nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅನಗತ್ಯ ಸ್ಪ್ಯಾಮ್ ಕರೆ, ಮೆಸೇಜ್‌ ಗಳಿಂದ ಬೇಸತ್ತಿದ್ದೀರಾ? ಇಲ್ಲಿದೆ ಪರಿಹಾರ

    November 23, 2026

    ಜಮೀನು, ಮನೆ ಪತ್ರಗಳು ಕಳೆದುಹೋದರೆ ಏನು ಮಾಡಬೇಕು? ದಾಖಲೆಗಳ ಸುರಕ್ಷತೆಗೆ ಇಲ್ಲಿವೆ ಉಪಾಯಗಳು

    November 23, 2026

    ಸರ್ಕಾರಿ ಶಾಲೆಗಳ ದತ್ತು ನೀತಿ ಮತ್ತು ಎಡಿಬಿ ಸಾಲದ ಒಪ್ಪಂದಕ್ಕೆ ವಿರೋಧ: AIDSO ನೇತೃತ್ವದಲ್ಲಿ ವಿದ್ಯಾರ್ಥಿ–ಪೋಷಕರ ಪ್ರತಿಭಟನೆ

    November 23, 2026
    Facebook Twitter Instagram
    ಟ್ರೆಂಡಿಂಗ್
    • ಅನಗತ್ಯ ಸ್ಪ್ಯಾಮ್ ಕರೆ, ಮೆಸೇಜ್‌ ಗಳಿಂದ ಬೇಸತ್ತಿದ್ದೀರಾ? ಇಲ್ಲಿದೆ ಪರಿಹಾರ
    • ಜಮೀನು, ಮನೆ ಪತ್ರಗಳು ಕಳೆದುಹೋದರೆ ಏನು ಮಾಡಬೇಕು? ದಾಖಲೆಗಳ ಸುರಕ್ಷತೆಗೆ ಇಲ್ಲಿವೆ ಉಪಾಯಗಳು
    • ಸರ್ಕಾರಿ ಶಾಲೆಗಳ ದತ್ತು ನೀತಿ ಮತ್ತು ಎಡಿಬಿ ಸಾಲದ ಒಪ್ಪಂದಕ್ಕೆ ವಿರೋಧ: AIDSO ನೇತೃತ್ವದಲ್ಲಿ ವಿದ್ಯಾರ್ಥಿ–ಪೋಷಕರ ಪ್ರತಿಭಟನೆ
    • ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!
    • ಕಾರ್ತಿಕ ಹುಣ್ಣಿಮೆ ಯಾವಾಗ? ಪೂಜೆ, ದೀಪದಾನಕ್ಕೆ ಶುಭ ಮುಹೂರ್ತ ಇಲ್ಲಿದೆ!
    •  ತುಳಸಿ ವಿವಾಹ: ಶುಭ ಮುಹೂರ್ತ, ಪೂಜಾ ಸಾಮಗ್ರಿ, ಮಂತ್ರ ಮತ್ತು ಆಚರಣೆಯ ವಿಧಿವಿಧಾನಗಳೇನು?
    • ದೇವವ್ರತರು ಭೀಷ್ಮರಾದದ್ದು ಹೇಗೆ? ಇಚ್ಛಾಮರಣದ ವರದ ಹಿಂದಿನ ರೋಚಕ ಕಥೆ‌‌ ಇಲ್ಲಿದೆ
    • ಮದುವೆ ಸೀಸನ್‌ ನಿಂದ ವ್ಯಾಪಾರಿಗಳಿಗೆ ಶುಕ್ರದೆಸೆ; ದೇಶಾದ್ಯಂತ 52 ಲಕ್ಷ ಮದುವೆಗಳ ನಿರೀಕ್ಷೆ: ಇಲ್ಲಿದೆ ಲೆಕ್ಕಾಚಾರ 
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರೈಲ್ವೆಯಲ್ಲಿ 3,477 ಉದ್ಯೋಗ ಅವಕಾಶ; ಪದವೀಧರರಿಗೆ ಭರ್ಜರಿ ಚಾನ್ಸ್!
    ಉದ್ಯೋಗ October 9, 2026

    ರೈಲ್ವೆಯಲ್ಲಿ 3,477 ಉದ್ಯೋಗ ಅವಕಾಶ; ಪದವೀಧರರಿಗೆ ಭರ್ಜರಿ ಚಾನ್ಸ್!

    By Ganesh TumkuruOctober 9, 2026No Comments2 Mins Read
    indian railways

    ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕಾಯುತ್ತಿರುವ ಪದವೀಧರ ಅಭ್ಯರ್ಥಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ರೈಲ್ವೆ ನೇಮಕಾತಿ ಮಂಡಳಿಗಳು (RRB) ನಾನ್-ಟೆಕ್ನಿಕಲ್ ಪಾಪ್ಯುಲರ್ ಕ್ಯಾಟಗರಿ (NTPC Graduate Level) ಹುದ್ದೆಗಳ ನೇಮಕಾತಿಗಾಗಿ CEN 06/2026 ಅಧಿಸೂಚನೆ ಹೊರಡಿಸಿವೆ.ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಈ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಅರ್ಹ ಪದವೀಧರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

    CEN 06/2026ರ ಪ್ರಕಾರ ಒಟ್ಟು 3,477 ತಾತ್ಕಾಲಿಕ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ನಿಯಮಗಳ ಅನ್ವಯ ಲೆವೆಲ್-5 ಮತ್ತು ಲೆವೆಲ್-6 ವೇತನ ಶ್ರೇಣಿಯಲ್ಲಿ ಸಂಬಳ ದೊರೆಯಲಿದೆ.ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆ, ವಯೋಮಿತಿ, ವೈದ್ಯಕೀಯ ಮಾನದಂಡ, ಮೀಸಲಾತಿ ಹಾಗೂ ಇತರ ಅರ್ಹತಾ ನಿಯಮಗಳು ಅನ್ವಯಿಸಲಿವೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ವಿವರವಾದ ಅಧಿಸೂಚನೆಯನ್ನು ಪರಿಶೀಲಿಸಬೇಕು.

    ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್ 8, 2026ರಿಂದ ಆರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 6, 2026ರ ರಾತ್ರಿ 11.59ರೊಳಗೆ ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಕೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ನಡೆಯಲಿದ್ದು, ಅಂಚೆ ಅಥವಾ ಪೋಸ್ಟ್ ಮೂಲಕ ಅರ್ಜಿ ಸ್ವೀಕರಿಸಲಾಗುವುದಿಲ್ಲ. ಅಭ್ಯರ್ಥಿಗಳು ಅಧಿಕೃತ RRB ಅರ್ಜಿ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು.

    ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಗುರುತಿನ ಪರಿಶೀಲನೆಗಾಗಿ ಆಧಾರ್ ಆಧಾರಿತ ಪರಿಶೀಲನೆಗೆ ಮಹತ್ವ ನೀಡಲಾಗಿದೆ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳ ಹೆಸರು ಮತ್ತು ಜನ್ಮ ದಿನಾಂಕ ಸೇರಿದಂತೆ ಪ್ರಮುಖ ವಿವರಗಳು ಅವರ ದಾಖಲೆಗಳೊಂದಿಗೆ ಹೊಂದಿಕೆಯಾಗಿರುವುದು ಅಗತ್ಯ.
    ವಿಶೇಷವಾಗಿ 10ನೇ ತರಗತಿ ಅಥವಾ SSLC ಪ್ರಮಾಣಪತ್ರದಲ್ಲಿರುವ ಹೆಸರು ಮತ್ತು ಜನ್ಮ ದಿನಾಂಕ ಹಾಗೂ ಆಧಾರ್‌ನಲ್ಲಿರುವ ವಿವರಗಳಲ್ಲಿ ವ್ಯತ್ಯಾಸವಿದ್ದರೆ, ಅರ್ಜಿ ಪ್ರಕ್ರಿಯೆಯಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿಗಳು ಮುಂಚಿತವಾಗಿಯೇ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.
    ಆಧಾರ್‌ನಲ್ಲಿ ಹಳೆಯ ಫೋಟೋ ಅಥವಾ ಬಯೋಮೆಟ್ರಿಕ್ ವಿವರಗಳಿದ್ದರೆ ಅವುಗಳನ್ನು ನವೀಕರಿಸಿಕೊಳ್ಳುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.

    ವಲಯವಾರು ಹುದ್ದೆಗಳ ವಿವರ, ಅರ್ಜಿ ಶುಲ್ಕ, ವಯೋಮಿತಿ, ವಯೋಸಡಿಲಿಕೆ, ಶೈಕ್ಷಣಿಕ ಅರ್ಹತೆ, ಪರೀಕ್ಷಾ ವಿಧಾನ ಹಾಗೂ ಇತರ ಸಂಪೂರ್ಣ ನಿಯಮಗಳು ವಿವರವಾದ CEN 06/2026 ಅಧಿಸೂಚನೆಯಲ್ಲಿ ಲಭ್ಯವಾಗಲಿವೆ.
    ಅಭ್ಯರ್ಥಿಗಳು ರೈಲ್ವೆ ನೇಮಕಾತಿಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ ಅಧಿಕೃತ RRB ವೆಬ್‌ಸೈಟ್‌ಗಳನ್ನು ಮಾತ್ರ ಅವಲಂಬಿಸುವುದು ಉತ್ತಮ. ಹಳೆಯ ಅಥವಾ ನಕಲಿ ನೇಮಕಾತಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ರೈಲ್ವೆ ಹಿಂದೆಯೂ ಅಭ್ಯರ್ಥಿಗಳಿಗೆ ಸೂಚಿಸಿದೆ.

    ವಲಯವಾರು ಹುದ್ದೆಗಳು, ಅರ್ಜಿ ಶುಲ್ಕ, ವಯೋಸಡಿಲಿಕೆ ಮತ್ತು ಸಂಪೂರ್ಣ ನಿಯಮಾವಳಿಗಳನ್ನು ಒಳಗೊಂಡ ವಿವರವಾದ CEN 06/2026 ಅಧಿಸೂಚನೆಯನ್ನು ಎಲ್ಲಾ RRB ಗಳ ಅಧಿಕೃತ ವೆಬ್‌ಸೈಟ್‌ ಆದ rrb.indianrailways.gov.in ನಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ನಿರಂತರವಾಗಿ ವೆಬ್‌ಸೈಟ್ ವೀಕ್ಷಿಸುವ ಮೂಲಕ ಮುಂದಿನ ಮಾಹಿತಿಯನ್ನು ಪಡೆಯಬಹುದು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಫೆಡರಲ್ ಬ್ಯಾಂಕ್ ನೇಮಕಾತಿ: ಬೆಂಗಳೂರಿನಲ್ಲಿ ನ. 14, 15 ರಂದು ಬೃಹತ್ ನೇರ ಸಂದರ್ಶನ; ವಾರ್ಷಿಕ ₹11.04 ಲಕ್ಷದವರೆಗೆ ವೇತನ!

    November 12, 2026

    ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಉಚಿತ ತರಬೇತಿಗೆ ಅರ್ಜಿ ಆಹ್ವಾನ

    November 5, 2026

    BHEL ನೇಮಕಾತಿ 2026: 660 ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ತರಗತಿ ಹಾಗೂ ಐಟಿಐ ಪಾಸಾದವರಿಗೆ ಅವಕಾಶ!

    October 25, 2026

    Leave A Reply Cancel Reply

    Our Picks

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026

    ಮದುವೆ ಸೀಸನ್‌ ನಿಂದ ವ್ಯಾಪಾರಿಗಳಿಗೆ ಶುಕ್ರದೆಸೆ; ದೇಶಾದ್ಯಂತ 52 ಲಕ್ಷ ಮದುವೆಗಳ ನಿರೀಕ್ಷೆ: ಇಲ್ಲಿದೆ ಲೆಕ್ಕಾಚಾರ 

    November 23, 2026

    ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?

    November 21, 2026

    ಮಧ್ಯಪ್ರದೇಶದ ನರ್ಮದಾ ಕಣಿವೆಯಲ್ಲಿ 5 ಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆ ಪತ್ತೆ! ಏನದು ?

    November 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸ್ಪೆಷಲ್ ನ್ಯೂಸ್

    ಅನಗತ್ಯ ಸ್ಪ್ಯಾಮ್ ಕರೆ, ಮೆಸೇಜ್‌ ಗಳಿಂದ ಬೇಸತ್ತಿದ್ದೀರಾ? ಇಲ್ಲಿದೆ ಪರಿಹಾರ

    November 23, 2026

    ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾದಂತೆ ಅನಗತ್ಯ ಕರೆಗಳು ಮತ್ತು ಮೆಸೇಜ್‌ಗಳ ಕಾಟವೂ ಹೆಚ್ಚಾಗಿದೆ. ಕುಟುಂಬದವರು, ಸ್ನೇಹಿತರು ಅಥವಾ ಪರಿಚಿತರಿಂದ ಬರುವ ಮುಖ್ಯ…

    ಜಮೀನು, ಮನೆ ಪತ್ರಗಳು ಕಳೆದುಹೋದರೆ ಏನು ಮಾಡಬೇಕು? ದಾಖಲೆಗಳ ಸುರಕ್ಷತೆಗೆ ಇಲ್ಲಿವೆ ಉಪಾಯಗಳು

    November 23, 2026

    ಸರ್ಕಾರಿ ಶಾಲೆಗಳ ದತ್ತು ನೀತಿ ಮತ್ತು ಎಡಿಬಿ ಸಾಲದ ಒಪ್ಪಂದಕ್ಕೆ ವಿರೋಧ: AIDSO ನೇತೃತ್ವದಲ್ಲಿ ವಿದ್ಯಾರ್ಥಿ–ಪೋಷಕರ ಪ್ರತಿಭಟನೆ

    November 23, 2026

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.