nammatumakuru

    Subscribe to Updates

    Get the latest creative news from FooBar about art, design and business.

    What's Hot

    ಚಿಕ್ಕನಾಯಕನಹಳ್ಳಿ: 35ಕ್ಕೂ ಹೆಚ್ಚು ಲಂಬಾಣಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ

    May 27, 2026

    ಮೂರ್ಖರು ಯಾರು? | ರಚನೆ: ವೇಣುಗೋಪಾಲ್, ತುಮಕೂರು

    May 27, 2026

    ಅಕ್ರಮ ಸಂಬಂಧಕ್ಕೆ ಬಲಿಯಾದ ವಿವಾಹಿತೆ; 4 ತಿಂಗಳ ಬಳಿಕ ಸುಟ್ಟ ಶವದ ನಿಗೂಢತೆ ಭೇದಿಸಿದ ತುರುವೇಕೆರೆ ಪೊಲೀಸ್!

    May 27, 2026
    Facebook Twitter Instagram
    ಟ್ರೆಂಡಿಂಗ್
    • ಚಿಕ್ಕನಾಯಕನಹಳ್ಳಿ: 35ಕ್ಕೂ ಹೆಚ್ಚು ಲಂಬಾಣಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ
    • ಮೂರ್ಖರು ಯಾರು? | ರಚನೆ: ವೇಣುಗೋಪಾಲ್, ತುಮಕೂರು
    • ಅಕ್ರಮ ಸಂಬಂಧಕ್ಕೆ ಬಲಿಯಾದ ವಿವಾಹಿತೆ; 4 ತಿಂಗಳ ಬಳಿಕ ಸುಟ್ಟ ಶವದ ನಿಗೂಢತೆ ಭೇದಿಸಿದ ತುರುವೇಕೆರೆ ಪೊಲೀಸ್!
    • ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!
    • ಮುಳ್ಳಯ್ಯನಗಿರಿಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಟಿಟಿ: 13 ಪ್ರವಾಸಿಗರು ಅದೃಷ್ಟವಶಾತ್‌ ಪಾರು!
    • ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ
    • ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ: ಸ್ಪಷ್ಟನೆ ನೀಡಿದ ಆರ್.ವಿ.ದೇಶಪಾಂಡೆ
    • ಇಂಧನ ದರ ಏರಿಕೆ: ರಾಜಕೀಯ ಮಾಡದೆ ವ್ಯಾಟ್ ಕಡಿಮೆ ಮಾಡಿ; ಸಿಎಂ ಸಿದ್ದರಾಮಯ್ಯಗೆ ಆರ್.ಅಶೋಕ್ ಒತ್ತಾಯ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೂರ್ಖರು ಯಾರು? | ರಚನೆ: ವೇಣುಗೋಪಾಲ್, ತುಮಕೂರು
    ಲೇಖನ May 27, 2026

    ಮೂರ್ಖರು ಯಾರು? | ರಚನೆ: ವೇಣುಗೋಪಾಲ್, ತುಮಕೂರು

    By adminMay 27, 2026No Comments2 Mins Read
    venugopal
    ರಚನೆ: ರಚನೆ : ವೇಣುಗೋಪಾಲ್, ತುಮಕೂರು

    ಬಾವಿ ಕಪ್ಪೆ ಬಾವಿಯೊಳಗೆ
    “ಇದೇ ಜಗ”ವೆಂದಿತಯ್ಯಾ
    ಸಾಗರ ಕಂಡ ಮೊಸಳೆಯೂ
    “ನನ್ನದೇ ಲೋಕ” ಎಂದಿತಯ್ಯಾ।

    ಸಿಂಹ ತಾನು ಕಾಡಿನ ರಾಜ
    ಎಂದು ಗರ್ವ ಪಟ್ಟಿತಯ್ಯಾ
    ಸಣ್ಣ ಇಲಿಯ ಬಲೆಯೊಳಗೆ
    ಬಿದ್ದು ಮೌನಗೊಂಡಿತಯ್ಯಾ।


    Provided by
    Provided by

    ಓಟದ ಮೊಲ ಗೆಲುವು ತನ್ನದು
    ಎಂದು ನಿದ್ರೆ ಹೊತ್ತಿತಯ್ಯಾ
    ಛಲದ ಆಮೆ ಹೆಜ್ಜೆ ಬಿಡದೆ
    ಗುರಿಯ ತಲುಪಿತಯ್ಯಾ।

    ಅಜ್ಜಿ ತನ್ನ ಕೋಳಿಯ ಕೂಗೇ
    ಜಗದ ಬೆಳಕು ಎಂದಳಯ್ಯಾ
    ತನ್ನೆಲ್ಲ ಉರಿದು ಹಣತೆ ಮಾತ್ರ
    ಇರುಳ ಕಳೆದು ನಿಂತಿತಯ್ಯಾ।

    ಮೊಸಳೆ ಕುತಂತ್ರ ಮಾಡಿ
    ಕೋತಿಯ ಹೃದಯ ಬೇಡಿತಯ್ಯಾ
    ಬುದ್ಧಿಯ ಕೋತಿ ಮಾತಿನಲಿ
    ತನ್ನ ಪ್ರಾಣ ಉಳಿಸಿತಯ್ಯಾ।

    ಗೋವು ಮಾತು ಕೊಟ್ಟ ಬಳಿಕ
    ಹುಲಿಯ ಮುಂದೆ ನಿಂತಿತಯ್ಯಾ
    ಸತ್ಯದ ಶಕ್ತಿ ಕಂಡ ಹುಲಿ
    ತನ್ನ ಹೃದಯ ಕರಗಿತಯ್ಯಾ।

    ಮುಂಗುಸಿಯನು ಕೊಂದ ತಾಯಿ
    ದುಡುಕಿ ಕಣ್ಣೀರು ಸುರಿತಯ್ಯಾ
    ಮಗುವ ಕಾಯ್ದ ಹಾವಿನ ಶವ
    ತೊಟ್ಟಿಲ ಬಳಿಯ ಕಂಡಿತಯ್ಯಾ।

    “ನಾನೆ ಮೇಲು” ಎಂದ ಮನುಜ
    ಭೂಮಿಯೆಲ್ಲ ಸುತ್ತಿತಯ್ಯಾ
    ದೇವನಿಗಿಂತ ತಾನೇ ದೊಡ್ಡ
    ಎಂದು ಅಹಂಕಾರ ಪಟ್ಟಿತಯ್ಯಾ।

    ಧನ ಸಂಪತ್ತು ವಿದ್ಯೆ ಬಂದರೂ
    ನೀತಿ ಮರೆತ ಮಾನವಯ್ಯಾ
    ದೇವ ಕರುಣೆ ದೂರವಾದರೆ
    ಬಾಳು ದುಃಖ ಸಾಗರಯ್ಯಾ।

    ಗರ್ವದಿಂದ ತಲೆ ಎತ್ತಿದವನು
    ಕ್ಷಣದಲ್ಲಿ ನೆಲ ಸೇರುವನು
    ವಿನಯ ಧರ್ಮ ಹಿಡಿದ ಜೀವಿ
    ಜಗದೊಳಗೆ ಬೆಳಗುವನು।

    ಮೂರ್ಖನು ಯಾರು ಕೇಳಿದರೆ
    ತನ್ನನು ತಾನೆ ಅರಿಯದವನು
    ಜ್ಞಾನವಿದ್ದರೂ ದರ್ಪ ಹಿಡಿದು
    ಸತ್ಯವ ಮರೆಯುವವನು॥


    ಸಂಪಾದಕರ ಮನವಿ

    “ಮೂರ್ಖರು ಯಾರು?” ಎಂಬ ವಿಶಿಷ್ಟ ಕವನದ ಮೂಲಕ ನವ ಕವಿ ವೇಣುಗೋಪಾಲ್ ತುಮಕೂರು ಅವರು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಸರಳ ಪದಗಳಲ್ಲಿ ಗಾಢವಾದ ಜೀವನ ಸತ್ಯಗಳನ್ನು ಹೇಳುವ ಈ ಕವನವು ಓದುಗರ ಮನಸ್ಸಿಗೆ ತಟ್ಟುವ ಶಕ್ತಿಯನ್ನು ಹೊಂದಿದೆ.

    ಹೊಸ ಕವಿಯಾಗಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿರುವ ವೇಣುಗೋಪಾಲ್ ರವರಿಗೆ ಕನ್ನಡಿಗರ ಪ್ರೋತ್ಸಾಹ, ಅಭಿಮಾನ ಮತ್ತು ಆಶೀರ್ವಾದ ಅತ್ಯಗತ್ಯವಾಗಿದೆ. ಜನಸಾಮಾನ್ಯರು ಈ ಕವನವನ್ನು ಓದಿ ತಮ್ಮ ಅನಿಸಿಕೆ, ಅಭಿಪ್ರಾಯ ಹಾಗೂ ಪ್ರೋತ್ಸಾಹದ ಮಾತುಗಳನ್ನು ಹಂಚಿಕೊಳ್ಳುವ ಮೂಲಕ ಪ್ರತಿಭಾವಂತ ಕವಿಗೆ ಬೆಂಬಲ ನೀಡಬೇಕು.

    ಒಬ್ಬ ಹೊಸ ಸಾಹಿತ್ಯ ಪ್ರತಿಭೆ ಬೆಳೆಯುವುದು ಕೇವಲ ಅವರ ವೈಯಕ್ತಿಕ ಸಾಧನೆಯಲ್ಲ, ಕನ್ನಡ ಸಾಹಿತ್ಯದ ಬೆಳವಣಿಗೆಯೂ ಆಗಿದೆ. ಸಮಾಜಮುಖಿ ಚಿಂತನೆ ಹೊಂದಿರುವ ಇಂತಹ ಕವಿಗಳು ದೇಶಾದ್ಯಂತ ಗುರುತಿಸಿಕೊಂಡು ಬೆಳೆಯಲು ಎಲ್ಲರೂ ಕೈಜೋಡಿಸೋಣ.

    ನವ ಕವಿ ವೇಣುಗೋಪಾಲ್ ತುಮಕೂರು ಅವರಿಗೆ ಇನ್ನಷ್ಟು ಉತ್ತಮ ಕೃತಿಗಳನ್ನು ರಚಿಸುವ ಶಕ್ತಿ ದೊರೆಯಲಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಲಿ ಎಂಬ ಹಾರೈಕೆಗಳು.

    ಸಾಹಿತ್ಯಾಸಕ್ತರ ಪರವಾಗಿ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್‌ ಕಾರಣ ಆಗ್ತಾ ಇದೆಯೇ?

    May 25, 2026

    “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ | ನಾಯಕನ ಹೆಸರೆ ಸಿನಿಮಾ ಶೀರ್ಷಿಕೆಯಾಗಿರುವುದು ವಿಶೇಷ

    May 19, 2026

    ಗುರು ಶಿಷ್ಯರು: ಈ ದಿನದ ಕಥೆ

    May 16, 2026

    Leave A Reply Cancel Reply

    Our Picks

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಚಿಕ್ಕನಾಯಕನಹಳ್ಳಿ

    ಚಿಕ್ಕನಾಯಕನಹಳ್ಳಿ: 35ಕ್ಕೂ ಹೆಚ್ಚು ಲಂಬಾಣಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ

    May 27, 2026

    ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 58 ತಾಂಡಾಗಳ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ (PUC), ಪದವಿ ಹಾಗೂ ಸ್ನಾತಕೋತ್ತರ ಪದವಿ…

    ಮೂರ್ಖರು ಯಾರು? | ರಚನೆ: ವೇಣುಗೋಪಾಲ್, ತುಮಕೂರು

    May 27, 2026

    ಅಕ್ರಮ ಸಂಬಂಧಕ್ಕೆ ಬಲಿಯಾದ ವಿವಾಹಿತೆ; 4 ತಿಂಗಳ ಬಳಿಕ ಸುಟ್ಟ ಶವದ ನಿಗೂಢತೆ ಭೇದಿಸಿದ ತುರುವೇಕೆರೆ ಪೊಲೀಸ್!

    May 27, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.