ತುಮಕೂರು: ವಿಜ್ಞಾನ ಬಿಂದು, ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಹಕಾರದಲ್ಲಿ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿದೆ. ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ವಿಜ್ಞಾನ–ಗಣಿತ ಒಲಂಪಿಯಾಡ್, ಮಕ್ಕಳ ಕ್ರಿಯಾತ್ಮಕ–ಸ್ಪರ್ಧಾತ್ಮಕ ಕಲಿಕಾ ಸಾಮರ್ಥ್ಯ ಮತ್ತು ಅವಶ್ಯಕತೆಗೆ ಅನುಗುಣವಾಗಿ ಮ್ಯಾಥ್ ಲ್ಯಾಬ್ ಸಹಯೋಗದಲ್ಲಿ ಅಕಾಡೆಮಿಕ್ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ನವೋದಯ–ಸೈನಿಕ-ಖಾಸಗಿ ಇಂಟರ್ ನ್ಯಾಷನಲ್ ವಸತಿ ಶಾಲಾ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ. ನೀಟ್, ಜೆಇಇ, ಸಿಕೆಟಿ, ಉನ್ನತ ಶಿಕ್ಷಣದಲ್ಲಿ ಸಿಎಸ್ ಆರ್ ಸ್ಕಾಲರ್ ಶಿಪ್ನಿಂದ ಉಚಿತ ಶಿಕ್ಷಣ, ಕೇಂದ್ರ–ರಾಜ್ಯ ಸರ್ಕಾರಗಳ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಶಾಲಾ ಹಂತದಿಂದಲೇ ಮಕ್ಕಳಲ್ಲಿ/ಪೋಷಕರಲ್ಲಿ ಜಾಗೃತಿ ಮೂಡಿಸಿ ಪೂರಕ ಮಾಹಿತಿ, ಶೈಕ್ಷಣಿಕ ಮಾರ್ಗದರ್ಶನ ನೀಡುತ್ತಿದೆ.
ಬೇಸಿಗೆ ಕಲಿಕಾ ಶಿಬಿರದ ಮೊದಲ ಬ್ಯಾಚ್ ಏ.1 ರಿಂದ ಪ್ರತಿದಿನ ಸಂಜೆ 4ರಿಂದ 8ಗಂಟೆ ಅವಧಿಯಲ್ಲಿ ನಡೆಯಲಿದೆ. ಕನ್ನಡ/ಆಂಗ್ಲ ಮಾಧ್ಯಮದ ರಾಜ್ಯ/ಸಿಬಿಎಸ್ಇ/ಐಸಿಎಸ್ಇ ಪಠ್ಯಕ್ರಮ ಓದುತ್ತಿರುವ 2 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳಲ್ಲಿ ತರಬೇತಿ ಪಡೆಯಬಹುದು.
ಆಸಕ್ತರು ವಿಜ್ಞಾನ ಬಿಂದು ಕಚೇರಿ, ಡಿಡಿಪಿಐ ಫ್ಲೈಓವರ್ ಹತ್ತಿರ ಉಪ್ಪಾರಹಳ್ಳಿ, ತುಮಕೂರು ಅಥವಾ ಸಂಖ್ಯೆ 8660587150ರಲ್ಲಿ ಮ್ಯಾಥ್ ಲ್ಯಾಬ್ ನ ಚಿನ್ಮಯಿ ಸ್ವಾಮಿ ಅವರನ್ನು ಸಂಪರ್ಕಿಸಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


