nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಿವಿಧೆಡೆ ಕಳ್ಳರ ಅಟ್ಟಹಾಸ: 25 ಲಕ್ಷದ ಚಿನ್ನ ಮತ್ತು ನಗದು ಕಳ್ಳತನ

    June 18, 2026

    ತೋಟದಿಂದ ಮನೆಗೆ ಬರುತ್ತಿದ್ದ ವೃದ್ದೆಯ ಬರ್ಬರ ಹತ್ಯೆ: ಚಿನ್ನಕ್ಕಾಗಿ ವೃದ್ದೆಯ ಕೊಲೆ ಶಂಕೆ

    June 18, 2026

    ಕೊರಟಗೆರೆ: ಕುಬೇರ ಗಣಪತಿ ಭವನಕ್ಕೆ 5 ಲಕ್ಷ ಧನ ಸಹಾಯ

    June 18, 2026
    Facebook Twitter Instagram
    ಟ್ರೆಂಡಿಂಗ್
    • ವಿವಿಧೆಡೆ ಕಳ್ಳರ ಅಟ್ಟಹಾಸ: 25 ಲಕ್ಷದ ಚಿನ್ನ ಮತ್ತು ನಗದು ಕಳ್ಳತನ
    • ತೋಟದಿಂದ ಮನೆಗೆ ಬರುತ್ತಿದ್ದ ವೃದ್ದೆಯ ಬರ್ಬರ ಹತ್ಯೆ: ಚಿನ್ನಕ್ಕಾಗಿ ವೃದ್ದೆಯ ಕೊಲೆ ಶಂಕೆ
    • ಕೊರಟಗೆರೆ: ಕುಬೇರ ಗಣಪತಿ ಭವನಕ್ಕೆ 5 ಲಕ್ಷ ಧನ ಸಹಾಯ
    • ಇ–ಪೌತಿ ಖಾತಾ ಆಂದೋಲನ–2 : ರೈತರಿಂದ ಅರ್ಜಿಗಳ ಸ್ವೀಕಾರ — ಬಾಕಿ ಆರ್ ಆರ್ ಟಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಸೂಚನೆ
    • ನೀಟ್ ಮರು ಪರೀಕ್ಷೆ ; ಕಟ್ಟುನಿಟ್ಟಿನ ಸಿದ್ಧತೆಗೆ ಎಡಿಸಿ ಸೂಚನೆ
    • ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹ
    • ಜೂನ್ 19ರಂದು ತುಮಕೂರಿನಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ
    • ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೇ 3ರಿಂದ ತುಮಕೂರು ಓಪನ್ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಚಾಂಪಿಯನ್ ಶಿಪ್
    Uncategorized May 2, 2026

    ಮೇ 3ರಿಂದ ತುಮಕೂರು ಓಪನ್ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಚಾಂಪಿಯನ್ ಶಿಪ್

    By adminMay 2, 2026No Comments2 Mins Read
    shubha kalyan

    Provided by
    Provided by

    ತುಮಕೂರು: ನಾಳೆಯಿಂದ ಮೇ 10ರವರೆಗೆ ತುಮಕೂರು ಓಪನ್ ಅಂತಾರಾಷ್ಟ್ರೀಯ ಮುಕ್ತ ಮಹಿಳಾ ಟೆನಿಸ್ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ವಿವಿ ಹಿಂಭಾಗದ ಟೆನಿಸ್ ಅಂಕಣದಲ್ಲಿ ಆಯೋಜಿಸಿದ್ದು, ಈಗಾಗಲೇ 7 ದೇಶಗಳ 70 ಮಂದಿ ಮಹಿಳಾ ಟೆನಿಸ್ ಆಟಗಾರ್ತಿಯರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಪಂದ್ಯಾವಳಿ ಭಾಗವಹಿಸಲು ತಯಾರಿ ನಡೆಸುತ್ತಿದ್ದಾರೆ.

    ರಾಜಧಾನಿಯೇತರ ನಗರಕ್ಕೆ ಇದೇ ಮೊದಲ ಬಾರಿ ವಿಶ್ವ ದರ್ಜೆಯ ಟೆನಿಸ್ ಪಂದ್ಯಾವಳಿಗೆ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ ಅವರು ಅವಕಾಶ ನೀಡಿದ್ದು, ಇಂತಹ ಅವಕಾಶ ಪಡೆದ ತುಮಕೂರು ಕರ್ನಾಟಕದ ಮೊದಲ ನಗರವೆಂಬ ಗರಿಮೆಗೆ ಪಾತ್ರವಾಗಿದೆ. ತುಮಕೂರು ಜಿಲ್ಲಾಡಳಿತ, ತುಮಕೂರು ಟೆನಿಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಲಾನ್ ಟೆನಿಸ್ ಅಸೋಸಿಯೇಷನ್ ಸಹಕಾರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಕ್ರೀಡಾಕೂಟದ ಯಶಸ್ಸಿಗೆ ಸಕಲ ತಯಾರಿ ನಡೆಸಿದ್ದು, ಪಂದ್ಯಾವಳಿಯ ಸಿಂಗಲ್ಸ್, ಡಬಲ್ಸ್ ನಲ್ಲಿ ಗೆಲ್ಲುವ ಆಟಗಾರ್ತಿಯರಿಗೆ ನೀಡುವ ಬಹುಮಾನದ ಮೊತ್ತ 30 ಸಾವಿರ ಡಾಲರ್ ಅನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಮ್ಮ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದಲೇ ಪ್ರಾಯೋಜಕತ್ವ ನೀಡಿರುವುದು ಗಮನಸೆಳೆದಿದೆ.

    ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶುಕ್ರವಾರ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿ, ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಪಂದ್ಯಾವಳಿ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.

    ಉಚಿತ ಟಿಕೆಟ್ ಪಡೆಯಿರಿ:

    ಮೇ 3 ರಿಂದ 10ರವರೆಗೆ ನಡೆಯುವ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಪಂದ್ಯಾವಳಿ ವೀಕ್ಷಿಸುವ ಆಸಕ್ತರು tumkuropenitfw35.com ವೆಬ್‌ ಸೈಟ್‌ ಗೆ ಲಾಗಿನ್ ಆಗಿ ಉಚಿತ ಪ್ರವೇಶ ಟಿಕೆಟ್ ಪಡೆಯಬಹುದು. ಬೇರೆಡೆಯಲ್ಲಿ ಇಂತಹ ಪಂದ್ಯಾವಳಿಗೆ ಶುಲ್ಕವಿರುತ್ತದೆ, ಆದರೆ ತುಮಕೂರಿನಲ್ಲಿ ಉಚಿತ ಪ್ರವೇಶದ ಅವಕಾಶ ಕಲ್ಪಿಸಿದೆ ಎಂದು ಡಿಸಿ ಶುಭ ಕಲ್ಯಾಣ್ ತಿಳಿಸಿದರು.

    ಮಹಿಳಾ ಟೆನಿಸ್ ಚಾಂಪಿಯನ್ ಶಿಪ್:

    ದರ್ಜೆಯ ಮಹಾತ್ಮ ಗಾಂಧಿ ಕ್ರೀಡಾಂಗಣವಾದ ಬಳಿಕ ರಾಜ್ಯ, ರಾಷ್ಟ್ರ ಮಟ್ಟದ ಹಲವು ಪಂದ್ಯಾವಳಿಗಳು ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರ ಪ್ರಧಾನ ಸಹಕಾರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಟೈರ್-2 ಸಿಟಿಯಾದ ತುಮಕೂರು ಕ್ರೀಡೆಯಲ್ಲೂ ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಎಲ್ಲಾ ಇಲಾಖೆಗಳು, ಕ್ರೀಡಾ ಪ್ರೋತ್ಸಾಹಕರ ಸಹಕಾರದೊಂದಿಗೆ ಅಂತರಾಷ್ಟ್ರೀಯ ಮಟ್ಟದ ಈ ಪಂದ್ಯಾವಳಿಯನ್ನು ಆಯೋಜಿಸಿದ್ದು, ಮೇ 3 ರಂದು ಆಯ್ಕೆ ಪಂದ್ಯಾವಳಿಯೊಂದಿಗೆ ಚಾಂಪಿಯನ್ ಶಿಪ್ ಶುಭಾರಂಭಗೊಳ್ಳಲಿದೆ. ಮೇ 5ರಂದು ಬೆಳಿಗ್ಗೆ 9.30ಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರು, ಆಮಂತ್ರಿತರ ಸಮಕ್ಷಮ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಚಾಲನೆ ನೀಡುವರು ಎಂದರು.

    ಈ ವೇಳೆ ಪಾಲಿಕೆ ಆಯುಕ್ತೆ ಶುಭ, ಉಪವಿಭಾಗಾಧಿಕಾರಿ ನಾಹಿದಾ ಜಂಜಂ, ತಹಸೀಲ್ದಾರ್ ರಾಜೇಶ್ವರಿ, ಟುಡಾ ಆಯುಕ್ತ ಉಮೇಶಚಂದ್ರ, ಜಿಲ್ಲಾ ಬಿಸಿಎಂ ಅಧಿಕಾರಿ ಸೋನಿಯಾ ವರ್ಣೇಕರ್, ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ಪಾಲಿಕೆ ಕಾರ್ಯಪಾಲಕ ಅಭಿಯಂತರರಾದ ವಿನಯ್, ಸಂದೀಪ್, ನಿರ್ಮಿತಿ ರಾಜಶೇಖರ್ ಸೇರಿದಂತೆ ಟೆನಿಸ್ ಅಸೋಸಿಯೇಷನ್ ಪದಾಧಿಕಾರಿಗಳು, ಪ್ರತಿನಿಧಿಗಳು ಹಾಜರಿದ್ದು ಪಂದ್ಯಾವಳಿ ಯಶಸ್ಸಿಗೆ ಪೂರಕವಾದ ಅಂಶಗಳ ಬಗ್ಗೆ ಚರ್ಚಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬೆಂಗಳೂರು: ವಿಐಪಿ ಸಂಚಾರಕ್ಕೆ ಗರ್ಭಿಣಿ ಇದ್ದ ಕಾರು ತಡೆದಿದ್ದಕ್ಕೆ ರಸ್ತೆಯಲ್ಲೇ ಪತಿ ಪ್ರತಿಭಟನೆ; ತನಿಖೆಗೆ ಆದೇಶ!

    June 2, 2026

    ಬೆಂಗಳೂರು: ಆರ್ಟ್ ಆಫ್ ಲಿವಿಂಗ್‌ನಲ್ಲಿ ನೂತನ ‘ಧ್ಯಾನ ಮಂದಿರ’ ಉದ್ಘಾಟಿಸಿದ ಪ್ರಧಾನಿ ಮೋದಿ

    May 10, 2026

    ರಸ್ತೆ, ಅಭಿವೃದ್ಧಿ ಕಾಮಗಾರಿ ಗುಣಮಟ್ಟದಿಂದ ನಿರ್ಮಿಸಿ: ಶಾಸಕ ಕೆ.ಎನ್.ರಾಜಣ್ಣ ಸೂಚನೆ

    May 7, 2026

    Leave A Reply Cancel Reply

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ವಿವಿಧೆಡೆ ಕಳ್ಳರ ಅಟ್ಟಹಾಸ: 25 ಲಕ್ಷದ ಚಿನ್ನ ಮತ್ತು ನಗದು ಕಳ್ಳತನ

    June 18, 2026

    ಕೊರಟಗೆರೆ: 6  ಜನ ಕಳ್ಳರ ತಂಡ 2 ದ್ವಿಚಕ್ರ ವಾಹನಗಳಲ್ಲಿ ಬಂದು ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ತುಂಬಾಡಿ ಮತ್ತು…

    ತೋಟದಿಂದ ಮನೆಗೆ ಬರುತ್ತಿದ್ದ ವೃದ್ದೆಯ ಬರ್ಬರ ಹತ್ಯೆ: ಚಿನ್ನಕ್ಕಾಗಿ ವೃದ್ದೆಯ ಕೊಲೆ ಶಂಕೆ

    June 18, 2026

    ಕೊರಟಗೆರೆ: ಕುಬೇರ ಗಣಪತಿ ಭವನಕ್ಕೆ 5 ಲಕ್ಷ ಧನ ಸಹಾಯ

    June 18, 2026

    ಇ–ಪೌತಿ ಖಾತಾ ಆಂದೋಲನ–2 : ರೈತರಿಂದ ಅರ್ಜಿಗಳ ಸ್ವೀಕಾರ — ಬಾಕಿ ಆರ್ ಆರ್ ಟಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಸೂಚನೆ

    June 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.