ತುಮಕೂರು: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸವಿತಾ ಸಮಾಜದವರು ತಮ್ಮ ವೃತ್ತಿಯನ್ನು ಆಧುನೀಕರಣಗೊಳಿಸಿ ಲಾಭದಾಯಕ ಮಾಡಿಕೊಳ್ಳಲು ಪ್ರಯತ್ನಿಸಬೇಕು. ತಮ್ಮ ಮಕ್ಕಳಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಿ ಉತ್ತಮ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಸಲಹೆ ಮಾಡಿದರು.
ಜಿಲ್ಲಾ ಸವಿತಾ ಸಮಾಜದಿಂದ ಮಂಗಳವಾರ ನಗರದ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವತರಣ, ಹಿರಿಯ ವೃತ್ತಿದಾರರಿಗೆ ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಸವಿತಾ ಸಮಾಜದ ಕುಲಕಸುಬನ್ನು ಈಗ ಬೇರೆ ಸಮುದಾಯದವರೂ ಅವಲಂಬಿಸಿರುವುದು ಪೈಪೋಟಿ ಎದುರಿಸಬೇಕಾಗಿದೆ. ಕಾಲಕ್ಕೆ ತಕ್ಕಂತೆ ಆಧುನೀಕರಣಗೊಳಿಸಿಕೊಂಡು ವೃತ್ತಿ ಸವಾಲುಗಳನ್ನು ಎದುರಿಸಬೇಕೆಂದರು.
ಸವಿತಾ ಸಮಾಜದವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು, ಕೈಗಾರಿಕೆ, ಮಾರುಕಟ್ಟೆಯ ಬೇಡಿಕೆಗೆ ಪೂರಕವಾದ ಕೌಶಲ್ಯಾಧಾರಿತ ಶಿಕ್ಷಣ ನೀಡಿದರೆ ಅವರು ದುಡಿಮೆ ಮಾರ್ಗ ಕಂಡುಕೊಂಡು ಬದುಕು ರೂಪಿಸಿಕೊಳ್ಳುತ್ತಾರೆ. ಇದಕ್ಕಾಗಿ ಮಕ್ಕಳಿಗೆ ಪರಿಣತರ ಮಾರ್ಗದರ್ಶನ, ಉದ್ಯೋಗಾಧಾರಿತ ತರಬೇತಿ ನೀಡಲು ಹಿರಿಯರು ಒತ್ತು ನೀಡಬೇಕು ಎಂದು ಹೇಳಿದರು.
ಸವಿತಾ ಸಮಾಜ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಎಸ್. ಮುುತ್ತುರಾಜು ಮಾತನಾಡಿ, ಅಭಿವೃದ್ಧಿ ನಿಗಮದಿಂದ 50 ಜನರಿಗೆ ವಾಹನಸಾಲ, ಒಂದೂವರೆ ಸಾವಿರ ಜನರಿಗೆ ಸ್ವಯಂ ಉದ್ಯೋಗ ಆರಂಭಿಸಲು ಸಾಲ ನೀಡಲಾಗಿದೆ. ಅಲ್ಲದೆ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೊಳಾವಬಿ ಕೋರೆದು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸ ಸಕ್ಕೂ ನಿಗಮದಿಂದ ಸಹಾಯ ಮಾಡಲಾಗುತ್ತಿದೆ. ಇದರ ಸವಲತ್ತನ್ನು ಸಮಾಜ ಬಾಂಧವರು ಹೆಚ್ಚಿನ ದಾಗಿ ಸದುಪಯೋಗಡಿಸಿಕೊಳ್ಳಬೇಕು ಎಂದರು.
ಆಧ್ಯಾತ್ಮಿಕ ಚಿಂತಕರಾದ ಬ್ರಹ್ಮಶ್ರೀ ಪ್ರಭುಜಿ ಅವರು, ಸವಿತಾ ಸಮಾಜ ಅತಿ ಹಿಂದುಳಿದ ಸಮಾಜ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಸಂಘಟನೆ ಮುಖ್ಯ. ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಮಾಡಿಕೊಳ್ಳುವುದನ್ನು ಬಿಟ್ಟು, ಒಳ ಪಂಗಡಗಳ ಭೇದ ತ್ಯಜಿಸಿ ಸಮಾಜದ ವಿಕಸಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಸೂಕ್ಷ್ಮ ದೇವಲಪಸನ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ.ಚಿದಾನಂದ ಮಾತನಾಡಿ, ಸಣ್ಣ ಸಮುದಾಯಗಳು ರಾಜ ಕೀಯ ಶಕ್ತಿ ಬೆಳೆಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ಇಂತಹ ಸಮಾಜದ ಮುಖಂಡ ರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ನಗರ ಪಾಲಿಕೆ, ಗ್ರಾಮ ಪಂಚಾಯุಗಳಲ್ಲಿಯೂ ದರೂ ಸವಿತಾ ಸಮಾಜದವರಿಗೆ ಅವಕಾಶ ಕಲ್ಪಿಸಿ ಸಮಾಜವು ಮುಖ್ಯವಾ ಹಿನಿಗೆ ಬರಲು ನೆರವಾಗಬೇಕೆಂದರು.ಸವಿತಾ ಸಮಾಜದ ಜಿಲ್ಲಾ ಪ್ರತಿನಿಧಿ ಕೆ.ವಿ. ನಾರಾಯಣ್, ವಿಕ್ರೀ ವೆಂಚರ್ಸನ ರವೀಶ್ ಅರಕೆರೆ, ನಿವೃತ್ತ ಪ್ರಾಚಾರ್ಯ ಡಾ.ಕೆ.ಸಿ. ಬಸವರಾಜು, ರಾಜ್ಯ ಮೀಸಲಾತಿ ಹೋರಾಟ ಸಮಿತಿಯ ಕೆ.ಎಸ್. ರಘುನಾಥ್, ನಗರ ಜೆಡಿಎಸ್ ಮಹಾ ಸಮಾಜದ ಮಕ್ಕಳ ಶಿಕ್ಷಣಕ್ಕೆ ಸಂಘ ಹೆಚ್ಚು ಒತ್ತು ನೀಡುತ್ತಿದೆ. ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದ ಅವರು, ಸವಿತಾ ಸಮಾಜದ ಈ ಕಟ್ಟಡ ನಿರ್ಮಾಣದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ದೊಡ್ಡ ಮಟ್ಟದಲ್ಲಿ ಸಹಕಾರ ನೀಡಿದ್ದಾರೆ, ಹೆಚ್ಚಿನ ಪ್ರಮಾಣದಿಂದ ಅನುದಾನ ನೀಡಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.
— ಮಂಜೇಶ್ ಒಲಂಪಿಕ್, ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ
ಪ್ರಧಾನ ಕಾರ್ಯದರ್ಶಿ ಟಿ.ಸಿ. ಪ್ರಭಾಕರ್, ಮುಖಂಡರಾದ ಟಿ.ಎನ್. ಗೋವಿಂದ ರಾಜು, ಮುಕುಂದರಾಜ್, ಇಂದ್ರ ಕುಮಾರ್, ವೀರಭದ್ರಪ್ಪ, ದಾಸ್ ರಾಜು, ಸ್ವದೇಶಿ ವಿಶ್ವನಾಥ್, ವರದರಾಜು, ಸೀತಾ ರಾಮಯ್ಯ, ಎನ್.ಎಸ್. ಸುರೇಶ್, ಪಾರ್ಥ ಸಾರಥಿ, ಮೆಲಕಾಪ್ಪ, ಲೋಕೇಶ್, ಶಿವಕುಮಾರ್, ಗಂಗಾಧರ್, ಹರೀಶ್, ಉಮೇಶ್ ಭಾಗವಹಿಸಿದ್ದರು. ಈ ವೇಳೆ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿ ಪ್ರೋತ್ಸಾಹಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
