ತುಮಕೂರು: ಸಿಂಹನಗದ್ದೆ ಶ್ರೀ ಕ್ಷೇತ್ರ ಪೀಠಾಧ್ಯಕ್ಷರಾದ ಪ.ಪೂ.ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಭಗವಾನ್ 1008 ಶ್ರೀ ಮಹಾವೀರ ಸ್ವಾಮಿಯವರ ಜನ್ಮ ಜಯಂತಿ ಮಹೋತ್ಸವವನ್ನು ನಾಳೆ (ಮಂಗಳವಾರ) ಬೆಳಿಗ್ಗೆ 6 ಗಂಟೆಯಿಂದ ನಗರದ ಬಿ.ಹೆಚ್.ರಸ್ತೆಯ ಜೈನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಯಂತಿ ಮಹೋತ್ಸವದ ಪ್ರಯುಕ್ತ ನಾಳೆ ಬೆಳಿಗ್ಗೆ 6 ಗಂಟೆಗೇಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನಿತ್ಯವಿಧಿ, ಜೈನ ಭವನದ ಜಿನಮಂದಿರದಲ್ಲಿ ಪಂಚಾಮೃತ ಪೂಜೆ, ಚಿಕ್ಕಪೇಟೆ ಜಿನಮಂದಿರದಲ್ಲಿ ಪಂಚಾಮೃತ ಪೂಜೆ, ತ್ರಿಲೋಕ ಭವನದಲ್ಲಿ ಉಪಹಾರ, ನಾಡಸ್ತರ್ ಮತ್ತು ಉಗಾರ್ ಬಿ.ಕೆ. ರವರ ಝುಂಝುಂ ಪಾಠಕ್ ವಾದ್ಯಗಳೊಂದಿಗೆ ಭಗವಾನ್ ಶ್ರೀ ಮಹಾವೀರ ಸ್ವಾಮಿಯವರ ಉತ್ಸವವು ಹೂವಿನ ಮಂಟಪದಲ್ಲಿ ನಡೆಸಲಾಗುತ್ತದೆ.
ಜೈನ ಭವನದಲ್ಲಿ ಶ್ರೀ ಭಗವಾನ್ ಮಹಾವೀರ ಸ್ವಾಮಿಯವರಿಗೆ 108 ಕಲಶಗಳ ಮಹಾಭಿಷೇಕ ಪೂಜೆ, ಬಾಲ್ಯಲೀಲೋತ್ಸವ, ಮಹಾಭಿಷೇಕ ಪೂಜೆ ನಡೆಯುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


