ತುಮಕೂರು: ಸಂತಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರವು 2026-27ನೇ ಸಾಲಿನಲ್ಲಿ ಕಿರು ಅಧ್ಯಯನ ನಡೆಸಲು ತಲಾ ರೂ.1.50 ಲಕ್ಷಗಳಂತೆ ಫೆಲೋಶಿಪ್ ನೀಡುತ್ತದೆ.
ಕನಕದಾಸರ ಸಾಹಿತ್ಯದಲ್ಲಿ ಧರ್ಮ, ತತ್ತ್ವಪದಕಾರರ ಲೋಕಪ್ರಜ್ಞೆ ಮತ್ತು ಸಮಕಾಲೀನತೆ, ಭಾರತೀಯ ಭಕ್ತಿಮಾರ್ಗ ಮತ್ತು ತಳಸಮುದಾಯದ ಸಾಂತರು, ಕೀರ್ತನ ಸಾಹಿತ್ಯ ಮತ್ತು ಸಮುದಾಯ: ಪ್ರಸಾರ ಮತ್ತು ಪ್ರಭಾವದ ಬಹುಮುಖಿ ನೆಲೆಗಳು. ಈ ವಿಷಯಗಳ ಕುರಿತು ಅಧ್ಯಯನ ನಡೆಸಬೇಕು. 12 ತಿಂಗಳ ಅವಧಿಯ ಈ ಅಧ್ಯಯನ ಯೋಜನೆಯ ಬಗ್ಗೆ ಆಸಕ್ತ ಸಂಶೋಧನಾರ್ಥಿಗಳು ತಮ್ಮ ವಿದ್ಯಾರ್ಹತೆ, ಸಂಶೋಧನೆಯ ಬಗೆಗಿನ ಅನುಭವ ಹಾಗೂ ತಮ್ಮ ಆಸಕ್ತಿ ಕ್ಷೇತ್ರವನ್ನೊಳಗೊಂಡ ವಿವರಗಳನ್ನು ಹಾಗೂ ಆಯ್ಕೆ ಮಾಡಿಕೊಂಡ ವಿಷಯವನ್ನು ಕುರಿತು ಅಧ್ಯಯನ ವ್ಯಾಪ್ತಿ ಮತ್ತು ಆಕರ ಸಾಮಗ್ರಿಗಳನ್ನೊಳಗೊಂಡ ಸಂಕ್ಷಿಪ್ತ ಮಾಹಿತಿ ಇರುವ ಸಾರಲೇಖನವನ್ನು ಅರ್ಜಿಯೊಂದಿಗೆ ಲಗತ್ತಿಸಿರಬೇಕು. ಆಸಕ್ತಿ ಇರುವ 20 ರಿಂದ 55 ವರ್ಷ ವಯಸ್ಸಿನ ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು ಅರ್ಜಿಯನ್ನು ಅಧ್ಯಯನ ಕೇಂದ್ರ ಇ-ಮೇಲ್ ಗೆ ಅಥವಾ ಅಂಚೆ ಮೂಲಕ ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಆಗಸ್ಟ್ 28 ಕಡೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 6364529319 ಇಲ್ಲಿಗೆ ಸಂಪರ್ಕಿಸುವುದು. ತತ್ತ್ವಪದಕಾರರ ಅಧ್ಯಯನ ಕೇಂದ್ರದ ದೂರವಾಣಿ ಸಂಖ್ಯೆ 080-22113147 ಇಲ್ಲಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಸಂತಕವಿ ಕನಕದಾಸ ಮತ್ತು ತತ್ತ್ವಪದಕಾರ ಅಧ್ಯಯನ ಕೇಂದ್ರದ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


