ತುಮಕೂರು: ಇಲ್ಲಿನ ಚಿಕ್ಕಪೇಟೆಯ ಶ್ರೀ ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಸಂಸ್ಥಾಪನಾ ದಿನದ ಅಂಗವಾಗಿ ಜೂ.14ರಂದು ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 2ರವರೆಗೆ ಸಂಘದ ಸದಸ್ಯರು ಹಾಗೂ ಅವರ ಕುಟುಂಬವರ್ಗದವರಿಗಾಗಿ ಉಚಿತ ಆರೋಗ್ಯ ತಪಾಸಣೆ, ನೇತ್ರ ಶಸ್ತ್ರಚಿಕಿತ್ಸಾ ಶಿಬಿರವನ್ನು ಸಂಘದ ಬಳಿ ಆಯೋಜಿಸಲಾಗಿದೆ.
ಶ್ರೀ ಶಾರದಾ ದೇವಿ ಕಣ್ಣಾಸ್ಪತ್ರೆ, ಸಂಶೋಧನಾ ಕೇಂದ್ರ ಪಾವಗಡ, ಶ್ರೀ ಗುರುಕುಲ ಕ್ಲಿನಿಕ್, ಡಯಾಗ್ನಸ್ಟಿಕ್ ಸೆಂಟರ್ ಸಹಯೋಗದಲ್ಲಿ ಈ ಶಿಬಿರ ನೆರವೇರಲಿದ್ದು, ಸಂಜೆ 4ಗಂಟೆಗೆ ಸಂಸ್ಥಾಪನಾ ದಿನದ ಕಾರ್ಯಕ್ರಮ ಸ್ವಾಮಿ ಜಪಾನಂದಜೀ ಅವರ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ.
ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಎಸ್‌ಎಂಎಸ್ ಸೇವೆಗೆ ಚಾಲನೆ ಕೊಡುವರು. ಅಧ್ಯಕ್ಷತೆಯನ್ನು ಸಹಕಾರಿ ಅಧ್ಯಕ್ಷ ಎಸ್.ಹರೀಶ್ ಆಚಾರ್ಯ ವಹಿಸುವರು.
ಮುಖ್ಯ ಅತಿಥಿಗಳಾಗಿ ಗುರುಕುಲ ಸಹಕಾರಿ ಸಂಸ್ಥೆಯ ಜಿ.ಮಲ್ಲಿಕಾರ್ಜುನಯ್ಯ, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಹೆಬ್ಬೂರು ನಾಗರಾಜಚಾರ್, ನಿವೃತ್ತ ಪ್ರಾಚಾರ್ಯ ಡಾ.ಕೆ.ವಿ.ಕೃಷ್ಣಮೂರ್ತಿ, ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಟಿ.ಎ.ರವಿಕುಮಾರ್, ಉಪಾಧ್ಯಕ್ಷ ಗೋವರ್ಧನಚಾರ್ ಹಾಗೂ ಹಾಲಿ, ಮಾಜಿ ನಿರ್ದೇಶಕ ಮಂಡಳಿಯವರು ಪಾಲ್ಗೊಳ್ಳುವರು ಎಂದು ವ್ಯವಸ್ಥಾಪಕಿ ಜಿ.ಲೀಲಾ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


