ಕೊರಟಗೆರೆ: ತಾಲ್ಲೂಕಿನ 2026–27 ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯನ್ನು ಜಾರಿಗೊಳಿಸಿದ್ದು, ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆದ ಹಾಗೂ ಸಾಲ ಪಡೆಯದ ರೈತ ಬಾಂಧವರು ಶೇಂಗಾ(ನೀ), ತೊಗರಿ(ಮ.ಆ), ಬೆಳೆಗಳಿಗೆ ಜುಲೈ15, ಮುಸುಕಿನ ಜೋಳ(ಮ.ಆ) ಮತ್ತು ಮುಸುಕಿನ ಜೋಳ(ನೀ) ಬೆಳೆಗಳಿಗೆ ಜುಲೈ 31, ಹಾಗೂ ಭತ್ತ(ನೀ), ಶೇಂಗಾ(ಮ.ಆ), ರಾಗಿ(ಮ.ಆ), ರಾಗಿ(ನೀ) ಮತ್ತು ಹುರುಳಿ(ಮ.ಆ) ಬೆಳೆಗಳಿಗೆ ಆಗಸ್ಟ್ 14 ಬೆಳೆವಿಮೆಗೆ ನೋಂದಾಯಿಸಿಕೊಳ್ಳಲು ಕಡೆ ದಿನಾಂಕವಾಗಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕರಾದ ಕಲ್ಲೇಶ್ ಪ್ರಸಾದ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ತಾಲ್ಲೂಕಿನಲ್ಲಿ ಸುಮಾರು 513 ಜನ ರೈತರು ಕೃಷಿ ಬೆಳೆಗಳಿಗೆ ಬೆಳೆ ವಿಮೆ ನೊಂದಾಯಿಸಿದ್ದು , ಬ್ಯಾಂಕ್ ಗಳಲ್ಲಿ ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರು ಭತ್ತ, ಶೇಂಗಾ, ರಾಗಿ ಮತ್ತು ಹುರುಳಿ ಬೆಳೆಗಳಗೆ ಬೆಳೆ ವಿಮೆ ನೊಂದಾಯಿಸಿಲು ಆಗಸ್ಟ್ 14 ಕೊನೆ ದಿನಾಂಕ ಆಗಿರುತ್ತದೆ.
ಆದ್ದರಿಂದ ರೈತರು ತಮ್ಮ ವ್ಯಾಪ್ತಿಯ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ, ಗ್ರಾಮ ಒನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆ ನೋಂದಾಯಿಸಿಕೊಳ್ಳಲು ತಿಳಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


