ಯಾರೊಬ್ಬರನ್ನು ವೈಯಕ್ತಿಕವಾಗಿ ನಿಂದಿಸುವ ಗುಣದವನು ನಾನಲ್ಲ, ತೇಜೋವಧೆ ಮಾಡಿಸೋನು ಸಹ ಅಲ್ಲ. ನಾನು ಮತ್ತು ನನ್ನ ಮಗ ಸೇರಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದೇವೆ ಎಂದು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಯಾರೂ ಕೀಳು ಮಟ್ಟದ ರಾಜಕಾರಣ ಮಾಡಬಾರದು. ನಾನು ನನ್ನ ಮಗನಿಗೆ ಕರೆ ಮಾಡಿದ್ದರೆ ರಾಜಕಾರಣದಿಂದ ನಿವೃತ್ತಿ ಹೊಂದುತ್ತೇನೆ. ಇದು ಸುಳ್ಳಾದರೆ ಬಿ.ಎಸ್. ನಾಗರಾಜು ರಾಜಕೀಯದಿಂದ ನಿವೃತ್ತಿ ಹೊಂದುತ್ತಾರೆಯೇ?
| ಎಸ್.ಆರ್.ಶ್ರೀನಿವಾಸ್, ಶಾಸಕರು.
ಚೇಳೂರು: ಇನ್ನೊಬ್ಬರನ್ನು ಹನಿಟ್ರ್ಯಾಪ್ ಮಾಡಿ ತೇಜೋವಧೆ ಮಾಡಿ ಕೀಳುಮಟ್ಟದ ರಾಜಕಾರಣ ಮಾಡುವುದು ನನಗೆ ಗೊತ್ತಿಲ್ಲ. ಚಿಲ್ಲರೆಗಳಿಗೆ ನಾನು ಹೆದರುವ ಮಗನೇ ಅಲ್ಲ ಎಂದು ಶಾಸಕ ಎಸ್. ಆರ್.ಶ್ರೀನಿವಾಸ್ ಜೆಡಿಎಸ್ ಮುಖಂಡ ಬಿ.ಎಸ್ ನಾಗರಾಜುಗೆ ತಿರುಗೇಟು ನೀಡಿ ಹೇಳಿದರು. ಅವರು ಚೇಳೂರು, ಸಾತೇನಹಳ್ಳಿ, ನಂದಿಹಳ್ಳಿ, ಕೋಡಿ ನಾಗೇನಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಾತೇನಹಳ್ಳಿಯಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಇನ್ನೂ ಎಚ್ ಎಂಟಿಎಲ್ ಗೆ 300 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಸಂಬಂಧ ವಿರೋಧಿಸಿ ರೈತರು ಇಂದು (ಮೇ 23) ನನ್ನನ್ನು ಭೇಟಿ ಮಾಡಿದರು. ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡುತ್ತೇನೆ. ಗುಬ್ಬಿಯಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿದ್ದು ಎರಡು ಕಡೆ ಚರಂಡಿ ನಿರ್ಮಾಣ ಮಾಡಲು ಆರು ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಅನುದಾನ ಮಂಜೂರಾಗುತ್ತಿದ್ದಂತೆ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಓಂಕಾರ್, ಸದಾಶಿವಯ್ಯ, ಈಶ್ವರಯ್ಯ, ಪಾಂಡುರಂಗಯ್ಯ, ಪ್ರಸಾದ್, ದಿವಾಕರ್, ಜಗದೀಶ್, ಮಂಜುನಾಥ್, ನರಸಿಂಹಮೂರ್ತಿ, ಶಿವಣ್ಣ ಶಿವಾನಂದ್, ಲಿಂಗರಾಜು, ನಾಗರಾಜು, ನಿರಂಜನ್, ಶಿವನಂಜಯ್ಯ, ನಂಜೇಗೌಡ, ರಾಮಕೃಷ್ಣಪ್ಪ, ವತ್ಸಲ, ಹನುಮಂತರಾವ್, ಗುತ್ತಿಗೆದಾರರಾದ ಸುಪ್ರೀತ್, ಸಿದ್ದರಾಮಯ್ಯ, ಟಿ.ಎಚ್.ಉಮೇಶ್, ಟಿಹೆಚ್‌ಒ ಡಾ.ಬಿಂದು ಮಾಧವ್, ಡಾ.ಸುಷ್ಮಾ, ಸಿಎಚ್‌ಒ ಪಾಟೀಲ್, ವಿಜಯಲಕ್ಷ್ಮಿ, ಪಿಡಿಒ ಶ್ಯಾಮಲ, ಕೃಷಿ ಉತ್ಪನ್ನ ಮಾರುಕಟ್ಟೆಯ ಜಿಲ್ಲಾ ನಿರ್ದೇಶಕ ರಾಜಣ್ಣ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ, ಎಇ ಉಮೇಶ್ ಮುಂತಾದವರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


