ಬಳ್ಳಾರಿ: ಸಮಾಜದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆ, ರಸ್ತೆ ಅಪಘಾತಗಳು ಹಾಗೂ ಸೈಬರ್ ಅಪರಾಧ, ಬಾಲ್ಯ ವಿವಾಹ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮ್ಯಾರಾಥಾನ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ಹೇಳಿದರು.
ನಗರದ ಡಿಎಆರ್ ಮೈದಾನದಲ್ಲಿ ಮಾದಕ ವಸ್ತುಗಳ ಬಳಕೆ ತಡೆಗಟ್ಟುವಿಕೆ, ರಸ್ತೆ ಸುರಕ್ಷತೆ ಹಾಗೂ ಸೈಬರ್ ಅಪರಾಧ, ಬಾಲ್ಯ ವಿವಾಹ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಬಳ್ಳಾರಿ ಪೊಲೀಸ್ ರನ್(ಮ್ಯಾರಥಾನ್ ಮತ್ತು ವಾಕಾಥಾನ್) ಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಯುವಕರನ್ನು ಡ್ರಗ್ಸ್‌ನಿಂದ ದೂರವಿರಿಸಿ, ಕ್ರೀಡೆ ಮತ್ತು ಆರೋಗ್ಯಕರ ಜೀವನಶೈಲಿಯತ್ತ ಒಲಿಸುವುದು. ಜೊತೆಗೆ ರಸ್ತೆ ಸುರಕ್ಷತೆ ನಿಯಮಗಳ ಪಾಲನೆ, ಮಹಿಳೆ–ಮಕ್ಕಳ ರಕ್ಷಣೆ, ಬಾಲ್ಯ ವಿವಾಹ ಹಾಗೂ ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ಮೂಡಿಸುವುದು ಮ್ಯಾರಥಾನ್‌ನ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಈ ಜಾಗೃತಿ ಮ್ಯಾರಥಾನ್ ಅಭಿಯಾನವು ರಾಜ್ಯಾದ್ಯಂತ ನಡೆಯುತ್ತಿದ್ದು, ಬಳ್ಳಾರಿಯಲ್ಲಿ ಸತತವಾಗಿ ಇದು ಮೂರನೇ ಬಾರಿಯ ಆಯೋಜನೆಯಾಗಿದೆ. 5ಕೆ ಮತ್ತು 10ಕೆ ರನ್ ವಿಭಾಗದಲ್ಲಿ ಸಾವಿರಕ್ಕೂ ಅಧಿಕ ಮಂದಿ ಉತ್ಸಾಹದಿಂದ ನೋಂದಣಿ ಮಾಡಿಕೊಂಡು ಭಾಗವಹಿಸಿರುವುದು ಬಹಳ ಸಂತಸ ತಂದಿದೆ. ಹಿರಿಯ ನಾಗರಿಕರಿಗಾಗಿ ಪ್ರತ್ಯೇಕವಾಗಿ 2ಕೆ ವಾಕಥಾನ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಓಟದ ಮಾರ್ಗದುದ್ದಕ್ಕೂ ಸೈಬರ್ ಕ್ರೈಮ್ ಜಾಗೃತಿ ಹಾಗೂ ರಸ್ತೆ ಸುರಕ್ಷತೆಯ ಕುರಿತಾದ ಘೋಷಣೆಗಳು ಗಮನ ಸೆಳೆದವು. ಸಾರ್ವಜನಿಕರು ಮತ್ತು ಯುವಜನತೆ ಉತ್ಸಾಹದಿಂದ ಪಾಲ್ಗೊಂಡು ಜಾಗೃತಿ ಸಂದೇಶಕ್ಕೆ ಬೆಂಬಲ ಸೂಚಿಸಿದರು.
ಮ್ಯಾರಥಾನ್‌ನ ವಿವಿಧ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಿಗೆ ನಗದು, ಪದಕ, ಪ್ರಶಸ್ತಿ ಪತ್ರ ಹಾಗೂ
ಓಟದ ನಂತರ ಏರ್ಪಡಿಸಲಾಗಿದ್ದ ಕ್ವಿಜ್ ಸ್ಪರ್ಧೆಯಲ್ಲಿ ಸರಿಯಾದ ಉತ್ತರ ನೀಡಿದವರಿಗೆ ಬಹುಮಾನವಾಗಿ ಹೆಲ್ಮೆಟ್ ವಿತರಿಸಲಾಯಿತು.
5ಕೆ ರನ್ ವಿಜೇತರ ಪಟ್ಟಿ:
ಪುರುಷರ ವಿಭಾಗ:
ಪ್ರಥಮ– ಆನಂದ ನಿತಿನ್ (ಬಳ್ಳಾರಿ)
ದ್ವಿತೀಯ–ಈರಪ್ಪ (ಬಾಗಲಕೋಟೆ)
ತೃತೀಯ– ನಾಗರಾಜ್ (ಬೆಳಗಾವಿ).
ಮಹಿಳೆಯರ ವಿಭಾಗ:
ಪ್ರಥಮ–ಶಾಹೀನ್ (ಹುಬ್ಬಳ್ಳಿ)
ದ್ವಿತೀಯ–ನೂರ್ ಜಹಾನ್ (ಬೆಳಗಾವಿ)
ತೃತೀಯ– ವಿಜಯಲಕ್ಷ್ಮೀ (ಧಾರವಾಡ).
10ಕೆ ರನ್ ವಿಜೇತರ ಪಟ್ಟಿ:
ಪುರುಷರ ವಿಭಾಗ:
ಬೆಳಗಾವಿ ಶಿವಾನಂದ ಚಿಗಾರಿ(ಪ್ರಥಮ)
ಬಳ್ಳಾರಿಯ ಚನ್ನಕೇಶವ (ದ್ವಿತೀಯ)
ತುಮಕೂರಿನ ಧರಣಿ (ತೃತೀಯ).
ಮಹಿಳೆಯರ ವಿಭಾಗ:
ಬೆಳಗಾವಿಯ ಪ್ರಿಯಾ ಪಾಟೀಲ್ (ಪ್ರಥಮ)
ಬಳ್ಳಾರಿಯ ಸಿರೀಷಾ (ದ್ವಿತೀಯ)
ಬಳ್ಳಾರಿಯ ಉಮಾಮಹೇಶ್ವರಿ (ತೃತೀಯ).
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್., ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ನವೀನ್ ಕುಮಾರ್ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


