮ್ಮರಾಜು ಹಾಗೂ ಪೋಷಕರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


