nammatumakuru

    Subscribe to Updates

    Get the latest creative news from FooBar about art, design and business.

    What's Hot

    ಔರಾದ್: ಕಾಂಗ್ರೆಸ್ ಪಕ್ಷ ಸಂಘಟನೆಗೆ ಒತ್ತು ನೀಡಿ: ವಿನೋದ ಅಪ್ಪೆ

    November 24, 2026

    1.83 ಲಕ್ಷ ರೈತರಿಗೆ ₹45.77 ಕೋಟಿ ಬೆಳೆ ಪರಿಹಾರ ವಿತರಣೆ |  ತುಮಕೂರು ಜಿಲ್ಲೆಯ 10 ತಾಲೂಕುಗಳೂ ಬರಪೀಡಿತ ಘೋಷಣೆ

    November 24, 2026

    ನ.28ರಂದು ರಂಗಾಪುರದ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಕಾರ್ತೀಕ ದೀಪೋತ್ಸವ | ಕೇಂದ್ರ ಸಚಿವ ವಿ. ಸೋಮಣ್ಣ ವಿಶೇಷ ಅತಿಥಿ

    November 24, 2026
    Facebook Twitter Instagram
    ಟ್ರೆಂಡಿಂಗ್
    • ಔರಾದ್: ಕಾಂಗ್ರೆಸ್ ಪಕ್ಷ ಸಂಘಟನೆಗೆ ಒತ್ತು ನೀಡಿ: ವಿನೋದ ಅಪ್ಪೆ
    • 1.83 ಲಕ್ಷ ರೈತರಿಗೆ ₹45.77 ಕೋಟಿ ಬೆಳೆ ಪರಿಹಾರ ವಿತರಣೆ |  ತುಮಕೂರು ಜಿಲ್ಲೆಯ 10 ತಾಲೂಕುಗಳೂ ಬರಪೀಡಿತ ಘೋಷಣೆ
    • ನ.28ರಂದು ರಂಗಾಪುರದ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಕಾರ್ತೀಕ ದೀಪೋತ್ಸವ | ಕೇಂದ್ರ ಸಚಿವ ವಿ. ಸೋಮಣ್ಣ ವಿಶೇಷ ಅತಿಥಿ
    • ಕೆಸಿಆರ್‌ ಗೆ ರಾಜಕೀಯ ಶಕ್ತಿ ತುಂಬಲು ಕುಂಚಶ್ರೀಗಳು ದಾರಿ ತೋರಲಿ:  ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್
    • ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಉಚಿತ ಸಿಇಟಿ ತರಬೇತಿ ಸಹಕಾರಿ : ಶಾಸಕ ಸಿ.ಬಿ. ಸುರೇಶ್‌ ಬಾಬು
    • ಒಕ್ಕಲಿಗರ ಭವನಕ್ಕೆ ಶಂಕುಸ್ಥಾಪನೆ | ಒಕ್ಕಲಿಗ ನಾಯಕರ ಆಡಳಿತದಲ್ಲಿ ಸರ್ವಜನರ ಅಭಿವೃದ್ಧಿಗೆ ಆದ್ಯತೆ: ನಂಜಾವಧೂತ ಸ್ವಾಮೀಜಿ
    • ವಿಳಾಸದ ಗೊಂದಲಕ್ಕೆ ಶಾಶ್ವತ ಮುಕ್ತಿ | DIGIPIN ಕ್ರಾಂತಿ | ವಿಶೇಷ ಸಂಪಾದಕೀಯ
    • ತೊರೆಯ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮುಳುಗಡೆ ಸಂತ್ರಸ್ತರ ಪರವಾಗಿ ಅವಿರತ ಹೋರಾಟ: ಸಿದ್ದು ಬಾಲಗೊಂಡ
    ಜಿಲ್ಲಾ ಸುದ್ದಿ February 23, 2022

    ಮುಳುಗಡೆ ಸಂತ್ರಸ್ತರ ಪರವಾಗಿ ಅವಿರತ ಹೋರಾಟ: ಸಿದ್ದು ಬಾಲಗೊಂಡ

    By adminFebruary 23, 2022No Comments2 Mins Read
    vijapura

    ವಿಜಾಪುರಜಿಲ್ಲೆ: ಕೊಲ್ಹಾರ ಪಟ್ಟಣ ಹಾಗೂ ಕೊಲ್ಹಾರ ತಾಲ್ಲೂಕು ವ್ಯಾಪ್ತಿಯ ಮುಳುಗಡೆ ಸಂತ್ರಸ್ತರ ಪರವಾಗಿ ಅವಿರತವಾಗಿ ಹೋರಾಟ ಮಾಡಲಾಗುವುದು ಎಂದು ಕೃಷ್ಣಾ ತೀರ ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ದು ಬಾಲಗೊಂಡ ಹೇಳಿದರು.

    ಪಟ್ಟಣದಲ್ಲಿ ಕೃಷ್ಣಾ ತೀರ ಸಂತ್ರಸ್ತರ ಹೋರಾಟ ಸಮಿತಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಬಾಗಲಕೋಟೆ ನಂತರ ಎರಡನೆಯ ಅತಿ ದೊಡ್ಡ ಪಟ್ಟಣವಾದ ಕೊಲ್ಹಾರ ಪಟ್ಟಣ ಸ್ಥಳಾಂತರವಾಗಿ ಅನೇಕ ವರ್ಷಗಳು ಕಳೆಯುತ್ತಾ ಬಂದರು ಕೂಡ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಪುನರ್ವಸತಿ ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಸಿ ಪಟ್ಟಣವನ್ನು ಅಭಿವೃದ್ಧಿ ಪಡಿಸುವುದು ಬಿಟ್ಟು ತಮ್ಮ ಹುಳುಕು ಮುಚ್ಚಿಕೊಳ್ಳಲು ಸಂತ್ರಸ್ತರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿ ಸರಕಾರಕ್ಕಾಗಿ ಮನೆಮಠ ಕಳೆದುಕೊಂಡ ಸಂತ್ರಸ್ತರಿಗೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಅಧಿಕಾರಿಗಳ ತಪ್ಪಿತಸ್ಥರು: ಪುನರ್ವಸತಿ ಅಧಿಕಾರಿಗಳು ತಪ್ಪು ಮಾಡಿ ಸುಖಾಸುಮ್ಮನೆ 1117 ಜನ ಸಂತ್ರಸ್ತರ ಮೇಲೆ ಪ್ರಕರಣದ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ನಮಗೆ ಪುನರ್ವಸತಿ ಅಧಿಕಾರಿಗಳು ನೀಡಿದ ನಿವೇಶನಗಳು ಬೇಡ! ಅವರು ನೀಡಿರುವ 22 ಸಾವಿರ ಪರಿಹಾರವೂ ಬೇಡ ನಾವು ಮರಳಿ ನೀಡುತ್ತೇವೆ ನಮಗೆ ಹಳೆ ಕೊಲ್ಹಾರ ಮುಳುಗಡೆಯ ನಮ್ಮ ಮೂಲ ಜಾಗ ನೀಡಿ ಸಾಕು. ಇಲ್ಲದಿದ್ದಲ್ಲಿ ಶೀಘ್ರದಲ್ಲಿಯೇ ಮುಳುಗಡೆ ಹಳೆ ಕೊಲ್ಹಾರ ಗ್ರಾಮಕ್ಕೆ ಹೋಗಿ ವಾಸ್ತವ್ಯ ಹೂಡುತ್ತೆವೆ ಇದರ ಪರಿಣಾಮ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಆಕ್ರೋಶ ಹೊರಹಾಕಿದರು.

    ಅಧಿಕಾರಿಗಳು ಈಗಾಗಲೇ ಮನೆಮನೆಗೆ ತೆರಳಿ ಸಂತ್ರಸ್ತರ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಸಂಶಯ ಬಂದವರಿಗೆ ನೋಟಿಸ್ ಕಳುಹಿಸಿ ಮಾಹಿತಿ ಪಡೆದುಕೊಂಡು ತಪ್ಪು ಮಾಹಿತಿ ನೀಡಿರುವವರ ನಿವೇಶನಗಳನ್ನು ರದ್ದುಪಡಿಸಬಹುದಿತ್ತು ಅಥವಾ ಡಿ.ಡಿ.ಭರಣ ಮಾಡಿಕೊಂಡು ಸಕ್ರಮಗೊಳಿಸಬಹುದಿತ್ತು ಎಂದರು.

    ಸರಕಾರಕ್ಕಾಗಿ ನಾವು ಮಾಡಿರುವ ತ್ಯಾಗ ಸಾಕಷ್ಟಿದೆ ಸರ್ವಸ್ವವನ್ನೂ ತ್ಯಾಗ ಮಾಡಿ ನಾವು ತಬ್ಬಲಿಗಳಾಗಿದ್ದೇವೆ. ಇಂತಹ ನಮ್ಮ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿ ಗಾಯದ ಮೇಲೆ ಬರೆ ಎಳೆಯುವ ಕೆಲಸ ಪುನರ್ವಸತಿ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ಪುನರ್ವಸತಿ ವ್ಯಾಪ್ತಿಯ ಬಾಗಲಕೋಟೆಗೆ ಪಟ್ಟಣಕ್ಕೆ ಹೋಲಿಸಿದಲ್ಲಿ ಕೊಲ್ಹಾರ ಪಟ್ಟಣ ಅಭಿವೃದ್ಧಿಯಿಂದ ಬಹಳ ವಂಚಿತವಾಗಿದೆ. ಪಟ್ಟಣದಲ್ಲಿ ಸಮರ್ಪಕವಾದ ರಸ್ತೆಗಳ ವ್ಯವಸ್ಥೆ ಇಲ್ಲ, ಒಳಚರಂಡಿ ವ್ಯವಸ್ಥೆ ಇಲ್ಲ, ವ್ಯಾಪಾರಸ್ಥರಿಗೆ ವಾಣಿಜ್ಯ ಸಂಕೀರ್ಣಿ ಇಲ್ಲ, ತಳಪಾಯ ಇಲ್ಲದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ, ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ, ಕಟ್ಟಲು ನೀಡಿದ್ದ 22 ಸಾವೀರ  ರೂಪಾಯಿಗಳು ತಳಪಾಯಕ್ಕೆ ಸಾಕಾಗಿಲ್ಲ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಶೌಚಾಲಯದ ವ್ಯವಸ್ಥೆ ಇಲ್ಲ, ಉದ್ಯಾನಗಳ ವ್ಯವಸ್ಥೆ ಇಲ್ಲ ಇಷ್ಟೇಲ್ಲ ಕೊರತೆಗಳ ನಡುವೆ ನಾವುಗಳು ಬದುಕು ಸವೆಸುತ್ತಿದ್ದೆವೆ ಸೌಲಭ್ಯಗಳನ್ನು ಕಲ್ಪಿಸಬೇಕಾದ ಅಧಿಕಾರಿಗಳು ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳಲು ಸಂತ್ರಸ್ತರನ್ನು ಬಲಿಪಶು ಮಾಡುತ್ತಿದ್ದಾರೆ ಕೂಡಲೇ ಸಂತ್ರಸ್ತರ ಮೇಲೆ ದಾಖಲು ಮಾಡಿರುವ ಪ್ರಕರಣಗಳನ್ನು ಹಿಂಪಡೆದುಕೊಂಡು ಸಂತ್ರಸ್ತರ ಕ್ಷಮೆಯಾಚಿಸಬೇಕು ಇಲ್ಲದಿದ್ದಲ್ಲಿ ಕೊಲ್ಹಾರ ಮುಳುಗಡೆ ಸಂತ್ರಸ್ತರು ಹಾಗೂ ಸುತ್ತಮುತ್ತಲಿನ ಮುಳುಗಡೆಯಾದ ಗ್ರಾಮಗಳ ಸಂತ್ರಸ್ತರೊಂದಿಗೆ ಉಗ್ರ ಹೋರಾಟಕ್ಕೆ ಅಣಿಯಾಗುತ್ತಿದ್ದೆವೆ  ಎಂದು ಅವರು ಹೇಳಿದರು.

    ಬಸವರಾಜ ಕೊಠಾರಿ ಮಾತನಾಡುತ್ತಾ ಹಳೆ ಕೊಲ್ಹಾರ ವ್ಯಾಪ್ತಿಯಲ್ಲಿ ನಮ್ಮ ಅಂಗಡಿ ಮಳಿಗೆ ಇತ್ತು ನಮಗೆ ವಾಣಿಜ್ಯ  ನಿವೇಶನ ಹಂಚಿಕೆ ಮಾಡಬೇಕಾಗಿತ್ತು ಆದರೆ ಪುನರ್ವಸತಿ ಅಧಿಕಾರಿಗಳು ವಸತಿ ನಿವೇಶನಕ್ಕೆ ಡಿ.ಡಿ ತುಂಬಿರುವವರಿಗೆ ಮೊನ್ನೆಯಷ್ಟೇ ವಾಣಿಜ್ಯ ನಿವೇಶನ ಹಂಚಿಕೆ ಮಾಡಿ ಅಕ್ರಮವ್ಯಸಗಿದ್ದಾರೆ ಹೀಗಾದರೆ ಹೇಗೆ ಎಂದು ಅಳಲು ತೋಡಿಕೊಂಡರು.

    ಜಿ.ಎನ್.ಗಣಿ, ಸಿಂಧೂರ ಬ್ಯಾಲ್ಯಾಳ, ಅನ್ವರ ಕಂಕರಪೀರ, ಬಸಪ್ಪ ಕೊಠಾರಿ, ಅಲ್ಲಾಭಕ್ಷ ಬಿಜಾಪೂರ, ಶಿವಪ್ಪ ಬರಗಿ, ಮಲೀಕ ನದಾಫ, ಜಾವೀದ ಬಿಳಗಿ ಇತರರು ಇದ್ದರು.

    ವರದಿ: ಎ.ಎನ್. ಪೀರ್,  ತುಮಕೂರು


     

    admin
    • Website

    Related Posts

    ಔರಾದ್: ಕಾಂಗ್ರೆಸ್ ಪಕ್ಷ ಸಂಘಟನೆಗೆ ಒತ್ತು ನೀಡಿ: ವಿನೋದ ಅಪ್ಪೆ

    November 24, 2026

    ಮನೆ, ನಿವೇಶನಗಳಿಗೆ ಅಧಿಕೃತ ಆಸ್ತಿ ಹಕ್ಕು: ಸಾರ್ವಜನಿಕರು ‘ಭೂ ಗ್ಯಾರಂಟಿ’ ಯೋಜನೆಯಡಿ ಇ-ಸ್ವತ್ತು ಪಡೆಯಲು ಇಒ ಕಿರಣ ಪಾಟೀಲ್ ಕರೆ

    November 22, 2026

    ಗ್ರಾಮಠಾಣಾ ಆಸ್ತಿಗಳಿಗೆ ಇ–ಸ್ವತ್ತು ಖಾತಾ ಮಾಡಿಸಿಕೊಳ್ಳಿ: ಶಿವಕುಮಾರ ಘಾಟೆ

    November 22, 2026

    Leave A Reply Cancel Reply

    Our Picks

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026

    ಮದುವೆ ಸೀಸನ್‌ ನಿಂದ ವ್ಯಾಪಾರಿಗಳಿಗೆ ಶುಕ್ರದೆಸೆ; ದೇಶಾದ್ಯಂತ 52 ಲಕ್ಷ ಮದುವೆಗಳ ನಿರೀಕ್ಷೆ: ಇಲ್ಲಿದೆ ಲೆಕ್ಕಾಚಾರ 

    November 23, 2026

    ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?

    November 21, 2026

    ಮಧ್ಯಪ್ರದೇಶದ ನರ್ಮದಾ ಕಣಿವೆಯಲ್ಲಿ 5 ಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆ ಪತ್ತೆ! ಏನದು ?

    November 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಔರಾದ್: ಕಾಂಗ್ರೆಸ್ ಪಕ್ಷ ಸಂಘಟನೆಗೆ ಒತ್ತು ನೀಡಿ: ವಿನೋದ ಅಪ್ಪೆ

    November 24, 2026

    ಔರಾದ್: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ವಿನೋದಕುಮಾರ ಅಪ್ಪೆ ಅವರು ಕಮಲನಗರ ಮತ್ತು ಔರಾದ್ ತಾಲ್ಲೂಕಿನ…

    1.83 ಲಕ್ಷ ರೈತರಿಗೆ ₹45.77 ಕೋಟಿ ಬೆಳೆ ಪರಿಹಾರ ವಿತರಣೆ |  ತುಮಕೂರು ಜಿಲ್ಲೆಯ 10 ತಾಲೂಕುಗಳೂ ಬರಪೀಡಿತ ಘೋಷಣೆ

    November 24, 2026

    ನ.28ರಂದು ರಂಗಾಪುರದ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಕಾರ್ತೀಕ ದೀಪೋತ್ಸವ | ಕೇಂದ್ರ ಸಚಿವ ವಿ. ಸೋಮಣ್ಣ ವಿಶೇಷ ಅತಿಥಿ

    November 24, 2026

    ಕೆಸಿಆರ್‌ ಗೆ ರಾಜಕೀಯ ಶಕ್ತಿ ತುಂಬಲು ಕುಂಚಶ್ರೀಗಳು ದಾರಿ ತೋರಲಿ:  ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್

    November 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.