ಕೊರಟಗೆರೆ: 6 ಜನ ಕಳ್ಳರ ತಂಡ 2 ದ್ವಿಚಕ್ರ ವಾಹನಗಳಲ್ಲಿ ಬಂದು ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ತುಂಬಾಡಿ ಮತ್ತು ಚನ್ನರಾಯನದುರ್ಗ ಮತ್ತು ದೊಗ್ಗನಹಳ್ಳಿ ಗ್ರಾಮದಲ್ಲಿ ಮನೆಗಳ ಬಾಗಿಲು ಹೊಡೆಯಲು ಯತ್ನ ಮಾಡಿರುವ ಘಟನೆ ಮಂಗಳವಾರ ಮಧ್ಯ ರಾತ್ರಿ ನಡೆದಿದೆ.
ತುಂಬಾಡಿಯ ಸೂರ್ಯ ನಾರಾಯಣಶೆಟ್ಟಿ ಎಂಬುವರ ಮನೆಯ ಬೀಗ ಹೊಡೆದು 14 ಲಕ್ಷ ನಗದು ಮತ್ತು 11 ಲಕ್ಷ 80 ಸಾವಿರ ಚಿನ್ನ ಬೆಳ್ಳಿಯ ವಿವಿಧ ಒಡವೆಗಳು ಕಳ್ಳತನ ಮಾಡಿದ್ದಾರೆ. ಚನ್ನರಾಯನದುರ್ಗ ಮತ್ತು ದೊಗ್ಗನಹಳ್ಳಿಯಲ್ಲಿ ಕಳ್ಳತನಕ್ಕೆ ಯತ್ನಿಸುವಾಗ ಗ್ರಾಮಸ್ಥರ ಎಚ್ಚರಿಕೆಯ ಆಗಮನದಿಂದ ಸ್ಥಳದಿಂದ ಕಳ್ಳರು ಪರಾರಿ ಆಗಿದ್ದಾರೆ.
ಸಿಸಿಟಿವಿಯಲ್ಲಿ ಕಳ್ಳರ ದೃಶ್ಯ ಪತ್ತೆ:
ತುಂಬಾಡಿಯ ರಾಜ್ಯ ಹೆದ್ದಾರಿ ಸಮೀಪದ 2 ದ್ವಿಚಕ್ರ ವಾಹನದಲ್ಲಿ 6 ಜನ ಕಳ್ಳರ ತಂಡ ನಿಂತಿರುವ ದೃಶ್ಯ ಮತ್ತು ಮನೆಯ ಹಿಂಭಾಗ ಸಂಚರಿಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ, ಸಿಪಿಐ ಮತ್ತು ಪಿ ಎಸ್ ಸಿ ಮತ್ತು ಸಿಬ್ಬಂದಿಗಳು ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


