ಮಧುಗಿರಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಮೇ ಮತ್ತು ಜೂನ್ ತಿಂಗಳುಗಳ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ಮೇ 2026ರ ತಿಂಗಳಿನಲ್ಲಿ ವಿತರಿಸಲಾಗುವುದು ಎಂದು ತಹಶೀಲ್ದಾರ್ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಅಂತ್ಯೋದಯ ಪಡಿತರ ಚೀಟಿ (ಎಎವೈ)ಗೆ ಮಾಹೆಯಾನ 21 ಕೆ.ಜಿ.ಯಂತೆ 42 ಕೆ.ಜಿ. ರಾಗಿ, ಮಾಹೆಯಾನ 14.ಕೆ.ಜಿ.ಯಂತೆ 28 ಕೆ.ಜಿ. ಅಕ್ಕಿ ಸೇರಿದಂತೆ ಒಟ್ಟು 70. ಕೆ.ಜಿ. ರಾಗಿ ಹಾಗೂ ಅಕ್ಕಿಯನ್ನು ವಿತರಣೆ ಮಾಡಲಾಗುವುದು. ಆದ್ಯತಾ (ಕೇಂದ್ರ) ಪಡಿತರ ಚೀಟಿ (ಪಿ.ಹೆಚ್.ಹೆಚ್.)ಯ ಪ್ರತಿ ಸದಸ್ಯರಿಗೆ ಮಾಹೆಯಾನ 3.ಕೆ.ಜಿ.ಯಂತೆ 6.ಕೆ.ಜಿ. ರಾಗಿ ಹಾಗೂ ಮಾಹೆಯಾನ 2.ಕೆ.ಜಿ.ಯಂತೆ 4.ಕೆ.ಜಿ.ಅಕ್ಕಿ ಸೇರಿದಂತೆ ಒಟ್ಟು 10.ಕೆ.ಜಿ. ರಾಗಿ ಹಾಗೂ ಅಕ್ಕಿಯನ್ನು ವಿತರಣೆ ಮಾಡಲಾಗುವುದು. ಆದ್ಯತಾ(ರಾಜ್ಯ) ಪಡಿತರ ಚೀಟಿ(ಪಿ.ಹೆಚ್.ಹೆಚ್.)ಯ ಪ್ರತಿ ಸದಸ್ಯರಿಗೆ ಮಾಹೆಯಾನ 5.ಕೆ.ಜಿ.ಯಂತೆ ಒಟ್ಟು 10.ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲಾಗುವುದು.
ತಾಲ್ಲೂಕಿನ ಪಡಿತರ ಚೀಟಿದಾರರು ಮೇ ಮತ್ತು ಜೂನ್ ಮಾಹೆಗೆ ಸಂಬಂಧಿಸಿದ 2 ತಿಂಗಳ ಪಡಿತರವನ್ನು ಮೇ-2026ರ ಮಾಹೆಯಲ್ಲಿಯೇ ಒಟ್ಟಿಗೆ ಪಡೆಯಬೇಕಾಗಿದೆ. ಆದ್ದರಿಂದ ಕಡ್ಡಾಯವಾಗಿ 2 ಬಾರಿ ಬಯೋಮೆಟ್ರಿಕ್ ನೀಡಿ ಪಡಿತರವನ್ನು ಪಡೆಯಬೇಕು. ಈ ಕಾರ್ಯಕ್ಕಾಗಿ ಪ್ರತಿ ದಿನ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಆಹಾರ ಇಲಾಖೆಯ ಸರ್ವರ್ ಲಭ್ಯಗೊಳಿಸಿರುವುದರಿಂದ ಪಡಿತರ ಚೀಟಿದಾರರು ತಮ್ಮ ಬಯೋ ನೀಡಿ, ಮೇ 31ರೊಳಗಾಗಿ ಪಡಿತರ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


