ಮಧುಗಿರಿ : ಮುಂಗಾರು ಆರಂಭಗೊಂಡ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯಿಂದ ನೀಡಲಾಗುವ ಬಿತ್ತನೆ ಬೀಜವನ್ನು ವಿತರಿಸುತ್ತಿದ್ದು, ರೈತರು ಸದುಪಯೋಗ ಮಾಡಿಕೊಳ್ಳಿ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲೂಕಿನ ಮಿಡಿಗೇಶಿ ಹೋಬಳಿಯ ಹೊಸಕರೆ ಗ್ರಾಮದಲ್ಲಿ 2026–27 ನೇ ಸಾಲಿನ ಮುಂಗಾರು ಹಂಗಾಮಿನ ರಾಷ್ಟ್ರೀಯ ಖಾದ್ಯತೈಲ ಅಭಿಯಾನ ಎಣ್ಣೆಕಾಳು ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸದ್ಯ ಮಳೆ ಆರಂಭವಾಗಿದೆ. ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸಿ ಬೀಜ ಬಿತ್ತನೆ ಮಾಡಿ ಎಂದರು. ಕೃಷಿ ಭೂಮಿಯನ್ನು ಎಂದಿಗೂ ಮಾರಾಟ ಮಾಡಬೇಡಿ. ಮಣ್ಣು ಸಬಲೀಕರಣ ಮಾಡಿ ರೈತರು ಬೇಸಾಯ ಕೈಗೊಳ್ಳಬೇಕು. ಹಾಗಾಗ ಕೃಷಿ ಅಧಿಕಾರಿಗಳ ಸಲಹೆ ಪಡೆದು ಮುಂದುವರೆಯಲು ಸೂಚಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜೆಡಿ ಲಕ್ಷ್ಮಣ್ ಕಲ್ಲಣವರ್, ಉಪ ಕೃಷಿ ನಿರ್ದೇಶಕ ಚಂದ್ರಕುಮಾರ್, ಸಾಹಾಯಕ ಕೃಷಿ ನಿರ್ದೇಶಕ ಚನ್ನಕೇಶವಮೂರ್ತಿ, ಕೃಷಿ ವಿಜ್ಞಾನಿ ಈರೇಹಳ್ಳಿ ಜಗದೀಶ್, ಪ್ರಶಾಂತ್, ಕೃಷಿಕ ಸಮಾಜದ ಅಧ್ಯಕ್ಷ ಗುಟ್ಟೆ ರಮೇಶ್, ಕಾಂಗ್ರೆಸ್ ಮುಖಂಡರು, ರೈತರು ಜೊತೆಗಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


