ಸರಗೂರು: ಆದಿಕರ್ನಾಟಕ ಮಹಾಸಭಾ ಮಾಜಿ ಗೌರವಾಧ್ಯಕ್ಷ ಹುಣಸಹಳ್ಳಿ ಬಸವರಾಜು ಅವರಿಗೆ ನುಡಿನಮನ ಕಾರ್ಯಕ್ರಮ ಪಟ್ಟಣ ಪ್ರವಾಸ ಮಂದಿರದಲ್ಲಿ ಮಂಗಳವಾರದಂದು ಆದಿ ಕರ್ನಾಟಕ ಮಹಾಸಭಾದ ವತಿಯಿಂದ ನಡೆಯಿತು. ಬಸವರಾಜು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನುಡಿನಮನ ಸಲ್ಲಿಸಲಾಯಿತು.
ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನಾ ರಾಜಣ್ಣ ಮಾತನಾಡಿ, ಮಹಾಸಭಾದ ಗೌರವಾಧ್ಯಕ್ಷ ಬಸವರಾಜು, ‘ಯಾರನ್ನೂ ದ್ವೇಷಿಸದ, ಟೀಕಿಸದ, ಅಸೂಯೆ ಪಡದ ಅಜಾತ ಶತ್ರು. ರಾಜ್ಯ ಕಂಡ ಅತ್ಯಂತ ಮೇಧಾವಿ, ಮುತ್ಸದ್ದಿ ರಾಜಕಾರಣಿ ಎಂದರು.
ಸುಶಿಕ್ಷಿತ, ಬುದ್ಧಿವಂತ ರಾಜಕಾರಣಿ. ಎಲ್ಲರನ್ನೂ ವಿಶ್ವಾಸದಿಂದ ಕಾಣುತ್ತಿದ್ದ ಅಪರೂಪದ ನಾಯಕ. ಸಾರ್ವಜನಿಕರು ಹಾಗೂ ಸಮಾಜದವರನ್ನು ಅತ್ಯಂತ ಆತ್ಮೀಯವಾಗಿ ಕಂಡು ಸ್ಪಂದಿಸುತ್ತಿದ್ದರು ಎಂದು ನೆನಪಿಸಿಕೊಂಡರು.
ಮಹಾಸಭಾದ ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ಬಸವರಾಜು ಅವರು ಸಾರ್ವಜನಿಕ ಜೀವನದಲ್ಲಿ ಎಂದಿಗೂ ಏಕವಚನ ಪದ ಬಳಕೆ ಮಾಡದಂತೆ ನಡೆದುಕೊಂಡಿದ್ದರು. ಅವರ ವ್ಯಕ್ತಿತ್ವ ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.
ದಲಿತ ಸಮುದಾಯಕ್ಕೆ ಸಮಾಜಕ್ಕೆ ಉತ್ತಮವಾಗಿ ಸಂದೇಶಗಳನ್ನು ನೀಡುತ್ತಾ ಯುವ ಪೀಳಿಗೆ ಯುವಕರಿಗೆ ಬುದ್ಧಿ ಹೇಳಿ ಸಮಾಜದಲ್ಲಿ ಯಾವ ರೀತಿಯಲ್ಲಿ ಇರಬೇಕು ಅಂತ ಹೇಳಿಕೊಡುತ್ತಿದ್ದರು. ಅಂತವರು ನಮ್ಮನು ಬಿಟ್ಟು ಹೋಗಿದ್ದಾರೆ ಎಂದು ನೆನಪಿಸಿಕೊಂಡರು ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆದಿ ಕರ್ನಾಟಕ ಮಹಾಸಭಾದ ಉಪಾಧ್ಯಕ್ಷ ಚಿನ್ನಣ್ಣ, ಪ್ರದಾನ ಕಾರ್ಯದರ್ಶಿ ಪ್ರಕಾಶ್, ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ನಾಗರಾಜು, ಪಿಎಚ್ಡಿ ಬ್ಯಾಂಕ್ ನಿರ್ದೇಶಕ ಹೂವಿನ ಕೊಳ ಸಿದ್ದರಾಜು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರದಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ, ಖಜಾಂಚಿ ಶ್ರೀನಿವಾಸ್ ಲಂಕೆ, ಸಹಕಾರ ಸಂಘದ ಉಪಾಧ್ಯಕ್ಷ ಹುಣಸಹಳ್ಳಿ ನಾಗರಾಜು, ಮಾಜಿ ಪ್ರದಾನ ಕಾರ್ಯದರ್ಶಿ ಚೆನ್ನಿಪುರ ಮಲ್ಲೇಶ್, ಸಹ ಕಾರ್ಯದರ್ಶಿ ಮಸಹಳ್ಳಿ ಸೂರ್ಯ ಕುಮಾರ್, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ಮುಖಂಡರಾದ ಬಿಲ್ಲಯ್ಯ, ಗ್ರಾಮೀಣ ಮಹೇಶ್, ಅಣ್ಣಯ್ಯ ಸ್ವಾಮಿ, ದೊಡ್ಡಣ್ಣ, ಯಶವಂತಪುರ ಶ್ರೀನಿವಾಸ್, ಪುಟ್ಟಯ್ಯ ಪಿ., ಕೂಡಗಿ ಗೋವಿಂದರಾಜು, ಶಿವಚೆನ್ನಪ್ಪ, ಬಸವಣ್ಣ, ಬಸವರಾಜುರವರ ಕುಟುಂಬಸ್ಥರು ಹಾಗೂ ಇನ್ನೂ ಮುಂತಾದ ಮುಖಂಡರು,ಎಲ್ಲಾ ಸಮಾಜದ ಮುಖಂಡರು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


