ತುಮಕೂರು: ಸರ್ಕಾರಿ ಶಾಲೆಗಳನ್ನು ಉಳಿಸಲು ಏಪ್ರಿಲ್ 10 ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಮಟ್ಟದ ಸಮಾವೇಶದ ಹಿನ್ನಲೆಯಲ್ಲಿ ತುಮಕೂರು ಸಾರ್ವಜನಿಕ ಶಿಕ್ಷಣ ಉಳಿಸಿ ಜಿಲ್ಲಾ ಸಮಿತಿಯ ಸಭೆ ಇಂದು ನಗರದ ವಿಧ್ಯೋದಯ ಕಾಲೇಜನಲ್ಲಿ ಜರುಗಿತು. ಸಭೆಯಲ್ಲಿ ರೈತ, ಕಾರ್ಮಿಕ, ಮಹಿಳಾ ಸಂಘಟನೆಗಳು ಸೇರಿದಂತೆ ಎಲ್ಲಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಸಭೆಯ ನಂತರ ರಾಜ್ಯಮಟ್ಟದ ಸಮಾವೇಶದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಭೆಯನ್ನು ಉದ್ದೇಶಿಸಿ ಸಾರ್ವಜನಿಕ ಶಿಕ್ಷಣ ಉಳಿಸಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ಮೂರ್ತಿ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ರಾಜ್ಯದಲ್ಲಿ 40,000 ಸರ್ಕಾರಿ ಶಾಲೆ ಹಾಗೂ ತುಮಕೂರು ಜಿಲ್ಲೆಯ 1500 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದ್ದು, ಈ ನೀತಿಯ ವಿರುದ್ಧ ಎಐಡಿಎಸ್ಓ ನೇತೃತ್ವದಲ್ಲಿ ಈಗಾಗಲೇ ಜಿಲ್ಲೆಯ ಜನತೆ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳನ್ನು ರಚಿಸಿಕೊಂಡು ಕಳೆದ ನಾಲ್ಕು ತಿಂಗಳಿನಿಂದ ಹೋರಾಟ ನಡೆಸುತ್ತಿದ್ದಾರೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈ ಬಿಟ್ಟು, ನಮ್ಮೂರ ಶಾಲೆ ಉಳಿಸಿ ಎಂದು ಆಗ್ರಹಿಸಿ ಹಳ್ಳಿಯಲ್ಲಿ ಹೋರಾಟ ನಡೆಸಿ ತಾಲೂಕ ಹಾಗೂ ಜಿಲ್ಲಾ ಮಟ್ಟದ ವಿದ್ಯಾರ್ಥಿ ಪೋಷಕರ ಪ್ರತಿಭಟನ ಸಮಾವೇಶಗಳು ನಡೆದಿವೆ. ಈ ಹೋರಾಟದ ಮುಂದುವರಿಕೆಯಾಗಿ ಕೆಪಿಎಸ್ ಯೋಜನೆ ಕೈ ಬಿಟ್ಟು ನಮ್ಮೂರ ಶಾಲೆ ಉಳಿಸಿ ಎಂಬ ಧ್ವನಿಯನ್ನು ರಾಜಧಾನಿಯಲ್ಲಿ ಮೊಳಗಿಸಲು 10 ಏಪ್ರಿಲ್ 2026ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ ನಾಡಿನ ಹಿರಿಯ ಸಾಹಿತಿಗಳು ಶಿಕ್ಷಣ ತಜ್ಞರು ಬೆಂಬಲ ವ್ಯಕ್ತಪಡಿಸಿದ್ದು. ಈ ಹಿನ್ನೆಲೆಯಲ್ಲಿ ನಮ್ಮ ತುಮಕೂರು ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಹೇಳಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಜಿಲ್ಲಾ ಸಮಿತಿಯ ಸಲಹೆಗಾರರಾದ ಯತಿರಾಜು, ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ, ಮಂಜುಳ ಗೊನವಾರ (ಕಾರ್ಮಿಕ ಮುಖಂಡರು, AIUTUC), ವೀರೇಶ (ಶಿಕ್ಷಣ ಉಳಿಸಿ ಸಮಿತಿ) ಹಾಗೂ ಸಮಿತಿಯ ಸದಸ್ಯರಾದ ಶಿವಪ್ರಕಾಶ್ , ರಾಜಣ್ಣ, ಅನುಪಮಾ, ಪವಿತ್ರ, ರೇಖಾ, ನಟರಾಜು ಮತ್ತು ಅಮಿತ್ ಖಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


