ತುಮಕೂರು: ಪತ್ನಿ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆಂಬ ಅನುಮಾನದಿಂದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೊರವಲಯದ ಹೆಗ್ಗೇರೆಯಲ್ಲಿ ನಡೆದಿದೆ. ಮೃತರನ್ನು ಎಸ್.ಕೆ.ಚಂದನ್ (25) ಎಂದು ಗುರುತಿಸಲಾಗಿದೆ.
ಹೆಗ್ಗೇರೆಯ ಚಂದನ್ ಮತ್ತು ಗುಬ್ಬಿ ತಾಲ್ಲೂಕಿನ ಮಂಚಲದೊರೆಯ ಮಮತಾ ಅವರು ಪ್ರೀತಿಸುತ್ತಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಇವರಿಬ್ಬರ ಮದುವೆ ದೇವಸ್ಥಾನದಲ್ಲಿ ನಡೆದಿತ್ತು. ಹೆಗ್ಗೇರೆಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜುಲೈ 3 ರಂದು ವಾಸದ ಮನೆಯಲ್ಲಿ ಚಂದನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ಪತ್ತೆಯಾಗಿದೆ.
ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಪತ್ನಿ ಮಮತಾ, ಮೋಹನ್ ಕುಮಾರ್ ಅವರುಗಳೇ ಕಾರಣ. ಇಬ್ಬರೂ ಓಡಿ ಹೋಗಿದ್ದಾರೆ. ನನ್ನ ಜೀವನ ಹಾಳು ಮಾಡಿದ್ದಾರೆ. ಅವರನ್ನು ಸುಮ್ಮನೆ ಬಿಡಬೇಡಿ, ಮರ್ಯಾದೆ ತೆಗೆದಿದ್ದಾರೆ” ಎಂದು ಡೆತ್ ನೋಟ್ ನಲ್ಲಿ ಆರೋಪಿಸಲಾಗಿದೆ.
ಚಂದನ್ ತಾಯಿ ಎಸ್.ದಾಕ್ಷಾಯಿಣಿ ಅವರು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಮತಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಮೋಹನ್ ಕುಮಾರ್ ನನಗೆ ಅಣ್ಣನ ಸಮಾನ:
ಮೋಹನ್ ಕುಮಾರ್ ನನಗೆ ಅಣ್ಣನ ಸಮಾನ. ಅವರ ಜೊತೆಗೆ ಯಾವುದೇ ಸಂಬಂಧವನ್ನೂ ಹೊಂದಿಲ್ಲ ಎಂದು ಮಮತಾ ಅವರು ವಿಚಾರಣೆ ವೇಳೆ ಹೇಳುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ನಂತರ ಮೋಹನ್ ಕುಮಾರ್ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದರೆ ಅಸಲಿ ಬಣ್ಣ ಬಯಲಾಗುವುದು. ಸದ್ಯ ಮಮತಾರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೆ ಪೊಲೀಸ್ ಕಸ್ಟಡಿಗೆ ಒಳಪಡಿಸಲಾಗುವುದು ಎಂದು ಹೇಳಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


